Airpods : ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಏರ್‌ಪಾಡ್ಸ್ ಕೇಸ್ ನಲ್ಲಿ ಟಚ್‌ಸ್ಕ್ರೀನ್ ಇರುವ ಸ್ಮಾರ್ಟ್‌ಡಿವೈಸ್!
Airpods with touchscreen : ಇಂದಿನ ಡಿಜಿಟಲ್ ಯುಗದಲ್ಲಿ ಹೊಸ ಹೊಸ ಮಾದರಿಯ ಇಯರ್‌ಬಡ್ಸ್ ಲಗ್ಗೆ ಇಡುತ್ತಲೇ ಇದ್ದು, ಬಳಕೆದಾರರು ಫುಲ್ ಕುಶ್ ಆಗಿದ್ದಾರೆ. ವಿಭಿನ್ನ ಮಾದರಿಯ ಫೀಚರ್ ಗಳ ಮೂಲಕ ಹಲವು ಡಿವೈಸ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಒಂದು ಕಂಪನಿಗಿಂತ ಇನ್ನೊಂದು ಕಮ್ಮಿ ಇಲ್ಲ ಎಂಬಂತೆ ಕಾಂಪಿಟೇಷನ್ ಮೂಲಕ ಜನರಿಗೆ ಪರಿಚಯವಾಗುತ್ತಿದೆ.
ಇಂತಹ ಕಂಪನಿಗಳಲ್ಲಿ ಐಫೋನ್ ಕೂಡ ಒಂದು. ಇದೀಗ ಹೊಸ ಇಯರ್‌ಬಡ್ಸ್ ಅನ್ನು ಆಪಲ್ ಪರಿಚಯಿಸಲಿದೆ ಎನ್ನಲಾಗಿದೆ. ಅದರ ಜೊತೆಗೆ ಶೀಘ್ರದಲ್ಲಿಯೇ ಆಪಲ್ ಸ್ಮಾರ್ಟ್‌ವಾಚ್‌ಗಳಲ್ಲಿ ಕ್ಯಾಮೆರಾ ಅಳವಡಿಸುವುದು ಕಂಪನಿಯ ಉದ್ದೇಶವಾಗಿದೆ. ಹೌದು. ಹೊಸದಾಗಿ ಪರಿಚಯವಾಗಲಿರುವ ಇಯರ್‌ಬಡ್ಸ್ ವಿಶೇಷವಾದ ಡಿಸ್‌ಪ್ಲೇಯನ್ನೇ (Airpods with touchscreen) ಹೊಂದಿರಲಿವೆ ಎನ್ನಲಾಗಿದೆ.
ಈ ಆಪಲ್ ಏರ್‌ಪೋಡ್ಸ್ ನ ಚಾರ್ಜಿಂಗ್ ಕೇಸ್‌ನಲ್ಲಿ ಹೊಸ ಬದಲಾವಣೆ ಆಗಲಿದೆ. ಅದರಂತೆ ಏರ್‌ಪಾಡ್ಸ್ ನಲ್ಲಿ ಡಿಸ್‌ಪ್ಲೇ ಇರಲಿದ್ದು, ಇದು ಟಚ್ ಕಂಟ್ರೋಲ್‌ನೊಂದಿಗೆ ಔಟ್‌ಪುಟ್ ಸ್ಪೀಕರ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಟಚ್‌ಸ್ಕ್ರೀನ್‌ನಲ್ಲಿ ನೀವು ಬ್ಯಾಟರಿ ಸಾಮರ್ಥ್ಯ, ಹವಾಮಾನ ವರದಿ ಮತ್ತು ನಕ್ಷೆಗಳಂತಹ ಫೀಚರ್ಸ್‌ಗಳನ್ನು ನೋಡಬಹುದು. ಹೆಡ್ ಮೂವ್ಮೆಂಟ್ ಟ್ರ್ಯಾಕಿಂಗ್ ಆಡಿಯೊ ಫೀಚರ್ಸ್ ಅನ್ನು ಸಹ ಹೊಂದಿರಲಿದೆ ಎನ್ನಲಾಗಿದೆ. ಇದಿಷ್ಟೇ ಅಲ್ಲದೆ ಈ ಸಣ್ಣ ಡಿಸ್‌ಪ್ಲೇಯಲ್ಲಿ ಸಿನಿಮಾಗಳನ್ನೂ ಸಹ ನೋಡಬಹುದು.
ಈ ಮೊದಲು ಲಾಂಚ್ ಆಗುತ್ತಿದ್ದ ಚಾರ್ಜಿಂಗ್ ಕೇಸ್ ನಂತೆಯೇ ಇದ್ದರೂ, ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ. ಯಾಕೆಂದರೆ ಮೊದಲೇ ತಿಳಿಸಿದಂತೆ ಇದರಲ್ಲಿ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಇರಲಿದೆ. ಈ ಟಚ್ ಸ್ಕ್ರೀನ್ ಆಯ್ಕೆ ಇರುವ ಚಾರ್ಜಿಂಗ್ ಕೇಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲದೆ ಬಡ್ಸ್‌ಗಳು ಕಾಣಿಸಿಕೊಳ್ಳಲಿವೆ. ಆದರೆ, ಬಡ್ಸ್‌ಗಳು ಹೊಸ ಫೀಚರ್ಸ್‌ಅನ್ನು ಪಡೆದುಕೊಂಡಿರುತ್ತವೆ.
ಈ ಹೊಸ ಏರ್‌ಪಾಡ್ಸ್ ಡಿವೈಸ್ ಹ್ಯಾಪ್ಟಿಕ್ ಟಚ್ ಕಂಟ್ರೋಲ್‌ನೊಂದಿಗೆ ಪ್ಯಾಕ್ ಆಗಿರಲಿದ್ದು, ಈ ಮೂಲಕ ಬಳಕೆದಾರರು ಏರ್‌ಪಾಡ್ ಕೇಸ್ ಅನ್ನು ಭದ್ರವಾಗಿ ಹಿಡಿದಿಟ್ಟುಕೊಂಡರೆ, ಇಯರ್‌ಬಡ್‌ಗಳು ಆಟೋಮ್ಯಾಟಿಕ್ ಆಗಿ ಎಎನ್‌ಸಿ ಮತ್ತು ಇತರ ಧ್ವನಿ ಮೋಡ್‌ಗಳಿಗೆ ಬದಲಾಗುತ್ತವೆ ಎಂದು ತಿಳಿದುಬಂದಿದೆ. ಇಂಟರ್ಯಾಕ್ಟಿವ್ ಯೂಸರ್ ಇಂಟರ್‌ಫೇಸ್‌ನೊಂದಿಗೆ ಚಾರ್ಜಿಂಗ್ ಕೇಸ್ ಅನ್ನು ಕಾನ್ಫಿಗರ್ ಮಾಡುವ ಮೂಲಕ ಬಳಕೆದಾರರ ವಾಯರ್‌ಲೆಸ್ ಬಡ್ಸ್‌ಗಳ ಮೇಲೆ ನಿಯಂತ್ರಣವನ್ನು ಸುಧಾರಿಸಬಹುದು ಎಂದು ಪೇಟೆಂಟ್ ನಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ಪೇಟೆಂಟ್ ವಿನ್ಯಾಸದಲ್ಲಿ ಮಾತ್ರ ಲಭ್ಯವಿದ್ದು, ಈ ವಿನ್ಯಾಸವನ್ನು ಅನುಮೋದಿಸಿದರೆ ಮಾತ್ರ ಈ ರೀತಿಯ ಸ್ಮಾರ್ಟ್ ಚಾರ್ಜಿಂಗ್ ಕೇಸ್ ಇರುವ ಇಯರ್‌ಬಡ್ಸ್ ಅನ್ನು ಬಳಸಬಹುದು.
ಈ ರೀತಿಯ ಹೊಸ ಫೀಚರ್ಸ್‌ಗಾಗಿ ಡಿವೈಸ್‌ಗಳು, ವಿಧಾನಗಳು ಮತ್ತು ಹೆಡ್‌ಫೋನ್‌ಗಳ ಕೇಸ್‌ನೊಂದಿಗೆ ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ ಇಂಟರಾಕ್ಷನ್‌ಗಳು ಎಂಬ ಹೆಸರಿನೊಂದಿಗೆ ಪೇಟೆಂಟ್ ಪಡೆದುಕೊಳ್ಳಲು ಸೆಪ್ಟೆಂಬರ್ 2021 ರಲ್ಲಿಯೇ ಮನವಿ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ. ಅದರಂತೆ, ಆಪಲ್ ಸ್ಮಾರ್ಟ್‌ವಾಚ್‌ಗಳಿಗೆ ಕ್ಯಾಮೆರಾ ಅಳವಡಿಸುವ ಕುರಿತು ಪೇಟೆಂಟ್ ಲಭ್ಯವಾಗಲಿದ್ದು, ಶೀಘ್ರದಲ್ಲಿಯೇ ಸ್ಮಾರ್ಟ್‌ವಾಚ್‌ಗಳಲ್ಲಿ ಕ್ಯಾಮೆರಾ ಸೌಲಭ್ಯ ಲಭ್ಯವಾಗಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Marriage : ಮದುವೆಯಿಂದ ಆಗುವ ಲಾಭಗಳು ನಿಮಗೆ ಗೊತ್ತಾ? ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುತ್ತದೆ!