Rashmika Mandanna: ಮೇಕಪ್‌ ಇಲ್ಲದೆ ತನ್ನ ಅಪೂರ್ವ ಸೌಂದರ್ಯ ಅಭಿಮಾನಿಗಳಿಗೆ ತೆರೆದಿಟ್ಟ ರಶ್ಮಿಕಾ ! ಆದರೆ ಆದದ್ದೇನು?

Share the Article

Rashmika Mandanna Troll : ರಿಷಬ್ ಶೆಟ್ಟಿ (Rishabh Shetty) ನಿರ್ದೇಶನದ ಕಿರಿಕ್ ಪಾರ್ಟಿ(Kirik party) ಚಿತ್ರದ ಮೂಲಕ ಕನ್ನಡ ತೆರೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ(Rashmika Mandanna) ಇದೀಗ ಬಹುಬಾಷಾ ನಟಿಯಾಗಿ ಸಿನಿತೆರೆಯಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿ ನ್ಯಾಷನಲ್‌ ಕ್ರಶ್‌ (National crush) ಎನ್ನುವ ಮಟ್ಟಿಗೆ ಸೈ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಒಂದೊಲ್ಲೊಂದು ವಿಚಾರಕ್ಕೆ ಟ್ರೋಲ್‌ ಆಗೋ ವಿಷಯ ಎಲ್ಲರಿಗೂ ಗೊತ್ತೇ ಇದೆ. ಇದೀಗ ಇನ್ನೊಂದು ವಿಷಯಕ್ಕೆ ನಟಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಟ್ರೋಲ್ (troll) ಆಗ್ತಿದ್ದಾರೆ.

ಇವರ ಬ್ಯೂಟಿ, ಗ್ಲಾಮರ್‌ಗೆ (glamour) ಅನೇಕರು ಫಿದಾ ಆಗಿ ಬಿಟ್ಟಿದ್ದಾರೆ. ಹಾಗೆಯೇ ನಟನೆಯ ಮೂಲಕ ದೇಶಾದ್ಯಂತ ಒಳ್ಳೆಯ ಛಾಪು ಮೂಡಿಸಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಅವರ ಸ್ಟೈಲ್ ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಆದರೆ ಇತ್ತೀಚೆಗೆ ನ್ಯಾಷನಲ್ ಕ್ರಶ್ ತನ್ನ ನೋ ಮೇಕಪ್ ಲುಕ್ (makeup look) ಸೆಲ್ಫಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹೌದು, ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತನ್ನ ಸಾಮಾಜಿಕ ಜಾಲತಾಣದಲ್ಲಿ(social media) ಅಂದರೆ ಇನ್ಸ್ಟಾಗ್ರಾಮ್(Instagram) ನಲ್ಲಿ ತನ್ನ ಮುಖದ ತ್ವಚೆಗೆ ಮೇಕಪ್( Rashmika Mandanna Troll) ಹಾಕದೇ ಇರುವ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ನಟಿ ಗಿಳಿಯ ಬಣ್ಣದ ಹಸಿರು ಸ್ವೆಟರ್ ಧರಿಸಿದ್ದಾರೆ ಮತ್ತು ಅವರು ಮುಖದ ಮೇಲೆ ಅಲ್ಲಲ್ಲಿ ಕೂದಲು ಹರಡಿದ್ದು, ಪೌಟ್(pout pose) ಪೋಸ್‌ ನೀಡಿ ಅಭಿಮಾನಿಗಳ ಮನಸ್ಸನ್ನು ಕದ್ದು ಬಿಟ್ಟಿದ್ದಾರೆ.

ರಶ್ಮಿಕಾ ಪೋಸ್ಟ್ ಮಾಡಿರುವ ಫೋಟೋದಲ್ಲಿ ನೋಡಲು ತುಂಬಾನೇ ಮುದ್ದಾಗಿ ಕಾಣುತ್ತಾರೆ. ಆದರೆ ಕೆಲವು ಬಳಕೆದಾರರು ನಟಿಯ ಮೇಕಪ್ ಮಾಡದೇ ಇರುವ ಲುಕ್ ಅನ್ನು ನೋಡಲು ಇಷ್ಟ ಪಡಲಿಲ್ಲ. ಹಲವಾರು ಜನರು ಫೋಟೋಗೆ ಕಾಮೆಂಟ್ (comment)ಮಾಡಲು ಪ್ರಾರಂಭಿಸಿದ್ದಾರೆ. ಹಾಗೆಯೇ ಇನ್ನೂ ಕೆಲವರು ರಶ್ಮಿಕಾ ಮಂದಣ್ಣನಿಗೆ ನೀವು ಹೇರ್‌ ಕಟ್‌ (hair cut) ಮಾಡಿದರೆ ತುಂಬಾನೇ ಮುದ್ದಾಗಿ ಕಾಣಿಸುತ್ತೀರಾ ಎಂದು ಕಮೆಂಟ್ ಮಾಡಿದ್ದಾರೆ.

ಇದರ ಜೊತೆಗೆ ನ್ಯಾಷನಲ್ ಕ್ರಶ್ ಅಪ್ಲೋಡ್ ಮಾಡಿದ ಪೋಸ್ಟ್ ನಲ್ಲಿ ಅವರ ಮುಖದ ಮೇಲೆ ಕಾಣಿಸಿಕೊಂಡ ಕೂದಲಿನ ವಿಷಯದಲ್ಲಿ ಇದೀಗ ಸಿಕ್ಕಾಪಟ್ಟೆ ಟ್ರೋಲಿಗರ ಬಾಣಕ್ಕೆ ರಶ್ಮಿಕಾ ಗುರಿಯಾಗಿದ್ದಾರೆ.

Leave A Reply