Umesh Pal murder : ಉಮೇಶ್ ಪಾಲ್ ಹತ್ಯೆಯಲ್ಲಿ ಉಳಿದಿರುವ ಏಕೈಕ ಆರೋಪಿ ಗುಡ್ಡು ಮುಸ್ಲಿಂ ಕರ್ನಾಟಕದಲ್ಲಿ, ಯಾವುದೇ ಕ್ಷಣದಲ್ಲಿ ಎನ್ಕೌಂಟರ್ ಸಾಧ್ಯತೆ !
Umesh Pal murder case : ಬಿಎಸ್ಪಿ ಶಾಸಕ ರಾಜುಪಾಲ್ ಹತ್ಯೆಯ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬದುಕುಳಿದಿರುವ ಏಕೈಕ ದಾಳಿಕೋರ ಗುಡ್ಡು ಮುಸ್ಲಿಂ ಆಗಿದ್ದು ಆತನೀಗ ಕರ್ನಾಟಕದಲ್ಲಿ ಓಡಾಡಿಕೊಂಡಿರುವ ಮಾಹಿತಿ ಲಭ್ಯ ಆಗಿದೆ. ಉಮೇಶ್ ಪಾಲ್ (Umesh Pal murder case ) ಹತ್ಯೆಗೆ ಮುನ್ನ ಗುಡ್ಡು ಮುಸ್ಲಿಂ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದು, ನಂತರ ಎಂಟ್ರಿ ಕೊಟ್ಟ ಏಳು ಜನರ ತಂಡ ಉಮೇಶ್ ಪಾಲ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿತ್ತು.
ಉಮೇಶ್ ಪಾಲ್ ಮತ್ತು ಪೊಲೀಸ್ ಅಂಗರಕ್ಷಕರ ಮೇಲೆ ಗುಡ್ಡು ಮುಸ್ಲಿಂ ಕಚ್ಚಾ ಬಾಂಬ್‌ಗಳನ್ನು ಎಸೆದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು. ಆತ ನಂತರ ಆತ ತಲೆ ಮರೆಸಿಕೊಂಡಿದ್ದ. ಈಗ ಗುಡ್ಡು ಮುಸ್ಲಿಂ ಕರ್ನಾಟಕದಲ್ಲಿ ಓಡಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳಿಂದ ಪತ್ತೆ ಹಚ್ಚಲಾಗಿದೆ. ಆತನ ಬಂಧನಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಕರ್ನಾಟಕ ಪೊಲೀಸರ ನೆರವಿನೊಂದಿಗೆ ಬೃಹತ್ ಜಾಲ ಬೀಸಿದ್ದಾರೆ.
ಆವತ್ತು ಉಮೇಶ್ ಪಾಲ್ ಜತೆ ಇಬ್ಬರು ಪೊಲೀಸರನ್ನು ಕೂಡಾ ಆ ತಂಡ ಕೊಂದು ಹಾಕಿತ್ತು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಉಮೇಶ್ ಪಾಲ್ ನಿವಾಸದ ಹೊರಗೆ ಗುಂಡಿಕ್ಕಿ ಕೊಂದ ನಂತರ ಎರಡು ತಿಂಗಳೊಳಗೆ ಮಾಫಿಯಾ ಡಾನ್, ರಾಜಕಾರಣಿ ಅತೀಕ್ ಅಹ್ಮದ್‌ಗೆ ಸಂಬಂಧಿಸಿದ ಒಟ್ಟು ಆರು ಜನರ ಹತ್ಯೆ ಮಾಡಲಾಗಿದೆ. ಆರು ಮಂದಿಯ ಪಟ್ಟಿಯಲ್ಲಿ ಅತೀಕ್ ಅಹ್ಮದ್, ಅವರ ಪುತ್ರ ಅಸಾದ್, ಸಹಚರರಾದ ಅರ್ಬಾಜ್, ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಮತ್ತು ಗುಲಾಮ್ ಹಸನ್ ಸೇರಿದ್ದಾರೆ.
2005ರಲ್ಲಿ ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು ಫೆಬ್ರವರಿ 24ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಕಿರಿಯ ಸಹೋದರ ಖಾಲಿದ್ ಅಜೀಂ ಅವರನ್ನು ಅಲಹಾಬಾದ್ (ಪಶ್ಚಿಮ) ವಿಧಾನಸಭಾ ಕ್ಷೇತ್ರದಲ್ಲಿ ರಾಜು ಪಾಲ್ ಸೋಲಿಸಿದ್ದರು. ಹಾಗೆ ಸೋಲಿಸಿದ ಸೇಡಿಗೆ ಚುನಾವಣೆ ಗೆದ್ದ ತಿಂಗಳ ನಂತರ ರಾಜು ಪಾಲ್ ಅವರನ್ನು ಹತ್ಯೆ ಮಾಡಲಾಗಿತ್ತು.
ಉಮೇಶ್ ಪಾಲ್ ಹತ್ಯೆ ನಂತರ 2 ತಿಂಗಳಲ್ಲಿ 6 ಮಂದಿ ಹತ್ಯೆ ನಡೆದಿದೆ. ಯುಪಿ ಮುಖ್ಯಮಂತ್ರಿ ಯೋಗಿ ಕಟು ನಿರ್ಧಾರ ತೆಗೆದುಕೊಂಡಿದ್ದರು. ಉಮೇಶ್ ಪಾಲ್ ಹತ್ಯೆ ಪ್ರಕರಣದ ಮೊದಲ ಎನ್‌ಕೌಂಟರ್ ಫೆಬ್ರವರಿ 27ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದಿತ್ತು. ಉಮೇಶ್ ಪಾಲ್ ಹತ್ಯೆ ವೇಳೆ ಎಸ್‌ಯುವಿ ಕಾರು ಚಲಾಯಿಸಿದ ಅರ್ಬಾಜ್ ನನ್ನು ಎನ್ಕೌಂಟರ್ ಮಾಡಿ ಮಲಗಿಸಲಾಗಿತ್ತು.
ಇದಾದ ನಂತರ ಮಾರ್ಚ್ 6 ರಂದು ಮತ್ತೆ ಪ್ರಯಾಗ್‌ರಾಜ್‌ನಲ್ಲಿ ವಿಜಯ್ ಅಲಿಯಾಸ್ ಉಸ್ಮಾನ್ ಎನ್‌ಕೌಂಟರ್ ಆಗಿತ್ತು. ಈ ಇಬ್ಬರ ಮೇಲೂ ಉಮೇಶ್ ಪಾಲ್ ಕೊಂದ ಆರೋಪವಿದೆ. ಮತ್ತೆ ಏಪ್ರಿಲ್ 13 ರಂದು, ಝಾನ್ಸಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅಸದ್ ಮತ್ತು ಗುಲಾಮ್ ಅವರನ್ನು ಪೊಲೀಸರು ಹೊಡೆದುರುಳಿಸಿದ್ದರು.
ಮೊನ್ನೆ ಆತೀಕ್ ಅಹಮದ್ ಮತ್ತು ಆತನ ಸಹೋದರನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಪತ್ರಕರ್ತರ ವೇಷದಲ್ಲಿ ಬಂದ ಟರ್ಕಿ ಮೇಡ್ ಪಿಸ್ತೂಲ್ ಮಾಡಿ ತಲೆಗೇ ಶೂಟ್ ಮಾಡಿತ್ತು. ಉಳಿದ ಅತೀಕ್‌ನ ಇತರ ಮರ್ಡರ್ ಗ್ಯಾಂಗ್ ನ ಸಹಾಯಕರಾದ ಗುಡ್ಡು ಮುಸ್ಲಿಂ, ಅರ್ಮಾನ್ ಮತ್ತು ಸಬೀರ್ ಪರಾರಿಯಾಗಿದ್ದು, ಅವರ ತಲೆಯ ಮೇಲೆ 5 ಲಕ್ಷ ರೂಪಾಯಿ ಬಹುಮಾನವಿದೆ. ಈಗ ಗುಡ್ಡು ಕನ್ನಡ ನೆಲದಲ್ಲಿ ಇರುವ ಸುದ್ದಿ ಬಂದಿದೆ. ಯಾವುದೇ ಕ್ಷಣದಲ್ಲಿ ಪೊಲೀಸರ ತುಪಾಕು ಮೊಳಗಿ ಮತ್ತೊಂದು ಎನ್ಕೌಂಟರ್ ಆಗುವ ಸಂಭವವೇ ಹೆಚ್ಚು.
ಇದನ್ನು ಓದಿ : Kargil bomb: 24 ವರ್ಷಗಳ ನಂತರ ಸ್ಪೋಟಗೊಂಡ ಕಾರ್ಗಿಲ್ ಯುದ್ಧದ ಬಾಂಬ್ ! ಓರ್ವ ಬಾಲಕ ಸಾವು!