Greenfield airport: ಶಬರಿಮಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಹಸಿರು ನಿಶಾನೆ!

Share the Article

Greenfield airport : ಹಲವು ವರ್ಷಗಳ ಬಳಿಕ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಶಬರಿಮಲೆಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ (Greenfield airport) ನಿರ್ಮಿಸುವ ಪ್ರಸ್ತಾವಕ್ಕೆ ಕೇಂದ್ರ ಸರಕಾರವು ಹಸಿರು ನಿಶಾನೆ ನೀಡಿದೆ.ಈ ಮೂಲಕ ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ ನೀಡಿದೆ.

ನಾಗರಿಕ ವಿಮಾನಯಾನ ಸಚಿವಾಲಯವು ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನಕ್ಕೆ ಸನಿಹದಲ್ಲಿರುವ ಕೊಟ್ಟಾಯಂ ಪ್ರದೇಶದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗೆ ಹಸಿರು ನಿಶಾನೆ ನೀಡಿದ್ದು ಇದಕ್ಕಾಗಿ ಕೇರಳದ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ನಡುವೆ ಕೆಲವು ಸುತ್ತಿನ ಮಾತುಕತೆ ನಡೆದ ಬಳಿಕ ನಿರ್ಧಾರ ಕೈಗೊಂಡಿದೆ. ಇದರ ಅಭಿವೃದ್ಧಿಗಾಗಿ ಅಂದಾಜು 2,250 ಎಕರೆ ಭೂಪ್ರದೇಶವನ್ನು ಮೀಸಲಿರಿಸಿದೆ. ಈ ಯೋಜನೆಯನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ ನಿರ್ಮಿಸುವ ಗುರಿ ಹೊಂದಿದ್ದು ಈ ಯೋಜನೆಗೆ ಸುಮಾರು 4,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಕೇರಳ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ತಿಳಿಸಿದೆ.

ಸೋಮವಾರ ಸಂಜೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗಾಗಿ ಕೊಟ್ಟಾಯಂನಲ್ಲಿ ಸ್ಥಳಕ್ಕೆ ಅನುಮೋದನೆ ನೀಡಿದ್ದು, ಇದು ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿನ ಶಬರಿಮಲೆ ದೇವಸ್ಥಾನದಿಂದ 45 ಕಿ.ಮೀ ದೂರದಲ್ಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಹಿಂದೆ ಗ್ಯಾಂಗ್ ಸ್ಟರ್ ಗಳು ಯುಪಿಗೆ ಅಪಾಯಕಾರಿಯಾಗಿದ್ದರು, ಈಗ ಅವರಿಗೆ ಉತ್ತರಪ್ರದೇಶ ಅಪಾಯಕರವಾಗಿದೆ – ಸಿಎಂ ಯೋಗಿ ಆದಿತ್ಯನಾಥ್

Leave A Reply