Sidi celebration : ವಿಜಯಪುರದಲ್ಲಿ ಸಿಡಿ ಆಚರಣೆ ವೇಳೆ ಕೆಳಗೆ ಬಿದ್ದ ಮಹಿಳೆ…! ಸಿಡಿ ಆಚರಿಸುವುದು ಹೇಗೆ?

Sidi celebration in Vijayapura : ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಸರ್ಕಾರ ನಿರ್ಬಂಧ ಹೇರಿದ್ರೂ ಕೂಡ ವಿಜಯಪುರದಲ್ಲಿ ಸಿಡಿ ಆಚರಣೆ  (Sidi celebration in Vijayapura) ಮಾಡಲಾಗಿದೆ. ಈ ವೇಳೆ ಮಹಿಳೆಯೊಬ್ಬಳು ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಲಕ್ಷ್ಮೀಬಾಯಿ ಪೂಜಾರಿ ಮೃತ ಮಹಿಳೆ. ಇನ್ನು ಮಹಿಳೆ ಕೆಳಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ​ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಸಿಡಿ ಆಚರಣೆ ಅಂದರೆ ಏನು?

ಮೌಢ್ಯಾಚರಣೆಯಲ್ಲಿರುವ ‘ಸಿಡಿ’ ಆಚರಣೆ. ಬಾಯಿ, ಬೆನ್ನಿಗೆ ಕಬ್ಬಿಣದ ಸಲಾಕೆಗಳನ್ನು ಚುಚ್ಚಿಕೊಂಡು ಮೇಲಕ್ಕೆ ಎತ್ತಿ ಸುತ್ತಿಸಲಾಗುತ್ತದೆ. ಇಂದು ಒಂದು ರೀತಿಯ ದೇವರ ಸೇವೆ ಮಾಡುವ ಆಚರಣೆ ಇದಾಗಿದೆ.

ಮೌಢ್ಯ ಪ್ರತಿಬಂಧಕ ಕಾಯ್ದೆಯಡಿ ನಿಷೇಧಿಸಿದ್ದ ಸರ್ಕಾರ

ಸಮಾಜದಲ್ಲಿ ಕೆಲ ಅನಿಷ್ಟ ಪದ್ದತಿಗಳ ಆಚರಿಸುವುದನ್ನು ತಡೆಯುವ ಸಲುವಾಗಿ ಸಿದ್ದರಾಮಯ್ಯ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ತರುವ ಪ್ರಸ್ತಾವ ಮುಂದಿಟ್ಟಿತ್ತು. ಇದನ್ನು 2020ರಲ್ಲಿ ಬಿಎಸ್​ ಯಡಿಯೂರಪ್ಪ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿತ್ತು. ಜನರಲ್ಲಿ ಭೀತಿ ಹುಟ್ಟಿಸುವ, ಮಾನಸಿಕ, ದೈಹಿಕ ದೌರ್ಜನ್ಯ ನಡೆಸುವ, ದೇಹವನ್ನು ಕೊಕ್ಕೆಯಿಂದ ನೇತು ಹಾಕುವುದು, ದೇಹಕ್ಕೆ ಕೊಕ್ಕೆ ಚುಚ್ಚಿಕೊಂಡು ರಥ ಎಳೆಯುವ ಆಚರಣೆಗಳು ನಿಷೇಧಿಸಿದ್ದಾರೆ.

Leave A Reply

Your email address will not be published.