C T Ravi Admitted to Hospital : ಎಲೆಕ್ಷನ್ ಹೊತ್ತಲ್ಲೇ ಆಸ್ಪತ್ರೆಗೆ ದೌಡಾಯಿಸಿದ ಸಿ.ಟಿ.ರವಿ

C T Ravi : ಬಿಜೆಪಿ ಪಕ್ಷದಲ್ಲಿ ಸದಾ ಕಾರ್ಯನಿರತ ಆಗಿರುವ ಶಾಸಕ ಸಿ. ಟಿ ರವಿ ಅವರು ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆ ಸೇರಿದ ಮಾಹಿತಿ ಬೆಳಕಿಗೆ ಬಂದಿದೆ.

 

ಸದ್ಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಶಾಸಕ ಸಿ.ಟಿ. ರವಿ (C T Ravi) ಅವರನ್ನು ಚಿಕ್ಕಮಗಳೂರು ನಗರದ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಅವರ ಆಶ್ರಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಿ.ಟಿ. ರವಿ ಅವರು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡ ಕಾರಣ, ಸಿ.ಟಿ.ರವಿ ಕೂಡಲೇ ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ತೆರಳಿದ್ದಾರೆ.

ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ ವೈದ್ಯರು, ಕಿಡ್ನಿ ಸ್ಟೋನ್‌ನಿಂದ ಹೊಟ್ಟೆ ನೋವು ಆಗಿದೆ. ಅವರನ್ನು 11 ಗಂಟೆ ಬಳಿಕ ಡಿಸ್ಟಾರ್ಜ್ ಮಾಡಲಾಗುತ್ತದೆ. ಹಾಗೆಯೇ ಅವರು ಒಂದು ದಿನ ವಿಶ್ರಾಂತಿಯಲ್ಲಿ ಇರಬೇಕಾಗುತ್ತದೆ ಎಂದು ಸೂಚನೆ ನೀಡಿದ್ದಾರೆ .

Leave A Reply

Your email address will not be published.