Nita Ambani: ನೀತಾ ಅಂಬಾನಿ ಹ್ಯಾಂಡ್‌ಬ್ಯಾಗ್‌, ನೆಕ್ಲೇಸ್ ಬೆಲೆ ಕೇಳಿದ್ರೆ ನೀವು ಬೆರಗಾಗ್ತೀರಾ!!

Nita Ambani Net Worth: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ (Mukesh Ambani) ಭಾರತದ ಶ್ರೀಮಂತ ಉದ್ಯಮಿ ಎಂದೇ ಖ್ಯಾತಿ ಪಡೆದಿದ್ದಾರೆ. ಮುಕೇಶ್ ಅಂಬಾನಿ (Mukesh Ambani) ದೇಶದಾದ್ಯಂತ ಏಷ್ಯಾ ಖಂಡದಲ್ಲಿಯೂ ನಂ.1 ಶ್ರೀಮಂತ ಎಂಬ ಪಟ್ಟವನ್ನು ಪಡೆದುಕೊಂಡಿದ್ದಾರೆ. 6.83 ಲಕ್ಷ ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಅಂಬಾನಿ ಕುಟುಂಬ ಐಷಾರಾಮಿ ಜೀವನ ಶೈಲಿಯ ಜೊತೆಗೆ ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಕೂಡ ಹೆಸರು ಪಡೆದಿದ್ದಾರೆ.

ಅಂಬಾನಿಯ ಆಂಟಿಲಿಯಾ (Antilia) ಮನೆ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಈ ನಿವಾಸದ ವೆಚ್ಚ ಸುಮಾರು 1 ರಿಂದ 2 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಅಂದ್ರೆ, 6,000 ಕೋಟಿ ಮತ್ತು 12,000 ಕೋಟಿ ರೂ. ಎನ್ನಲಾಗಿದೆ.

ಐದು ವರ್ಷಗಳ ಹಿಂದೆ ನೀತಾ ಅಂಬಾನಿ (Nita Ambani Net Worth) ಆಡಿ ಎ9 ಕ್ಯಾಮೆಲಿಯನ್ ಕಾರು (Audi A8 camelian) ಖರೀದಿಸಿದ್ದರು. ಈ ವಿಶೇಷ ಆವೃತ್ತಿಯ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರಲ್ಲಿಲ್ಲ. ಆದರೆ, ಕಂಪನಿಯು ನೀತಾ ಅಂಬಾನಿ (Nita Ambani) ಅವರ ವಿಶೇಷ ಕೋರಿಕೆಯ ಮೇರೆಗೆ ಈ ಕಾರನ್ನು ತಯಾರಿಸಿದೆ. ಇದನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ. ನೀತಾ ಅಂಬಾನಿ ಅವರು ಈ ಕಾರಿನಲ್ಲಿ ಮಾತ್ರ ಕಚೇರಿಗೆ ಹೋಗುತ್ತಾರೆ. ಇಂದು ಈ ಕಾರಿನ ಬೆಲೆ 100 ಕೋಟಿಗೂ ಹೆಚ್ಚಿದೆ ಎನ್ನಲಾಗಿದೆ.

ನೀತಾ ಅಂಬಾನಿ ಅವರು ವಿಶ್ವದ ಅತ್ಯುತ್ತಮ ಬ್ರ್ಯಾಂಡ್ ಶೂಗಳನ್ನು ಧರಿಸುತ್ತಾರೆ. ನೀತಾ ಅವರು ಒಮ್ಮೆ ಒಂದು ಪಾದರಕ್ಷೆ ಧರಿಸಿದರೆ ಮತ್ತೆ ಅದನ್ನು ಧರಿಸುವುದಿಲ್ಲ ಎಂದು ಹೇಳಲಾಗಿದೆ. ಅವರ ಶೂ ಸಂಗ್ರಹವು ಪೆಡ್ರೊ, ಜಿಮ್ಮಿ ಚೂ, ಗಾರ್ಸಿಯಾ ಮತ್ತು ಮಾರ್ಲಿನ್‌ನಂತಹ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.

ಇನ್ನು 2013ರಲ್ಲಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿಯವರ 50ನೇ ಹುಟ್ಟುಹಬ್ಬದ (Nita Ambani birthday) ಸಮಾರಂಭದಲ್ಲಿ ಕೇವಲ ಎರಡು ದಿನಗಳಿಗಾಗಿ ಭರ್ಜರಿ 220 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರೆ ಎಂಜು ಹೇಳಲಾಗಿದೆ. ಅಬ್ಬಾ!!.ಇಷ್ಟು ಹಣದಲ್ಲಿ ಅದೆಷ್ಟೋ ವಸ್ತುಗಳನ್ನು ಖರೀದಿಸಬಹುದಿತ್ತು, ಅದೆಷ್ಟೋ ಜನರು ಮನೆಕಟ್ಟಬಹುದಿತ್ತು ಅಲ್ವಾ!!.

ನೀತಾ ಅಂಬಾನಿಯವರ ದುಬಾರಿ ಹ್ಯಾಂಡ್‌ಬ್ಯಾಗ್‌ (hand bag) ಸಂಗ್ರಹವನ್ನು ನೋಡಿದ್ರೆ ನಿಮಗೂ ಶಾಕ್ ಆಗೋದು ಪಕ್ಕಾ!!. ನೀತಾ ಅವರ ಒಂದು ಹ್ಯಾಂಡ್‌ಬ್ಯಾಗ್‌ ಬೆಲೆ ಸರಾಸರಿ 5 ಲಕ್ಷ ಅಥವಾ ಅದಕ್ಕಿಂತ (Nita Ambani hand bag price) ಹೆಚ್ಚಿದೆ ಎನ್ಲಲಾಗಿದೆ. ಅಲ್ಲದೆ, ನೀತಾ ಅಂಬಾನಿ ಪ್ರಪಂಚದ ಅತ್ಯಂತ ದುಬಾರಿ ಸೀರೆಗಳನ್ನು (Nita ambani saree collections) ಧರಿಸುತ್ತಾರೆ. 100 ಕೋಟಿ ರೂಪಾಯಿ ಮೌಲ್ಯದ ನೈಜ ಡೈಮಂಡ್ ನೆಕ್ಲೇಸ್ ಗಳನ್ನು ಧರಿಸುತ್ತಾರೆ ಎಂದು ಹೇಳಲಾಗಿದೆ.

 

ಇದನ್ನು ಓದಿ : Sapthami Gowda: ಡಾಲಿ ಧನಂಜಯನ ‘ಪೋಲಿ’ ವಿಚಾರಗಳನ್ನು ಬಿಚ್ಚಿಟ್ಟ ಕಾಂತಾರ ಬೆಡಗಿ!

Leave A Reply

Your email address will not be published.