Chewing Gum : ಕ್ರೀಡಾಪಟುಗಳು ಆಡುವಾಗ ಚ್ಯೂಯಿಂಗ್‌ ಗಮ್‌ ತಿನ್ನಲು ನಿಖರವಾದ ಕಾರಣ ಏನು ಗೊತ್ತಾ?

Chewing Gum : ನಮ್ಮ ಸುತ್ತಮುತ್ತ (surrounding) ಹಲವರು ಸಂಗತಿಗಳು ನಡೆಯುತ್ತಿರುತ್ತವೆ. ನಾವು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲ. ಇನ್ನು ನಮಗೆ ಕೆಲವು ವಿಷಯಗಳು (topic) ಗೊತ್ತಿರುತ್ತವೆ. ಆದರೆ ಅದರ ಹಿಂದಿನ ಕಾರಣ ಗೊತ್ತಿರುವುದಿಲ್ಲ. ಗೊತ್ತು – ಗೊತ್ತಿಲ್ಲ ಅನ್ನೋ ವಿಷಯಗಳಲ್ಲಿ ಇಲ್ಲೊಂದು ಹೊಸ ವಿಷಯ ಇದೆ ನೋಡಿ ಅದೇನಪ್ಪ ಅಂದ್ರೆ ಕ್ರೀಡಾಪಟುಗಳು (sportsman) ಬಬಲ್ ಗಮ್ (bubblegum) ಅಥವಾ ಚ್ಯುಯಿಂಗ್‌ ಗಮ್‌(Chewing Gum) ತಿನ್ನುವ ವಿಷಯ ಎಲ್ಲರಿಗೂ ಗೊತ್ತು. ಆದರೆ ಅದರ ಹಿಂದಿನ ಕಾರಣ ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ.

 

ಹೌದು, ಕ್ರೀಡೆಯ ಸಮಯದಲ್ಲಿ ಅನೇಕ ಕ್ರೀಡಾಪಟುಗಳು ಬಬಲ್ ಗಮ್ ತಿನ್ನುತ್ತಾ ಇರುತ್ತಾರೆ. ಆದರೆ ಅದನ್ನು ಯಾಕೆ ತಿನ್ನುತ್ತಾರೆ ಎಂದಾದರೂ ಯೋಚಿಸಿದ್ದೀರಾ? ಇಲ್ಲಿದೆ ನೋಡಿ ಅದರ ಸಂಪೂರ್ಣ ಮಾಹಿತಿ

ಬಬಲ್ ಗಮ್(bubble gum) ತಿನ್ನುವುದು ಆಟಗಾರರ ಒಂದು ಶೈಲಿ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಇದು ಸಂಪೂರ್ಣವಾಗಿ ಸರಿಯಲ್ಲ. ಇದರ ಹಿಂದೆ ನಿಜಕ್ಕೂ ವೈಜ್ಞಾನಿಕ (scientist) ಕಾರಣವಿದೆ.

ಚೂಯಿಂಗ್ ಗಮ್ (chewing gum) ತಿನ್ನುವಾಗ ದವಡೆಯ ಒತ್ತಡವನ್ನು ನಿಯಂತ್ರಿಸುವ ಬಾಯಿಯಲ್ಲಿರುವ ಗ್ರಾಹಕಗಳು ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಇದರಿಂದಾಗಿ ಮೆದುಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ. ಅದ್ದರಿಂದ ಮೆದುಳು (brain) ಎಲ್ಲಾ ವಿಷಯದ ಬಗ್ಗೆ ಹೆಚ್ಚು ಗಮಸಹರಿಸುತ್ತದೆ. ಮತ್ತು ಚೂಯಿಂಗ್ ಗಮ್ ಹೆಚ್ಚು ವೇಗವಾಗಿ ದೇಹದ ಚಟುವಟಿಕೆಗಳನ್ನು ಹೆಚ್ಚಿಸುವುದರ ಜೊತೆಗೆ ಹೃದಯ ಬಡಿತವನ್ನು (heartbeat) ವೇಗಗೊಳಿಸುತ್ತದೆ.

ಕ್ರಿಕೆಟ್ ಆಟಗಾರರು ಅಥವಾ ಅಥ್ಲೆಟ್(athlete) ಗಳು ಚೂಯಿಂಗ್ ಗಮ್ ತಿನ್ನುವ ಮುಖ್ಯ ಕಾರಣವೆಂದರೆ ಆಟದ ಮೇಲೆ ಹೆಚ್ಚು ಗಮನ ಹರಿಸಲು ಮತ್ತು ಉತ್ತಮವಾಗಿ ಆಟ ಆಡಲು ಸಹಾಯವಾಗುತ್ತದೆ ಎಂಬ ಕಾರಣಕ್ಕಾಗಿ.

ಚೂಯಿಂಗ್ ಗಮ್(chewing gum) ಅಗಿಯುತ್ತಿದ್ದರೆ ಕೆಲಸ ಕಾರ್ಯದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನಿಧಾನವಾಗಿ ಅಗಿಯುತ್ತಿದ್ದರೆ, ಕೆಲಸದ ವೇಗವು(work speed) ನಿಧಾನಗೊಳ್ಳುತ್ತದೆ.

Leave A Reply

Your email address will not be published.