Export of monkeys : ಚೀನಾಕ್ಕೆ 1 ಲಕ್ಷ ಮಂಗಗಳನ್ನು ರಫ್ತು ಮಾಡಲು ಮುಂದಾದ ಶ್ರೀಲಂಕಾ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Export of monkeys : ಇತ್ತೀಚೆಗೆ ಪಾಕ್‌ನಿಂದ ಕತ್ತೆಗಳನ್ನು ಅಮದು ಮಾಡಿಕೊಂಡಿದ್ದ ಚೀನಾ ದೇಶ ಸಾಕಷ್ಟು ಸುದ್ಧಿಯಾಗಿತ್ತು. ಇದರ ಬೆನ್ನಲೇ ಚೀನಾ ಮತ್ತೆ ಇಂತಹುದೇ ಕಾರ್ಯಕ್ಕೆ ಮುಂದಾಗಿದ್ದು, ಇದೀಗ ಶ್ರೀಲಂಕಾದಿಂದ ಬರೋಬ್ಬರಿ 1 ಲಕ್ಷದಷ್ಟು ಮಂಗಗಳನ್ನು ಖರೀದಿ ಮಾಡಲು ಮುಂದಾಗಿದೆ. ಆದರೆ ಲಂಕೆಯು ಚೀನಾಕ್ಕೆ ಯಾಕೆ ಮಂಗಗಳನ್ನು ರಫ್ತು ( Export of monkeys) ಮಾಡುತ್ತಿದೆ ಎಂದು ನೀವೇನಾದರು ತಿಳಿದರೆ ಖಂಡಿತಾ ಶಾಕ್ ಆಗ್ತೀರಾ.

ಹೌದು, ಚೀನಾವು ತನ್ನ 1 ಸಾವಿರ ಮೃಗಾಲಯಗಳಿಗೆ ಮಂಗಳಗಳು ಬೇಕು ಎಂದು ಶ್ರೀಲಂಕಾವನ್ನು ಕೇಳಿದೆ. ಅದಕ್ಕಾಗಿ ಶ್ರೀಲಂಕಾ ತನ್ನ ಟೋಕ್‌ ಮಕಾಕ್‌ ಮಂಗಗಳನ್ನು ಚೀನಾಕ್ಕೆ ರವಾನಿಸುವ ನಿಟ್ಟಿನಲ್ಲಿ ಹಾಗೂ ಚೀನಾದ ಮನವಿಯನ್ನು ಪರಿಗಣಿಸಲು ಸಮಿತಿಯನ್ನು ರಚನೆ ಮಾಡಿದೆ. ಒಂದು ಅಂದಾಜಿನ ಪ್ರಕಾರ ಚೀನಾಕ್ಕೆ ಒಂದು ಲಕ್ಷ ಮಂಗಗಳನ್ನು ರವಾನೆ ಮಾಡುವ ಸಂಪೂರ್ಣ ಯೋಜನೆ ಶ್ರೀಲಂಕಾದಲ್ಲಿ ಸಿದ್ಧವಾಗುತ್ತಿದೆ.

ಆದರೆ ಈ ನಡುವೆ ಶ್ರೀಲಂಕಾದಲ್ಲಿನ ಪರಿಸರವಾದಿಗಳು ಸ್ಥಳೀಯ ಸರ್ಕಾರ ಯಾವುದೇ ಕಾರಣಕ್ಕೂ ಈ ಮನವಿಯನ್ನು ಪರಿಗಣಿಸಬಾರದು. ತನ್ನ ಮೃಗಾಲಯಗಳಿಗೆ ಕೋತಿಗಳು ಬೇಕು ಎಂದು ಚೀನಾ ಹೇಳಿದ್ದರೂ, ಅದರ ಹಿಂದಿನ ಉದ್ದೇಶ ಬೇರೆಯದೇ ಆಗಿದೆ. ಚೀನಾ ಮಾಂಸಕ್ಕಾಗಿ ಈ ಮಂಗಗಳನ್ನು ಖರೀದಿ ಮಾಡುತ್ತಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ಹೊಸ ಮಾರ್ಗೋಪಾಯಗಳನ್ನು ಹುಡುಕುತ್ತಿದ್ದು, ಚೀನಾಕ್ಕೆ ಅಳಿವಿನಂಚಿನಲ್ಲಿರುವ ಒಂದು ಲಕ್ಷ ಮಂಗಗಳನ್ನು ರವಾನಿಸಿ ತನ್ನ ಸಾಲದ ಹೊರೆಯನ್ನು ಕಡಿಮೆ ಮಾಡಲು ಚಿಂತಿಸಿದೆ ಎಂದು ಸುದ್ಧಿಯಾಗುತ್ತಿದೆ.

ಅಂದಹಾಗೆ ಮಂಗಗಳ ರವಾನೆ ಬಗ್ಗೆ ಕೃಷಿ ಸಚಿವ ಮಹಿಂದಾ ಅಮರವೀರ ನೇತೃತ್ವದಲ್ಲಿ ಮಂಗಳವಾರ ವಿಶೇಷ ಸಭೆ ನಡೆದಿದ್ದು, ಕೃಷಿ ಸಚಿವಾಲಯ, ರಾಷ್ಟ್ರೀಯ ಪ್ರಾಣಿಶಾಸ್ತ್ರ ಇಲಾಖೆ, ವನ್ಯಜೀವಿ ಸಂಕರಕ್ಷಣಾ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈ ಕುರಿತು ಮಾತನಾಡಿದ ಮಹೀಂದಾ ಅವರು “ಚೀನಾವು ತನ್ನ 1 ಸಾವಿರ ಮೃಗಾಲಯಗಳಿಗೆ ಮಂಗಳಗಳು ಬೇಕು ಎಂದು ಶ್ರೀಲಂಕಾವನ್ನು ಕೇಳಿದೆ. ಅದಕ್ಕಾಗಿ ಶ್ರೀಲಂಕಾ ತನ್ನ ಟೋಕ್‌ ಮಕಾಕ್‌ ಮಂಗಗಳನ್ನು ಚೀನಾಕ್ಕೆ ರವಾನಿಸುವ ನಿಟ್ಟಿನಲ್ಲಿ ಹಾಗೂ ಚೀನಾದ ಮನವಿಯನ್ನು ಪರಿಗಣಿಸಲು ಸಮಿತಿಯನ್ನು ರಚನೆ ಮಾಡಿದೆ. ಒಂದು ಅಂದಾಜಿನ ಪ್ರಕಾರ ಚೀನಾಕ್ಕೆ ಒಂದು ಲಕ್ಷ ಮಂಗಗಳನ್ನು ರವಾನೆ ಮಾಡುವ ಸಂಪೂರ್ಣ ಯೋಜನೆ ಶ್ರೀಲಂಕಾದಲ್ಲಿ ಸಿದ್ಧವಾಗುತ್ತಿದೆ” ಎಂದು ಹೇಳಿದ್ದಾರೆ.

ಇನ್ನು ಟೋಕ್ ಮಕಾಕ್’ ಮಂಗಗಳ ಸಂಖ್ಯೆ 30 ಲಕ್ಷ ಇದ್ದು, ಇವು ರೈತರ ಬೆಳೆಗಳನ್ನು ಹಾಳು ಮಾಡುತ್ತಿವೆ. ಇವುಗಳನ್ನು ಚೀನಾಕ್ಕೆ ರವಾನಿಸುವುದರಿಂದ ಮಂಗಗಳ ಉಪಟಳಕ್ಕೂ ಕಡಿವಾಣ ಹಾಕಬಹುದು ಎಂಬ ಅಂಶ ಸಭೆಯಲ್ಲಿ ವ್ಯಕ್ತವಾಯಿತು. ವನ್ಯಜೀವಿಗಳ ರಫ್ತಿಗೆ ಲಂಕಾದಲ್ಲಿ ನಿರ್ಬಂಧ ಇರುವ ಕಾರಣ ಮಂಗಗಳ ರವಾನೆಗೆ ಇರುವ ಕಾನೂನು ಪ್ರಕ್ರಿಯೆ ಬಗ್ಗೆ ಅಧ್ಯಯನ ನಡೆಸಲು ಸಮಿತಿ ನೇಮಿಸಬೇಕೆಂಬ ಸಲಹೆ ಕೂಡ ಕೇಳಿಬಂತು. ದೇಶ ನಷ್ಟದಲ್ಲಿರುವ ಕಾರಣ ಬಿಗಿ ಕ್ರಮಗಳನ್ನು ಸಡಿಲಿಸಲು ನಿರ್ಧರಿಸಿರುವ ಸರ್ಕಾರ, ಹಲವು ಪ್ರಾಣಿ-ಪಕ್ಷಿಗಳನ್ನು ಈ ವರ್ಷ ಸಂರಕ್ಷಣಾ ಪಟ್ಟಿಯಿಂದ ಕೈಬಿಟ್ಟಿದೆ. ಇದರಲ್ಲಿ ರೈತರ ಬೆಳೆ ಹಾಳು ಮಾಡುವ ನವಿಲು, ಕಾಡುಹಂದಿಗಳನ್ನು ಹತ್ಯೆಯನ್ನು ಗಂಭೀರ ಸ್ವರೂಪದ ಪ್ರಕರಣದಿಂದ ಹೊರಗಿಡಲಾಗಿದೆ.

ಚೀನಾಕ್ಕೆ ಮಕಾಕ್ ಮಂಗಗಳನ್ನು ನೀಡುವ ಮುನ್ನವೇ ಶ್ರೀಲಂಕಾದ ಪರಿಸರವಾದಿಗಳು ಇದನ್ನು ವಿರೋಧಿಸಲು ಆರಂಭಿಸಿದ್ದಾರೆ. ವರದಿಗಳ ಪ್ರಕಾರ, ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಸರ್ಕಾರವು ದೇಶದಲ್ಲಿ ಮಂಗಗಳ ಗಣತಿಯನ್ನು ಮಾಡಬೇಕು ಎಂದು ಆಗ್ರಹಪಡಿಸಿದ್ದಾರೆ. ಅದಲ್ಲದೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಮಂಗಗಳನ್ನು ಚೀನಾ ಖರೀದಿ ಮಾಡುವ ಹಿಂದಿನ ಮೂಲ ಕಾರಣವೇನು ಎಂದೂ ಪ್ರಶ್ನೆ ಮಾಡಿದ್ದಾರೆ.

Leave A Reply

Your email address will not be published.