ಉತ್ತರ ಪ್ರದೇಶದ ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಮಟಾಷ್ !
ಪ್ರಯಾಗರಾಜ್, ಉತ್ತರ ಪ್ರದೇಶ: ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಗರದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ಮಾಫಿಯಾ ದೊರೆ, ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.
Mafia-turned-politician Atiq Ahmed and his brother Ashraf Ahmed were shot dead while being taken for medical treatment in Uttar Pradesh’s Prayagraj city.
ಈ ಘಟನೆಯು ಇಂದು ಏಪ್ರಿಲ್ 15, 2023 ರ ಸಂಜೆ ಸಂಭವಿಸಿದೆ ಮತ್ತು ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ.
ಅತೀಕ್ ಅಹ್ಮದ್ ಫುಲ್ಪುರ್ ಕ್ಷೇತ್ರದ ಮಾಜಿ ಸಂಸದರಾಗಿದ್ದು, ಅಪರಾಧ ಚಟುವಟಿಕೆಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದರು. ಕೊಲೆ, ಸುಲಿಗೆ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಈತನನ್ನು ಹೆಚ್ಚಿನ ಭದ್ರತೆಯ ಜೈಲಿನಲ್ಲಿ ಇರಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಪೊಲೀಸ್ ರಕ್ಷಣೆಯಲ್ಲಿ ಪ್ರಯಾಗ್‌ರಾಜ್‌ಗೆ ಕರೆತರಲಾಯಿತು. ಆದರೆ ಅಲ್ಲಿ ಮಾರ್ಗ ಮಧ್ಯೆ ಆತನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಆದರೆ ಆತ ಸತ್ತದ್ದು ಪೊಲೀಸ್ ಎನ್‌ಕೌಂಟರ್‌ನಲ್ಲಿ ಅಲ್ಲ. ಬೇರೆಯವರಿಂದ ಕೊಲ್ಲಲ್ಪಟ್ಟಿದ್ದಾರೆ ಎಂಬುದು ಈಗ ಸ್ಪಷ್ಟವಾಗುತ್ತಿದೆ.
ಕೇವಲ ಎರಡೇ ದಿನಗಳ ಹಿಂದೆ ಗುರುವಾರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಅತೀಕ್‌ನ ಮಗ ಕೊಲ್ಲಲ್ಪಟ್ಟಿದ್ದ. ಆಗ ಅತೀಕ್‌ಗೆ ತನ್ನ ಮಗನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕೂಡಾ ಸಾಧ್ಯವಾಗಿರಲಿಲ್ಲ.
ಅತೀಕ್ ಅಹಮ್ಮದ್ ನು 2005 ರಲ್ಲಿ ನಡೆದ ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯಾ ಪ್ರಕರಣದಲ್ಲಿ ಆರೋಪಿಯಾಗಿ ಶಿಕ್ಷೆ ಅನುಭವಿಸುತ್ತಿದ್ದ. ಇತ್ತೀಚೆಗೆ ರಾಜು ಪಾಲ್ ಹತ್ಯಾ ಪ್ರಕರಣದ ಪ್ರಮುಖ ಸಾಕ್ಷಿಯಾದ ಉಮೇಶ್ ಪಾಲ್ ನನ್ನು ಅತೀಕ್ ಮತ್ತವನ ಮಕ್ಕಳು ಮತ್ತು ತಂಡ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆಗ ಇನ್ನಿತರ ಇಬ್ಬರು ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದರು. ಘಟನೆಯ ಸುದ್ದಿ ತಿಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸೌಧದಲ್ಲಿ ಅಬ್ಬರಿಸಿದ್ದರು. ಮಣ್ಣಿನಲ್ಲಿ ಬೂಟು ಹಾಕುತ್ತೇನೆ ಎಂದು ತುಂಬಿದ ವಿಧಾನಸಭೆಯಲ್ಲಿ ಘರ್ಜಿಸಿದ್ದರು. ಇದೀಗ ಅತಿಕ್ ಅಹಮದ್ನ ಬಹುತೇಕ ಮರ್ಡರಸ್ ಫ್ಯಾಮಿಲಿ ಮರಣ ಹೊಂದಿದ್ದಾರೆ.