Kolar: ಸಿಂಗರಿಸಿದ ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ 60ರ ಅಜ್ಜಿ!
Kolar; ರಾಜ್ಯದಲ್ಲಿ ವಿಧಾನಸಭೆ ಚುನಾವಣೆ(Assembly Election) ಪ್ರಯುಕ್ತ ವಿವಿಧ ಪಕ್ಷಗಳ ಟಿಕೆಟ್ ಘೋಷಿತ ಅಭ್ಯರ್ಥಿಗಳು ತಮ್ಮ ಅಪಾರ ಅಭಿಮಾನಿಗಳೊಂದಿಗೆ ಬಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಟಿಕೆಟ್ ಸಿಗದೆ ವಂಚಿತರಾದ ಕೆಲವರು ಪಕ್ಷ ತೊರೆದು ಪಕ್ಷೇತರವಾಗಿ ಕಣಕ್ಕಿಳಿಯಲು ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬಳು 60 ವರ್ಷದ ಮಹಿಳೆ ಪಕ್ಷೇತರವಾಗಿ ತಾನು ಚುನಾವಣೆಗೆ ನಿಲ್ಲಲು ಇಚ್ಛಿಸಿದ್ದು ತನ್ನೂರಿನಿಂದ ಎತ್ತಿನ ಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿ ಸಾಕಷ್ಟು ಸುದ್ಧಿಯಾಗುತ್ತಿದ್ದಾಳೆ.
ಹೌದು, ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೋಲಾರ(Kolar) ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ(Amluru Assembly) ಪಕ್ಷೇತರ ಅಭ್ಯರ್ಥಿಯಾಗಿ 60 ವರ್ಷದ ನಾರಾಯಣಮ್ಮ ಎಂಬ ವೃದ್ದ ಮಹಿಳೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ನಾರಾಯಣಮ್ಮ ಅವರು ಕೇವಲ ನಾಮಪತ್ರ ಸಲ್ಲಿಸಿದ್ದರೆ ಭಾರೀ ಸುದ್ದಿ ಆಗ್ತಿರಲಿಲ್ಲವೇನೋ, ಆದ್ರೆ 60 ವರ್ಷದ ನಾರಾಯಣಮ್ಮ(Narayanamma) ಎತ್ತಿನಬಂಡಿ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ವಿಭಿನ್ನವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಎತ್ತಿನಗಾಡಿಯ ಮೇಲೆ ಆಗಮಿಸುವ ವಿಡಿಯೋ, ಫೋಟೋಗಳು ಕೋಲಾರದಲ್ಲಿ ವೈರಲ್ ಆಗುತ್ತಿವೆ.
ಎತ್ತಿನಗಾಡಿಗೆ ಬಾಳೆಮರ ಕಟ್ಟಿ, ಹೂಗಳಿಂದ ಸಿಂಗರಿಸಿ, ತಮಟೆ ವಾದ್ಯಗಳ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ಕುಟುಂಬದವರ ಜೊತೆಗೂಡಿ ನಾರಾಯಣಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದು ಇಡೀ ಕೋಲಾರ ಜನತೆಯ ಗಮನ ಸೆಳೆದಿದೆ.
ಅಂದಹಾಗೆ ನಾರಾಯಣಮ್ಮ ಅವರ ಮಗಳು ನ್ಯಾಯಾಧೀಶರಾಗಿದ್ದಾರೆ. ನನ್ನ ಮಗಳು ನ್ಯಾಯಾಧೀಶರಾಗಿರುವುದು ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಂಬಂಧವಿಲ್ಲ. ನನಗೆ ಹಣಬಲ ಇಲ್ಲದಿದ್ದರೂ ಚುನಾವಣೆ ಎದುರಿಸುತ್ತೇನೆ. ಜೊತೆಗೆ ಮಾಲೂರು ತಾಲೂಕಿನ ಸಮಗ್ರ ಅಭಿವೃದ್ದಿಗಾಗಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದಾಗಿ 60 ವರ್ಷದ ನಾರಾಯಣಮ್ಮ ತಿಳಿಸಿದ್ದಾರೆ.
ಇದನ್ನೂ ಓದಿ : Kargil bomb: 24 ವರ್ಷಗಳ ನಂತರ ಸ್ಪೋಟಗೊಂಡ ಕಾರ್ಗಿಲ್ ಯುದ್ಧದ ಬಾಂಬ್ !