Mahesh Babu Beauty Secret : ಕೊನೆಗೂ ಬಯಲಾಯ್ತು ಮಹೇಶ್‌ ಬಾಬು ಸೌಂದರ್ಯದ ರಹಸ್ಯ ! ಆಗಾಗ ವಿದೇಶಕ್ಕೆ ಹೋಗಲು ಕಾರಣ ಇದೇನಾ?

Mahesh Babu Beauty Secret: ಸೂಪರ್ ಸ್ಟಾರ್ (super star) ಮಹೇಶ್ ಬಾಬು ಅವರು ತೆಲುಗು(telugu), ತಮಿಳು(tamil), ಹಿಂದಿ(hindi) ಭಾಷೆ ಸೇರಿದಂತೆ ಹಲವು ಸೂಪರ್ ಹಿಟ್ (super hit) ಸಿನೆಮಾಗಳನ್ನು ನೀಡುತ್ತ ಬಂದಿದ್ದಾರೆ. ಮಹೇಶ್ ಬಾಬು ಅವರಿಗೆ 47 ವರ್ಷ ವಯಸ್ಸಾಗಿದ್ದರೂ, ಇನ್ನು 30 ವರ್ಷದವರಂತೆ ಕಾಣುತ್ತಾರೆ. ಇದರಿಂದಾಗಿ ಪದೇ ಪದೇ ಬಾಬು ಅವರು ಬ್ಯೂಟಿ (Beauty) ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ.

 

ಇದೀಗ ಮತ್ತೊಮ್ಮೆ ಮಹೇಶ್ ಬಾಬು ಬ್ಯೂಟಿ(Mahesh Babu beauty) ವಿಚಾರ ಶುರುವಾಗಿದೆ. ಮಹೇಶ್ ಬಾಬು ಅವರು ವಿದೇಶಕ್ಕೆ ಆಗಾಗ ಹೋಗೋದು ಬ್ಯೂಟಿ(beauty) ಕಾರಣಕ್ಕಾಗಿಯೇ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ.

ಸೂಪರ್ ಸ್ಟಾರ್ (super star) ಬಾಬು ಅವರು ತ್ರಿವಿಕ್ರಮ್ ಜೊತೆ ಸಿನೆಮಾ ಮಾಡುತ್ತಿದ್ದಾರೆ. ತ್ರಿವಿಕ್ರಮ್ ಜೊತೆ ಅಯ್ಯು, ಖಲೇಜಾ ಸಿನೆಮಾ ಹಿಟ್ (hit) ಆಗಿರುವುದರಿಂದ, ಈಗೀನ ಸಿನೆಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಸಿನೆಮಾದ ಶೂಟಿಂಗ್ ನಲ್ಲಿ ಸ್ವಲ್ಪ ಟೈಮ್(time) ಸಿಕ್ಕಿರುವುದರಿಂದ ಬಾಬು ಅವರು ವಿಶ್ವ ಪರ್ಯಟನೆಯಲ್ಲಿದ್ದ ತಮ್ಮ ಕುಟುಂಬದ ಜೊತೆ ಸೇರಿದ್ದಾರೆ.

ಮಹೇಶ್ ಬಾಬು ಅವರ ಪತ್ನಿ ನಮ್ರತಾ ಅವರು ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ವರ್ಲ್ಡ್ ಟೂರ್ (world tour) ಹೋಗಿದ್ದಾರೆ. ಇದೀಗ ಮಹೇಶ್ ಬಾಬು ಅವರು ಕೂಡ ವಿದೇಶಕ್ಕೆ ತೆರಳಿದ್ದು, ವಿದೇಶದಲ್ಲಿ ಬಾಬು ಅವರು ವಿಶ್ವಪ್ರಸಿದ್ಧ ವೈದ್ಯರನ್ನು ಬೇಟಿ ಮಾಡುತ್ತಿದ್ದಾರೆ ಎಂದು ಮಾತು ಕೇಳಿಬರುತ್ತಿದೆ.

ಈ ವಿಚಾರವನ್ನು ಸ್ವತಃ ಮಹೇಶ ಬಾಬು ಅವರೇ ಸಾಮಾಜಿಕ ಜಾಲತಾಣ(social media)ದಲ್ಲಿ ಶೇರ್ ಮಾಡಿದ್ದಾರೆ. ಮಹೇಶ್ ಬಾಬು ಅವರು ಹಾಗೂ ಡಾ. ಹರಿ ಕೊನಿಗ್ ಜೊತೆಗಿನ ಫೋಟೋ(photo) ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ (viral) ಆಗಿತ್ತು. ಡಾ. ಹರಿ ಅವರು ಅರೋಗ್ಯ ಮತ್ತು ಸೌಂದರ್ಯದ ತಜ್ಞರಾಗಿದ್ದು, ಸಮಗ್ರ ಪ್ರಕೃತಿ ಚಿಕಿತ್ಸೆ, ಮಾನಸಿಕ ಶಾಂತಿ ಮತ್ತು ಉತ್ತಮ ಆಹಾರ ಪದ್ಧತಿಗಳ ಮೂಲಕ ಆರೋಗ್ಯಕರವಾಗಿ ಮತ್ತು ಸುಂದರವಾಗಿ ಇರುವುದು ಹೇಗೆ ಎಂದು ಸೂಚಿಸುವ ಪರಿಣಿತರಾಗಿದ್ದಾರೆ. ಜರ್ಮನಿಯ ಡಾ. ಹರಿ ಅವರ ಜೊತೆಗಿನ ಫೋಟೋ(photo) ನೋಡಿ ನೆಟ್ಟಿಗರು ಮಹೇಶ್ ಬಾಬು ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಈ ವೈದ್ಯರ ಸಲಹೆ ಪಡೆಯುತ್ತಿದ್ದಾರೆ ಎಂದು ಕಮೆಂಟ್ (comment) ಮಾಡುತ್ತಿದ್ದಾರೆ.

Leave A Reply

Your email address will not be published.