Air India: ಪೈಲೆಟ್ ಗಳಿಗೆ ಇಷ್ಟು ಲಕ್ಷ ಸ್ಯಾಲರಿ ಇದ್ಯಾ, ಪರಿಷ್ಕೃತ ಏರ್ ಇಂಡಿಯಾ ಸಂಬಳ ಕೇಳಿದ್ರೆ ಬೆರಗಾಗ್ತೀರ !

Air India : ಇದೀಗ ಎಲ್ಲಾ ಕೆಲಸದಲ್ಲಿ ಜನರು ವೇತನ (salary)ಹೆಚ್ಚು ಮಾಡಿ ಅನ್ನೋ ಮಾತು ಕೇಳೋದು ನಿಮಗೆಲ್ಲಾ ಗೊತ್ತೇ ಇದೆ. ಹಲವಾರು ಜನ ವೇತನ ಹೆಚ್ಚು ಮಾಡಲು ಸೆನಸಾಡುತ್ತಿದ್ದಾರೆ. ಇದೀಗ ಏರ್‌ ಇಂಡಿಯಾವು (Air India) ತನ್ನ ಪೈಲಟ್‌ (pilots ) ಮತ್ತು ಕ್ಯಾಬಿನ್‌ ಸಿಬ್ಬಂದಿಗಳ (cabin crews) ವೇತನವನ್ನು ಏಪ್ರಿಲ್‌ 1ರಿಂದ ನಿಷೇಧಿಸಿದೆ. ಹಾಗಾದರೆ ಏರ್ ಇಂಡಿಯಾದಲ್ಲಿ ಪೈಲೆಟ್ ಮತ್ತು ಕ್ಯಾಬೀನ್ ಸಿಬ್ಬಂದಿಗಳು ಎಷ್ಟು ಹಣ ದುಡಿತಾರೆ ಅಂತ ನಿಮಗೆ ಗೊತ್ತಾ. ಇಲ್ಲಿದೆ ನೋಡಿ ಅದರ ಸಂಪೂರ್ಣ ಮಾಹಿತಿ

 

ಹೌದು, ಟಾಟಾ ಗ್ರೂಪ್ ಬೆಂಬಲಿತ ಏರ್‌ಲೈನ್‌ನಲ್ಲಿ ಕೆಲಸ ಮಾಡುವ ಪೈಲಟ್‌ಗೆ (pilot) ಕನಿಷ್ಠ ವೇತನವು ತಿಂಗಳಿಗೆ 50,000 ರೂಪಾಯಿ ಇರುತ್ತದೆ. ಹಾಗೆಯೇ ಗರಿಷ್ಠ ವೇತನ ತಿಂಗಳಿಗೆ 8.5 ಲಕ್ಷ ರೂಪಾಯಿ ತನಕ ಇರುತ್ತದೆ. ಇವರ ವೇತನದ ಮೇಲೆ ಯಾವ ರೀತಿ ಪರಿಣಾಮ ಬೀಳುತ್ತದೆ ಅಂದ್ರೆ ಪೈಲಟ್‌ಗಳು ಕೆಲಸ (work) ಮಾಡುವ ವಿಭಾಗ ಮತ್ತು ಅವರು ಎಷ್ಟು ಗಂಟೆ ಹಾರಾಟ ನಡೆಸಬೇಕಿದೆ ಹಾಗೇ ಇನ್ನೂ ಹಲವಾರು ಅಂಶಗಳು ಮುಖ್ಯವಾಗುತ್ತದೆ. ಇನ್ನು ಕ್ಯಾಬಿನ್‌(cabin) ಸಿಬ್ಬಂದಿಗೆ ತಿಂಗಳಿಗೆ ಕನಿಷ್ಠ 25,000 ರೂಪಾಯಿ ವೇತನವನ್ನು ನೀಡುದೆಂದು ನಿರ್ಧರಿಸಲಾಗಿದೆ. ಕೆಲಸದಲ್ಲಿ ಯಾವ ರೀತಿ ಕೆಲಸ ಮಾಡುತ್ತಾರೆ ಮಾತು ಅವರ ಅನುಭವ ಆಧರಿಸಿ ಅವರು ಗರಿಷ್ಠ 78,000 ರೂಪಾಯಿ ವರೆಗೆ ವೇತನವನ್ನು ನೀಡುತ್ತದೆ.

ಏರ್‌ ಇಂಡಿಯಾದ ಪರಿಷ್ಕೃತ ವೇತನ ಯಾವ ರೀತಿ ಇದೆ ಎಂಬುದಕ್ಕೆ ಒಮ್ಮೆ ಕಣ್ಣು ಹಾಯಿಸಿ ನೋಡಿ.

ಪೈಲಟ್‌ ವೇತನ ಎಷ್ಟರ ಮಟ್ಟಿಗೆ ಇದೇ ನೋಡಿ.

ಪೈಲಟ್‌ ಯಾವ ಹಂತದ ಉದ್ಯೋಗಿ ಎನ್ನುವ ಆಧಾರದಲ್ಲಿ ಅವರಿಗೆ ವೇತನವನ್ನು ನೀಡುತ್ತಾರೆ. ತರಬೇತಿಯನ್ನು ತೆಗೆದುಕೊಳ್ಳುವವರು ತಿಂಗಳಿಗೆ 50,000 ರೂ. ಲೈನ್ ಬಿಡುಗಡೆಯ ನಂತರ ಜೂನಿಯರ್ ಫಸ್ಟ್ ಆಫೀಸರ್‌ಗಳು 1 ವರ್ಷದವರೆಗೆ ತಿಂಗಳಿಗೆ 2.35 ಲಕ್ಷ ರೂ. ಪಡೆಯುತ್ತಾರೆ. ಫಸ್ಟ್‌ ಆಫೀಸರ್‌ ತಿಂಗಳಿಗೆ 3.45 ಲಕ್ಷ ರೂಪಾಯಿಗಳನ್ನು ನೀಡುತ್ತಾರೆ. ಆದರೆ ಕ್ಯಾಪ್ಟನ್ (SFO) ಅಂದರೆ ATPL ಹೊಂದಿರುವ ಮೊದಲ ಅಧಿಕಾರಿಯು ತಿಂಗಳಿಗೆ ಬರೋಬ್ಬರಿ 4.75 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ.

ಏರ್ ಇಂಡಿಯಾದಲ್ಲಿ, ಮೇಲಿನ ವಿಭಾಗದಲ್ಲಿ ಕೆಲಸ ಮಾಡುವ ಕ್ಯಾಪ್ಟನ್/ಎಸ್‌ಎಫ್‌ಒ (SFO)ಆಗಿರುವ ಕಮಾಂಡರ್ ಗಳಿಗೆ ಕಂಪನಿಯ P1 ರೇಟಿಂಗ್ ಪಡೆದಿದ್ದರೆ, ತಿಂಗಳಿಗೆ 7.50 ಲಕ್ಷ ರೂ. ವೇತನ ತೆಗೆದುಕೊಳ್ಳಲು ಅವರು ಅರ್ಹರಾಗಿರುತ್ತಾರೆ. ಕಂಪನಿಯ(company) ವಿಮಾನ ಮಾದರಿಗೆ ತಕ್ಕಂತೆ 4 ವರ್ಷಗಳಿಗಿಂತ ಹೆಚ್ಚು P1 ರೇಟಿಂಗ್ ಹೊಂದಿದ್ದು ಮೊದಲಿಂದಲೂ ಕೆಲಸ ಮಾಡುತ್ತ ಬಂದಿದ್ದರೆ ಅಂದರೆ ಅವರು ಹಿರಿಯ ಕಮಾಂಡರ್ ಆಗಿದ್ದು ಅವರಿಗೆ ತಿಂಗಳಿಗೆ 8.50 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ.

ಕ್ಯಾಬಿನ್ ಸಿಬ್ಬಂದಿ ವೇತನವೆಷ್ಟು ಗೊತ್ತಾ?

ಕ್ಯಾಬಿನ್ ಸಿಬ್ಬಂದಿ ವೇತನ ಎಸ್ಟಿರ ಬಹುದು ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ. ಇಲ್ಲಿದೆ ನೋಡಿ, ಟ್ರೇನಿಂಗ್‌ ಹಂತದಲ್ಲಿರುವ ಕ್ಯಾಬಿನ್‌ ಕ್ರ್ಯೂಗೆ(cabin crew) ತಿಂಗಳಿಗೆ 25,000 ರೂಪಾಯಿ ವೇತನ ಇರುತ್ತೆ.ಅವರ ತರಬೇತಿ ಮುಗಿದ ನಂತರ ಅನುಭವ ಸಿಬ್ಬಂದಿಗೆ ತಿಂಗಳಿಗೆ 30,000 ರೂಪಾಯಿ ಸ್ಟೈಫಂಡ್‌ ಇರುತ್ತದೆ. ಬಳಿಕ ಅನುಭವಿ ಕ್ಯಾಬಿನ್(cabin) ಸಿಬ್ಬಂದಿಗೆ ತಿಂಗಳಿಗೆ 53,000 ರೂ., ಹಿರಿಯ ಕ್ಯಾಬಿನ್ ಸಿಬ್ಬಂದಿಗೆ ತಿಂಗಳಿಗೆ 64,000 ರೂ. ಮತ್ತು ಎಕ್ಸಿಕ್ಯೂಟಿವ್(executive) ಕ್ಯಾಬಿನ್ ಸಿಬ್ಬಂದಿಗೆ ತಿಂಗಳಿಗೆ 78,000 ರೂ. ಇರುತ್ತದೆ.

90+ ಗಂಟೆಗಳ ನಡುವಿನ ಹಾರಾಟದ ಅವಧಿಗೆ, ಕ್ಯಾಬಿನ್ ಸಿಬ್ಬಂದಿಗೆ 375 ರೂ.ನಿಂದ 750 ರೂ.ವರೆಗೆ ಅವರಿಗೆ ಹಾರುವ ಭತ್ಯೆಗಳು ಸಿಗುತ್ತವೆ. ಹಿರಿಯ ಕ್ಯಾಬಿನ್ ಸಿಬ್ಬಂದಿಗೆ 475 ರೂ.ನಿಂದ 950 ರೂ.ವರೆಗೆ ಮತ್ತು ಎಕ್ಸಿಕ್ಯೂಟಿವ್ ಕ್ಯಾಬಿನ್‌ ಸಿಬ್ಬಂದಿಗೆ 525 ರೂ.ನಿಂದ 1,050 ರೂ.ವರೆಗೆ ಭತ್ಯೆ ಇರುತ್ತದೆ.

ಖಾಯಂ ಕ್ಯಾಬಿನ್ ಸಿಬ್ಬಂದಿಗೆ, ಸಾಮಾನ್ಯ ಭತ್ಯೆ 0-60 ಗಂಟೆಗಳ ಹಾರಾಟಕ್ಕೆ 300 ರೂ. ಇರುತ್ತದೆ. 65-70 ಗಂಟೆಗಳವರೆಗಿನ ಹಾರಾಟಕ್ಕೆ 375 ರೂ. ಇರುತ್ತದೆ. ಹಿರಿಯ ಮಟ್ಟದ ಕ್ಯಾಬಿನ್‌ ಸಿಬ್ಬಂದಿಗೆ 0-65 ಗಂಟೆಗಳವರೆಗೆ ಹಾರಾಟಕ್ಕೆ 400 ರೂ.ನಿಂದ 650 ರೂ.ವರೆಗೆ ಕ್ಯಾಬಿನ್ ಸಿಬ್ಬಂದಿ ಭತ್ಯತೆಯನ್ನು ಪಡೆಯುತ್ತಾನೆ. 65-70 ಗಂಟೆಗಳ ಹಾರಾಟಕ್ಕೆ 525 ರೂ.ನಿಂದ 700 ರೂ. ಭತ್ಯೆ ಪಡೆಯುತ್ತಾರೆ. ಖಾಯಂ ಆಗಿ ಕೆಲಸ ಮಾಡುವ ಕ್ಯಾಬಿನ್ ಕಾರ್ಯನಿರ್ವಾಹಕರು 0-65 ಗಂಟೆಗಳ ಹಾರಾಟಕ್ಕೆ 650 ರಿಂದ 1,245 ರೂ.ವರೆಗೆ ಮತ್ತು 65-70 ಗಂಟೆಗಳ ಹಾರಾಟಕ್ಕೆ 700 ರೂ.ನಿಂದ 1,275 ರೂ.ವರೆಗೆ ಭತ್ಯೆ ಪಡೆಯುತ್ತಾರೆ.

 

ಇದನ್ನು ಓದಿ : Pan card: Pan card ದಾರರಿಗೆ ಸರ್ಕಾರ 15000 ರೂ. ಕೊಡುತ್ತೆ : Fact Check ಏನು ಹೇಳುತ್ತೆ ?

Leave A Reply

Your email address will not be published.