Beer: ಸುಡು ಬಿಸಿಲು, ಏರಿದ ಎಲೆಕ್ಷನ್ ಕಾವು – ನೊರೆಯಾಗಿ ಉಕ್ಕಿದೆ ಬೀರು: ಮಾರಾಟ ಪೂರೈಕೆಯಲ್ಲಿ ಏರು ಪೇರು !

Beer in the election: ಕರ್ನಾಟಕದಲ್ಲಿ ಬಿಯರ್ ಉತ್ಪಾದನೆ ಮತ್ತು ಸೇವನೆ (Beer Production) ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 45 ರಷ್ಟು ಹೆಚ್ಚಾಗಿದೆಯಂತೆ. ಈ ಬಿಯರ್ ಮಾರಾಟ ಹೆಚ್ಚಳಕ್ಕೆ ಬಿಸಿಲ ಝಳವೇ (Heat Wave in Karnataka) ಮುಖ್ಯ ಕಾರಣ ಎನ್ನಲಾಗಿದೆ. (Increase in beer Sales)

ಎಲ್ಲೆಡೆ ಸುಡು ಬಿಸಿಲು ಏರುತ್ತಿದೆ. ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಈಗ 45 ಡಿಗ್ರಿ ಸೆಲ್ಷಿಯಸ್ ದಾಟಿದೆ. ಜನರು ತಣ್ಣಗಿನ ಬಿಯರಿಗೆ ತಡಕಾಡುತ್ತಿದ್ದಾರೆ. ಸುಡುಬಿಸಿಲಿನಲ್ಲಿ ಕೋಲ್ಡ್‌ ಬಿಯರ್ (Chilled Beer) ಸವಿಯಲು ಜನರು ಇಷ್ಟಪಡುತ್ತಿದ್ದಾರೆ ಎನ್ನುತ್ತಿದೆ ಒಂದು ವರದಿ.

ಇದರ ಜೊತೆಗೆ ವಿಧಾನಸಭೆ ಚುನಾವಣೆ (Karnataka Assembly Elections 2023) ಘೋಷಣೆಯ ನಂತರ ಚುನಾವಣಾ ಕಾವು. ಅಲ್ಲದೆ ಚುನಾವಣೆ ಉಂಟು ಮಾಡಿದ ಕ್ಯಾಷ್ ಫ್ಲೋ ! ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಿಜೋರಿ ಬಿಚ್ಚುತ್ತಿದ್ದು ಹಣದ ಹರಿವು ಹೊರಕ್ಕೆ ಬರುತ್ತಿದೆ. ದುಡ್ಡು ಜನರ ಬಳಿ ಬರ್ತಿದೆ. ಕೇವಲ ಇಂದಿನ ಸುಖದ ನಿರೀಕ್ಷೆಯಲ್ಲಿರುವ ಮಂದಿ ಮದ್ಯದ ಮೊರೆ ಹೋಗುತ್ತಿದ್ದಾರೆ. ಹಾಗೆ ಕ್ರೇಟುಗಟ್ಟಲೆ ಬಿಯರು (Beer in the election)ಸೇಲ್ ಆಗಿ, ನೊರೆ ಉಕ್ಕಿಸುತ್ತಿದೆ.

ಮೊನ್ನೆ ಮಾರ್ಚ್ 31ಕ್ಕೆ ಅಂತ್ಯಗೊಂಡ 22-23 ರ ಹಣಕಾಸು ವರ್ಷದಲ್ಲಿ l 390.66 ಲಕ್ಷ ಕಾರ್ಟನ್‌ ಬಾಕ್ಸ್‌ಗಳಷ್ಟು (Lakh Carton Boxes – lcb) ಬಿಯರ್‌ ಮಾರಾಟ ಆಗಿತ್ತು. 2021-22 ರಲ್ಲಿ ಇದರ ಪ್ರಮಾಣ 268.83 ಎಲ್‌ಸಿಬಿ ಇತ್ತು. ಹೆಚ್ಚುವರಿಯಾಗಿ ಮಾರಾಟವಾಗಿರುವ 121.83 ಎಲ್‌ಸಿಬಿ ಬಿಯರ್‌ನಿಂದ ಕರ್ನಾಟಕದ ಬೊಕ್ಕಸಕ್ಕೆ 800 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಆಗಿದೆ. 2019-20ರ ಅವಧಿಯಲ್ಲಿ ಕೊವಿಡ್ ಪಿಡುಗಿನ ಹಿಡಿತಕ್ಕೆ ಭಾರತ ಸಿಲುಕಿತ್ತು. ಈ ಅವಧಿಯಲ್ಲಿ ಆರ್ಥಿಕ ಹಿಂಜರಿತದ ವಾತಾವರಣವಿದ್ದರೂ ಬಿಯರ್ ಮಾರಾಟ ಮಾತ್ರ ಹೆಚ್ಚಾಗಿತ್ತು ಎನ್ನುವುದು ದೊಡ್ಡ ಕುತೂಹಲದ ಅಂಶ. 2017-18 ರಲ್ಲಿ 265.77 ಎಲ್‌ಸಿಬಿ ಬಿಯರ್ ಮಾರಾಟವಾಗಿದ್ದರೆ, 2018-19 ರಲ್ಲಿ ಬಿಯರ್ ಮಾರಾಟದ ಪ್ರಮಾಣ 300.85 ಕ್ಕೆ ಮುಟ್ಟಿತ್ತು.

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಿಯರ್‌ ಮೇಲಿನ ತೆರಿಗೆ ಕಡಿಮೆ ಇದೆ. ರಾಜ್ಯದಲ್ಲಿ ಬಿಯರ್‌ ಮಾರಾಟ ಹೆಚ್ಚಾಗಲು ಇದು ಮುಖ್ಯ ಕಾರಣ. ‘ ನಮ್ಮಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಬಿಯರ್ ಉತ್ಪಾದನೆ, ಮಾರಾಟ ಆರಂಭಿಸಿರುವುದರಿಂದ ಗ್ರಾಹಕರಿಗೂ ಹೆಚ್ಚಿನ ಆಯ್ಕೆಗಳು ಸಿಕ್ಕಿವೆ. ಕಿಂಗ್ಫಿಶರ್ ನೌಕೌಟ್ ಎಂಬ ಎರಡು ಅತಿಯಾಗಿ ಮಾರಾಟವಾಗುವ ಬ್ರಾಂಡ್ ಗಳ ಜೊತೆಗೆ ಇದೀಗ ಹಲವಾರು ಬೀರು ಬ್ರಾಂಡುಗಳು ತಮ್ಮ ಅಸ್ತಿತ್ವವನ್ನು ಕಂಡುಕೊಂಡಿವೆ. ಬಿಯರ್ ಮಾರಾಟ ಹೆಚ್ಚಲು ಇದೂ ಸಹ ಒಂದು ಕಾರಣ’ ಎನ್ನುತ್ತಾರೆ ಸ್ಟ್ಯಾಟಿಸ್ಟಿಕ್ಸ್ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಸ್.ಶಿವಯ್ಯ ಎಂದು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ವರದಿ ಮಾಡಿದೆ.

ಚುನಾವಣೆ ಘೋಷಣೆಯಾದ ಬಳಿಕ ಕರ್ನಾಟಕದಲ್ಲಿ ಕೂಡಾ ಅಕ್ರಮ ಮದ್ಯದ ಹಂಚಿಕೆ ಅಧಿಕವಾಗಿದೆ. ಚಾಮರಾಜನಗರದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 9,012 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೊತ್ತ 14.65 ಲಕ್ಷ ಎಂದು ಅಂದಾಜಿಸಲಾಗಿದೆ.

 

ಇದನ್ನು ಓದಿ : Pushpa movie director Sukumar: ಪುಷ್ಪ’ ಸಿನಿಮಾ ನಿರ್ದೇಶಕ, ನಿರ್ಮಾಪಕರ ಮನೆ, ಕಚೇರಿ ಮೇಲೆ ಐಟಿ ದಾಳಿ

Leave A Reply

Your email address will not be published.