Dr B.R Ambedkar: ಅಂಬೇಡ್ಕರ್ ಚಿತ್ರ ಇರುವ ಪ್ಲೇಟ್ ನಲ್ಲಿ ಊಟ ಮಾಡಿದ ಪ್ರಕರಣ: ಕೇಸು ದಾಖಲು

Dr B.R Ambedkar : ಬಿ. ಆರ್ ಅಂಬೇಡ್ಕರ್ (B.R Ambedkar) ಒಬ್ಬ ರಾಜಕೀಯ ನಾಯಕರಾಗಿದ್ದು, ಸಂವಿಧಾನ ಸಭೆಯ ಚರ್ಚೆಗಳಿಂದ ಭಾರತದ ಸಂವಿಧಾನವನ್ನು ರಚಿಸುವ ಸಮಿತಿಯ ನೇತೃತ್ವ ವಹಿಸಿದವರು ಹಾಗೆಯೇ ಮೊದಲ ಕ್ಯಾಬಿನೆಟ್‌ನಲ್ಲಿ (cabinet) ಕಾನೂನು ಮತ್ತು ನ್ಯಾಯ ಮಂತ್ರಿಯಾಗಿ ನಿಷ್ಠೆ ಇಂದ ಸೇವೆ ಸಲ್ಲಿಸಿದವರು ಎಂದು ಹೇಳಿದರು ತಪ್ಪಾಗಲ್ಲ. ದಲಿತ ಬೌದ್ಧ ಚಳುವಳಿಯನ್ನು ಪ್ರಾರಂಭಿಸಿ ಪ್ರೇರೇಪಿಸಿದವರು. ಇಂತಹ ಒಳ್ಳೆ ಕೆಲಸವನ್ನು ಮಾಡಿದ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಹಿಡಿದು ಕೊಂಡು ಈ ಹೋಟೆಲ್ ಒಂದು ಏನು ಮಾಡಿದೆ ನೋಡಿ. ಇದನ್ನ ನೋಡಿದ್ರೆ ನೀವೇ ಒಮ್ಮೆ ಬೆಚ್ಚಿ ಬೀಳ್ತೀರಿ

 

ಅದೇನಪ್ಪಾ ಅಂದ್ರೆ, ನಾವೆಲ್ಲರೂ ಹೋಟೆಲ್(hotel) ನಲ್ಲಿ ಸ್ಟೀಲ್ ಪ್ಲೇಟ್(steel plate) ನ ಮೇಲೆ ಊಟ ಕೊಡುವುದನ್ನು ನಾವು ನೋಡಿದ್ದೇವೆ ಆದರೆ ಇಲ್ಲೊಂದು ಪೇಪರ್ ಪ್ಲೇಟ್ ಒಂದರ ಮೇಲೆ ಊಟವನ್ನು ಕೊಡುತ್ತಿದ್ದಾರೆ ಅದರಲ್ಲೂ ಟ್ವಿಸ್ಟ್ ಏನಪ್ಪ ಅಂದ್ರೆ ಅ ಪ್ಲೇಟ್ ನಲ್ಲಿ ಬಿ.ಆರ್. ಅಂಬೇಡ್ಕರ್(B.R Ambedkar) ಅವರ ಭಾವಚಿತ್ರ ಇದ್ದು ಸಹ ಹೋಟೆಲ್ ಒಂದು ಊಟ ಬಡಿಸಲು ಮುಂದಾಗಿದೆ. ಈ ಕಾರಣಕ್ಕಾಗಿ ಹೋಟೆಲ್ ಒಂದರ ಮೇಲೆ ಆಂಧ್ರಪ್ರದೇಶ(Andhrapradesh) ಪೊಲೀಸರು ಎಸ್ಸಿ (SC)ಮತ್ತು ಎಸ್ಟಿ (ST)ಕಾಯ್ದೆಯ ಅಡಿಯಲ್ಲಿ ಕೇಸ್(case) ಹಾಕಿ ಅವರನ್ನು ಬಂಧಿಸಲಾಗಿದೆ. ಎಂಬ ಮಾಹಿತಿ ಪರಿಶಿಷ್ಟ ಜಾತಿಗಳ(appendix caste)ರಾಷ್ಟ್ರೀಯ ಆಯೋಗ ತಿಳಿಸಿಕೊಟ್ಟಿದೆ. ಇಷ್ಟನ್ನು ಕೇಳಿದ ಬಳಿಕ ಆ ಹೋಟೆಲ್ ಒಂದಾದರೂ ಯಾವುದೂ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು

ಕೋನಸೀಮಾ ಜಿಲ್ಲೆಯಲ್ಲಿ (Konaseema district)ಇರುವ ಹೋಟೆಲ್ ಒಂದರಲ್ಲಿ ಅಂಬೇಡ್ಕರ್(Ambedkar) ಅವರ ಭಾವಚಿತ್ರವನ್ನು ಬಳಸಿ ಪೇಪರ್ ಒಂದರ ಪ್ಲೇಟ್ ನಲ್ಲಿ ಬಂದ ಜನಗಳಿಗೆ ಊಟವನ್ನು ಬಡಿಸುತ್ತಿದ್ದರು ಎಂದು ಪರಿಶಿಷ್ಟ ಜಾತಿಗಳ (appendix caste)ರಾಷ್ಟ್ರೀಯ ಆಯೋಗ ಕಳೆದ ವರ್ಷ ಅಂದರೆ ಜುಲೈ 8 ರಂದು ಟ್ವಿಟರ್(Twitter) ಮೂಲಕ ಈ ರೀತಿಯ ದೂರು ನೀಡಿದ್ದರು. ಹೋಟೆಲ್ ಮಾಲೀಕನ ಈ ವರ್ತನೆಗೆ ದಲಿತ ಸಂಘಟನೆಕಾರರು ಪ್ರತಿಭಟನೆ ನಡೆಸಲು ಮುಂದಾದರು ಆದರೆ ಹೋಟೆಲ್ ಮಾಲೀಕರು ಪ್ರತಿಭಟನೆಕಾರರ ವಿರುದ್ಧ ದಲಿತ ಸಂಘಟನಾಗಾರರು ನಮ್ಮ ಮೇಲೆ ದೌರ್ಜನ್ಯವನ್ನು ಮಾಡುತ್ತಿದ್ದಾರೆ ಎಂದು ಕೇಸ್ ದಾಖಲೆ ಮಾಡಿದರು.

ಪೊಲೀಸರು (police)ಇದರ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಂಡು ವಿಚಾರಣೆ ನಡೆಸಿದಾಗ ಇದರ ನಿಜಾಂಶವೇನೆಂದು ಅವರಿಗೆ ತಿಳಿದು ಬಂತು. ಈ ಹೋಟೆಲ್ ಒಂದರ ಮಾಲೀಕ ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರದಲ್ಲಿ ಊಟವನ್ನು ಬಡಿಸುತ್ತಿದ್ದರು ಎಂಬ ಮಾಹಿತಿ ಖಚಿತವಾಯಿತು. ಈ ಆಧಾರದ ಮೇಲೆ ಹೋಟೆಲ್ ಮಾಲೀಕನನ್ನು ಐಪಿಸಿ ಸೆಕ್ಷನ್(IPC section) 295 ಎ ಅ ಡಿಯಲ್ಲಿ ಅರೆಸ್ಟ್ (arrest)ಮಾಡಲಾಯಿತು. ಎನ್ಸಿಎಸ್ಸಿ ಅಧ್ಯಕ್ಷ ವಿಜಯ್ ಸಂಪ್ಲಾ(Vijay sampla) ಅವರು ಈ ಮಾತನ್ನು ತಿಳಿಸಿಕೊಟ್ಟಿದ್ದಾರೆ.

 

ಇದನ್ನು ಓದಿ : India’s Happiest State: ಭಾರತದ ಸಂತೋಷದಿಂದ ತುಂಬಿ ತುಳುಕೋ ರಾಜ್ಯ ಇದು!

Leave A Reply

Your email address will not be published.