Rahul Gandhi : ಕೋಲಾರದ ʼಜೈ ಭಾರತ್ ಸಮಾವೇಶʼಕ್ಕೆ ರಾಹುಲ್ ಗಾಂಧಿ ಆಗಮನ : ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್
Rahul Gandhi : ಕೋಲಾರ : ಮುಂದಿನ ವಿಧಾನ ಸಭೆ ಚುನಾವಣೆ ರಾಜ್ಯದೆಲ್ಲೆಡೆ ಭರ್ಜರಿ ರಣತಂತ್ರ ರೂಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇಂದು ಕರ್ನಾಟಕಕ್ಕೆ ಎಂಟ್ರಿಯಾಗಲಿದ್ದಾರೆ. ಕರ್ನಾಟಕ ಕೋಲಾರದ ಹೊರವಲಯದ ಟಮಕ ಬಳಿ ನಡೆಯಲಿರುವ ಕಾಂಗ್ರೆಸ್‌ನ ಸತ್ಯಮೇವ ಜಯತೆ, ಜೈ ಭಾರತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. 11.30ಕ್ಕೆ ಸಮಾವೇಶ ಆರಂಭವಾಗುವ ಎಲ್ಲಾ ಸಾಧ್ಯತೆಗಳಿವೆ .
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರು ಈ ಸಮಾವೇಶಕ್ಕೆ ಬರುವ ಸಾಧ್ಯತೆ ಇದೆ. ರಾಹುಲ್ ಗಾಂಧಿ,(Rahul Gandhi) ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ರಾಷ್ಟ್ರ ಹಾಗೂ ರಾಜ್ಯದ ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ.
ಕೋಲಾರ ಹೊರವಲಯದ ಟಮಕ ಬಳಿ ನಿರ್ಮಾಣ ಮಾಡಲಾಗಿರುವ ಬೃಹತ್ ವೇದಿಕೆ ನಿರ್ಮಾಣವಾಗಿದೆ. ಸುಮಾರು ಒಂದುವರೆ ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು, ಅದಕ್ಕಾಗಿ ಬೃಹತ್ತಾದ ಜರ್ಮನ್ ಟೆಂಟ್ ಹಾಕಲಾಗಿದೆ. ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರು ಸೇರಿದಂತೆ ರಾಹುಲ್ ಗಾಂಧಿ ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ.
ಈಗಾಗಲೇ ಕಾರ್ಯಕ್ರಮ ಮಕ್ಕಾಗಿ ಕೋಲಾರದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಕೊಳ್ಳಲಾಗಿದೆ. ಬೃಹತ್ ವೇದಿಕೆ ಬಳಿ ಕಾಂಗ್ರೆಸ್ ನಾಯಕರ ಬೃಹತ್ ಫ್ಲೆಕ್ಸ್, ಬ್ಯಾನರ್, ಕಟೌಟ್‌ಗಳು ಹಾಗೂ ಸ್ವಾಗತ ಕಮಾನುಗಳನ್ನು ಹಾಕಲಾಗಿದೆ.
ಕೊಲಾರ ಜಿಲ್ಲೆಯಾದ್ಯಂತ ಪೊಲೀಸರು ಹದ್ದಿನಕಣ್ಣು :
ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಕೊಲಾರ ಜಿಲ್ಲೆಯಾದ್ಯಂತ ಪೊಲೀಸರು ಹದ್ದಿನಕಣ್ಣು ಇಡಲಾಗಿದೆ, ಈ ನಿಟ್ಟಿನಲ್ಲಿ ಕೋಲಾರ, ಕೆಜಿಎಫ್, ರಾಮನಗರ, ತುಮಕೂರು ಸೇರಿದಂತೆ ಬೆಂಗಳುರು ಗ್ರಾಮಾಂತರ ಜಿಲ್ಲೆಯ ಸಾವಿರಾರು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. 5 ಎಸ್ಪಿ, 8 ಡಿವೈಎಸ್ಪಿ, 20 ಸಿಪಿಐ, 40 ಪಿಎಸ್‌ಐ, 400 ಕ್ಕೂ ಹೆಚ್ಚು ಸಿಬ್ಬಂದಿ, ನಾಲ್ಕು ಕೆಎಸ್ ಆರ್ ಪಿ ಹಾಗೂ 5 ಡಿಎಆರ್ ತುಕಡಿಗಳನ್ನ ನೇಮಕ ಮಾಡಲಾಗಿದೆ.