Benefits of Papaya: ಕಡಿಮೆ ದಿನದಲ್ಲಿ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಬೇಕೆ? ಹಾಗಿದ್ರೆ ಈ ರೀತಿಯಾಗಿ ತಿನ್ನಿ ಪಪ್ಪಾಯ!

Benefits of Papaya: ಜೀವನಶೈಲಿ ಮತ್ತು ಆಹಾರದ ಕಳಪೆ ವಿಧಾನದಿಂದ ಹಲವು ಆರೋಗ್ಯ ಸಮಸ್ಯೆ ಎದುರಾಗುತ್ತವೆ. ಅದರಲ್ಲಿ ಸ್ಥೂಲಕಾಯ, ತೂಕ ಹೆಚ್ಚಾಗುವುದು ಮತ್ತು ಬೊಜ್ಜು ಸಮಸ್ಯೆ ಕೂಡ ಒಂದು. ಹಲವು ಕಾಯಿಲೆಗಳು ಬೊಜ್ಜಿನಿಂದ ಬರುತ್ತವೆ. ನಿರಂತರವಾಗಿ ಒಂದೇ ಸ್ಥಳದಲ್ಲಿ ಗಂಟೆಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವುದು, ಹೆಚ್ಚು ನಡೆದಾಡದೇ ಇರುವುದು, ವಾಕಿಂಗ್, ವ್ಯಾಯಾಮ ಹಾಗೂ ಯಾವುದೇ ದೈಹಿಕ ಚಟುವಟಿಕೆ ಮಾಡದೇ ಇರುವುದು ಸಾಕಷ್ಟು ಸಮಸ್ಯೆ ತಂದೊಡ್ಡುತ್ತದೆ. ದೇಹದಲ್ಲಿ ಯಾವುದೇ ಚಲನೆ ಇಲ್ಲದಿದ್ದರೆ ಅದು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗುತ್ತದೆ. ಯಾವುದೇ ಚಟುವಟಿಕೆ ಇಲ್ಲದೇ ಹೋದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆಗ ಅರ್ಜೀರ್ಣತೆ ಸಮಸ್ಯೆ ಕಾಡುತ್ತದೆ

 

ಇದರಿಂದ ತೂಕ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಇಂದು ಹೆಚ್ಚಿನವರ ಸಮಸ್ಯೆಯೇ ತೂಕ ಕಡಿಮೆ ಮಾಡಿಕೊಳ್ಳುವುದು ಆಗಿದೆ. ಇದಕ್ಕಾಗಿ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೂ ಕೆಲವು ಮಂದಿಗೆ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂತವರಿಗಾಗಿಯೇ ಕೆಲವೊಂದು ಟಿಪ್ಸ್ ಗಳನ್ನು ನಾವು ನೀಡುತ್ತೇವೆ.

ಆಹಾರದ ಜೊತೆಗೆ ಪಪ್ಪಾಯಿಯನ್ನು ತಿನ್ನಬೇಕು(Benefits of Papaya) ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಿಂದ ತೂಕವನ್ನು ಇಳಿಸಿಕೊಳ್ಳಬಹುದು. ಪಪ್ಪಾಯಿಯಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳಿವೆ. ಆದ್ದರಿಂದ ಈ ಹಣ್ಣು ಆರೋಗ್ಯ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಜೊತೆಗೆ ಇದು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.

ತೂಕ ಇಳಿಸಿಕೊಳ್ಳಲು ಬಯಸುವವರಾಗಿದ್ದರೆ, ಪಪ್ಪಾಯಿ ಹಣ್ಣನ್ನು ಪ್ರತಿದಿನ ಸೇವಿಸಬೇಕು. ಬೆಳಗಿನ ಉಪಾಹಾರವಾಗಿ ಪಪ್ಪಾಯಿ ಹಣ್ಣನ್ನು ಸೇವಿಸಬೇಕು. ಬೆಳಗಿನ ಉಪಾಹಾರದಲ್ಲಿ ಸಲಾಡ್ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಓಟ್ ಮೀಲ್ ಕೂಡ ತೆಗೆದುಕೊಳ್ಳಬಹುದು ಎನ್ನುತ್ತಾರೆ ತಜ್ಞರು.

ಸಂಜೆ ಇತರ ತಿಂಡಿಗಳ ಬದಲಿಗೆ ಪಪ್ಪಾಯಿಯನ್ನು ತೆಗೆದುಕೊಳ್ಳಬೇಕು. ಪಪ್ಪಾಯಿ ಮತ್ತು ಅನಾನಸ್ ಅನ್ನು ತುಂಡುಗಳಾಗಿ ಕತ್ತರಿಸಿ ಸ್ಮೂಥಿ ಮಾಡಿ ಕುಡಿದರೆ ಹಸಿವು ಕಡಿಮೆಯಾಗುತ್ತದೆ. ಇದಲ್ಲದೇ, ಇದು ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ಪಡೆಯಬಹುದು. ಪಪ್ಪಾಯಿ ಸಲಾಡ್ ಅನ್ನು ಮಧ್ಯಾಹ್ನದ ಊಟವಾಗಿಯೂ ಸೇವಿಸಬಹುದು.

ಉತ್ತಮ ರಿಸಲ್ಟ್ ಪಡೆಯಲು ಈ ಸಲಾಡ್ ಅನ್ನು ಲೆಟಿಸ್, ಟೊಮೆಟೊ, ಉಪ್ಪು, ಬೆಳ್ಳುಳ್ಳಿ ಮತ್ತು ನಿಂಬೆ ರಸದೊಂದಿಗೆ ಬೆರೆಸಬೇಕು. ಈ ಸಲಾಡ್ ತೆಗೆದುಕೊಂಡ ನಂತರ ನೀವು ಪಪ್ಪಾಯಿಯಿಂದ ಮಾಡಿದ ಜ್ಯೂಸ್ ಅನ್ನು ಸಹ ತೆಗೆದುಕೊಳ್ಳಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು. ಹೀಗಾಗಿ ಕಡಿಮೆ ಸಮಯದಲ್ಲಿ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಲು ಪಪ್ಪಾಯ ಬೆಸ್ಟ್ ಆಯ್ಕೆ.

ಇದನ್ನೂ ಓದಿ : ನೀತಾ ಅಂಬಾನಿ ಹ್ಯಾಂಡ್‌ಬ್ಯಾಗ್‌, ನೆಕ್ಲೇಸ್ ಬೆಲೆ ಕೇಳಿದ್ರೆ ನೀವು ಬೆರಗಾಗ್ತೀರಾ!!

Leave A Reply

Your email address will not be published.