Manvita Kamat’s mother is no more: ಟಗರು ಪುಟ್ಟಿ ಖ್ಯಾತಿಯ ನಟಿ ಮಾನ್ವಿತಾ ಕಾಮತ್‌ ತಾಯಿ ಇನ್ನಿಲ್ಲ

Manvita Kamat’s mother no more : ಟಗರು ಪುಟ್ಟಿ(Tagaru Putti) ಖ್ಯಾತಿಯ, ಕೆಂಡಸಂಪಿಗೆಯ(Kendasampige) ನಟಿ ಮಾನ್ವಿತಾ ಕಾಮತ್‌(Manvita Kamat) ತಾಯಿ ಸುಜಾತಾ ಕಾಮತ್(Sujata Kamath) ಅವರು ವಿಧಿವಶರಾಗಿದ್ದಾರೆ (Manvita Kamat’s mother no more). ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬನ್ನೇರು ಘಟ್ಟ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರು. ಆಧರೆ ಇಂದು (ಏಪ್ರಿಲ್‌ 15ರಂದು) ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.

 

ಮಂಗಳೂರಿನಲ್ಲಿ ಪತ್ರಿಕೋದ್ಯಮ ಮತ್ತು ಇಂಗ್ಲೀಷ್ ಸಾಹತ್ಯದಲ್ಲಿ ಪದವಿ ಪಡೆದ ಮನ್ವಿತಾ ಅವರು ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ನಂತರ ದುನಿಯಾ ಸೂರಿಯವರ `ಕೆಂಡಸಂಪಿಗೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್, ತಮ್ಮ ಮೊದಲ ಚಿತ್ರದಲ್ಲಿಯೇ ಸೈಮಾ ಪ್ರಶಸ್ತಿ ಪಡೆದರು. ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ ಮಾನ್ವಿತಾಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಟಗರು ಚಿತ್ರ. ಸದ್ಯ ಇವರು ಕನ್ನಡದ ಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದರು.

ಅಂದಹಾಗೆ ಕನ್ನಡಿಗರ ಮನೆಮಾತಾದ ನಟಿ ಮಾನ್ವಿತಾ ಕಾಮತ್‌, ಕೆಲ ದಿನಗಳಿಂದ ಚಿತ್ರರಂಗದಿಂದ ಕೊಂಚ ಗ್ಯಾಪ್‌ ಪಡೆದಿದ್ದು ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವಿದ್ಯಾಭ್ಯಾಸದಿಂದಾಗಿ ಚಿತ್ರರಂಗದಿಂದ ಸಣ್ಣ ಬ್ರೇಕ್‌ ತೆಗೆದುಕೊಂಡಿದ್ದ ಟಗರು ಪುಟ್ಟಿ, ಅಥರ್ವ ಆರ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಈ ಚಿತ್ರದಲ್ಲಿ ಲವ್‌ಲಿ ಸ್ಟಾರ್‌ ಪ್ರೇಮ್‌ಗೆ ಜೋಡಿಯಾಗಿ ಮಾನ್ವಿತ ಕಾಮತ್‌ ಬಣ್ಣ ಹಚ್ಚಿದ್ದಾರೆ.

Leave A Reply

Your email address will not be published.