Sachin Tendulkar: ಲಿಟಲ್ ಮಾಸ್ಟರ್‌ ಸಚಿನ್‌ ತೆಂಡೂಲ್ಕರ್‌, ಅವರ ಹೆಂಡತಿಗಿಂತ ಎಷ್ಟು ಚಿಕ್ಕವರು ಗೊತ್ತಾ?

Sachin Tendulkar: ಕ್ರಿಕೆಟ್ ಲೋಕದ ದೇವರು ಸಚಿನ್ ತೆಂಡೂಲ್ಕರ್( Sachin Tendulkar)ಬಗ್ಗೆ ಗೊತ್ತಿರದೇ ಇರುವವರೇ ವಿರಳ. ‘ಗಾಡ್‌ ಆಫ್‌ ಕ್ರಿಕೆಟ್‌’ ಖ್ಯಾತಿಯ ದಿಗ್ಗಜ ಬ್ಯಾಟರ್‌ ಸಚಿನ್‌ ತೆಂಡೂಲ್ಕರ್‌ ಕ್ರಿಕೆಟ್‌ನಲ್ಲಿ ಆಟಗಾರನಾಗಿ ಮಾತ್ರವಲ್ಲದೇ, ಸಾಲು ಸಾಲು ಭರ್ಜರಿ ಪ್ರದರ್ಶನಗಳನ್ನು ನೀಡಿದ್ದ ಸಚಿನ್‌ ತೆಂಡೂಲ್ಕರ್‌ ಟೀಮ್ ಇಂಡಿಯಾವನ್ನು(Team India) ಅದೆಷ್ಟೋ ಬಾರಿ ಮುನ್ನಡೆ ಸಾಧಿಸಿದ್ದು ಗೊತ್ತೇ ಇದೆ.

ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಯಾವಾಗಲೂ ಸುದ್ದಿಯಲ್ಲಿರುವುದು ಮಾಮೂಲಿ ಸಚಿನ್ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ತಿಳಿಯುವ ಕುತೂಹಲ ಅಭಿಮಾನಿಗಳಲ್ಲಿ ಸಹಜವಾಗಿ ಇರುತ್ತದೆ. ತನಗಿಂತ ವಯಸ್ಸಿನಲ್ಲಿ ಹಿರಿಯ ಸಂಗಾತಿಯನ್ನು ಮದುವೆಯಾದ ಅನೇಕ ಕ್ರಿಕೆಟಿಗರಲ್ಲಿ ಸಚಿನ್ ಕೂಡ ಒಬ್ಬರಾಗಿದ್ದು, ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ? ಎಂಬೆಲ್ಲ ಪ್ರಶ್ನೆ ಕಾಡುವುದು ಸಾಮಾನ್ಯ. ಈ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

ಸಚಿನ್ ತೆಂಡೂಲ್ಕರ್(Tendulkar) ರವರ ಶತಕಗಳ ಶತಕದ ದಾಖಲೆಯನ್ನು ಇಂದಿಗೂ ಕೂಡ ಯಾರಿಗೂ ಕೂಡ ಸರಿಗಟ್ಟಲು ಸಾಧ್ಯವಾಗಿಲ್ಲ ಎಂಬುದು ವಿಶೇಷ. ಕ್ರಿಕೆಟ್‌(Cricket) ಎಂಬ ಮಾಂತ್ರಿಕ ಲೋಕದ ಆಟಗಾರರಲ್ಲಿ ಎಲ್ಲರೂ ಹೆಚ್ಚು ಚಿರಪರಿಚಿತರಾದ ಸಚಿನ್‌ ತೆಂಡೂಲ್ಕರ್‌ ಅವರ ಬ್ಯಾಟಿಂಗ್ ವೈಖರಿಗೆ ಎಷ್ಟೋ ಮಂದಿ ಅಭಿಮಾನಿಗಳಿದ್ದು, ಇವರನ್ನೇ ಸ್ಪೂರ್ತಿಯಾಗಿಸಿಕೊಂಡ ಅದೆಷ್ಟೋ ಪ್ರತಿಭೆಗಳು ತಮ್ಮ ಕ್ರಿಕೆಟ್ ಅಂಗಳದಲ್ಲಿ ಮಿಂಚಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಸಚಿನ್ ಅವರು ಆನ್‌ಫೀಲ್ಡನ್‌ನಲ್ಲಿ ಕೋಪಗೊಂಡದ್ದನ್ನು ಕಂಡಿರಲು ಸಾಧ್ಯವೇ ಇಲ್ಲ. ಸಚಿನ್ ತೆಂಡೂಲ್ಕರ್ ಅವರು ಅಂಜಲಿ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಅಷ್ಟಕ್ಕೂ ಅಂಜಲಿ ಯಾರು ಎಂದು ಗಮನಿಸಿದರೆ, ಅಂಜಲಿ ತೆಂಡೂಲ್ಕರ್ ಜನಪ್ರಿಯ ಕೈಗಾರಿಕೋದ್ಯಮಿ ಅಶೋಕ್ ಮೆಹ್ತಾ ಅವರ ಪುತ್ರಿಯಾಗಿದ್ದು, ಇವರು ಮಕ್ಕಳ ವೈದ್ಯರಾಗಿ ಕೆಲಸ ಮಾಡಿದವರು.

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ಮೊದಲ ಬಾರಿಗೆ ಭೇಟಿಯಾಗಿದ್ದರಂತೆ.1990 ರಲ್ಲಿ ಸಚಿನ್ ತೆಂಡೂಲ್ಕರ್ ಅವರು ತಮ್ಮ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವಾಸದಿಂದ ಅವರ ತಂಡದೊಂದಿಗೆ ಹಿಂದಿರುಗುತ್ತಿರುವ ಸಂದರ್ಭ, ಅಂಜಲಿ ತೆಂಡೂಲ್ಕರ್ ತನ್ನ ತಾಯಿಯನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇದುವೇ ಅವರ ಮೊದಲ ಭೇಟಿಯಾಗಿದ್ದು, ಆ ಬಳಿಕ ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ಕಾಮನ್ ಫ್ರೆಂಡ್ ಮನೆಯಲ್ಲಿ ಭೇಟಿಯಾದರಂತೆ. ಈ ಭೇಟಿಯೇ ಮುಂದೊಂದು ದಿನ ಗಟ್ಟಿಯಾದ ಸಂಬಂಧ ಬೆಸೆಯಲು ಕಾರಣವಾಯಿತು.

ಇನ್ನು ಮುಂಬೈನ ವರ್ಲಿಯಲ್ಲಿರುವ ಜ್ಯುವೆಲ್ ಆಫ್ ಇಂಡಿಯಾದಲ್ಲಿ ಅಂಜಲಿ ತೆಂಡೂಲ್ಕರ್ ಮತ್ತು ಸಚಿನ್ ತೆಂಡೂಲ್ಕರ್ 24 ಮೇ 1995 ರಂದು ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದರು. ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ನಡುವಿನ ವಯಸ್ಸಿನ ವ್ಯತ್ಯಾಸ ಎಷ್ಟು ಎಂದು ಗಮನಿಸಿದರೆ, ಇಬ್ಬರಿಗೂ 6 ವರ್ಷ ವಯಸ್ಸಿನ ವ್ಯತ್ಯಾಸವಿದೆ. ಅಂಜಲಿ ತೆಂಡೂಲ್ಕರ್ ಅವರು ಸಚಿನ್ ತೆಂಡೂಲ್ಕರ್ ಅವರಿಗಿಂತ 6 ವರ್ಷ ದೊಡ್ಡವರು. ಸಚಿನ್ ತೆಂಡೂಲ್ಕರ್ ಅವರ ವಯಸ್ಸು 49 ಆಗಿದ್ದರೆ ಅವರ ಪತ್ನಿ ಅಂಜಲಿ ಅವರ ವಯಸ್ಸು 55 ಆಗಿದೆ. ಪ್ರೀತಿಗೆ ವಯಸ್ಸು ಮುಖ್ಯವಲ್ಲ ಮನಸ್ಸು ಮುಖ್ಯ ಎಂದು ನಿರೂಪಿಸಿದ ಜೀವಂತ ನಿದರ್ಶನ ಎಂದರೆ ತಪ್ಪಾಗದು. ಇನ್ನು ಈ ಜೋಡಿಗೆ ಇಬ್ಬರು ಮಕ್ಕಳು, ಅರ್ಜುನ್ ತೆಂಡೂಲ್ಕರ್‌ ಮತ್ತು ಸಾರಾ ತೆಂಡೂಲ್ಕರ್‌. ಅರ್ಜುನ್‌ ತೆಂಡೂಲ್ಕರ್‌ (Arjun Tendulkar) ಈ ಬಾರಿಯ ಐಪಿಎಲ್‌ಗೆ (IPL 2023) ಎಂಟ್ರಿ ನೀಡಿದ್ದು, ಸದ್ಯ ಬಾರಿ ನಿರೀಕ್ಷೆ ಹುಟ್ಟು ಹಾಕಿದೆ.

Leave A Reply

Your email address will not be published.