Hair smells like sweat : ಬಿಸಿಲಿ ನ ಬೆವರಿನಿಂದ ತಲೆ ಕೂದಲು ವಾಸನೆ ಬರುತಿದ್ಯಾ? ಹಾಗಾದ್ರೆ ಇದಕ್ಕೆ ಪರಿಹಾರ ಇಲ್ಲಿದೆ ನೋಡಿ!
Hair smells like sweat : ದಿನೇ ದಿನೇ ಬಿಸಿಲು ಹೆಚ್ಚಾಗುತ್ತಲೇ ಇದೆ. ಈ ಬೇಸಿಗೆ ಕಾಲದಲ್ಲಿ ಜನರು ಬೇವರುತ್ತಲೇ ಇರುತ್ತಾರೆ. ದಿನಕ್ಕೇ ಎರಡು ಬಾರಿ ಸ್ನಾನ ಮಾಡಿದರು ಕೂಡ ಬೆವರು ಸುರಿಯುವುದು ನಿಲ್ಲುವುದಿಲ್ಲ. ತಲೆಯಿಂದ ಪಾದದವರೆಗೂ ಒಂದೇ ಸಮನೆ ಬೇವರುತ್ತಲೇ ಇರುತ್ತವೆ. ಹೀಗಿರುವಾಗ ತಲೆ ಕೂದಲು (Hair smells like sweat) ಬೇವರಿ ಅಂಟಲು ಶುರುವಾಗುವುದಲ್ಲದೆ ವಾಸನೆ ಕೂಡ ಬರುತ್ತದೆ. ಇದು ದೊಡ್ದ ಸಮಸ್ಯೆಯನ್ನೆ ಶುರು ಮಾಡುತ್ತದೆ.
ಈ ಎಲ್ಲಾ ಸಮಸ್ಯೆಗಳಿಗೂ ಇಲ್ಲಿದೆ ಸಿಂಪಲ್ ಪರಿಹಾರ.
ಬೇಸಿಗೆ ಪ್ರಾರಂಭವಾಗುತ್ತಲೇ ತಲೆ ಕೂದಲಿನ ಸಮಸ್ಯೆಯನ್ನು ಜೊತೆಯಲ್ಲೇ ಹಿಡಿದು ಬರುತ್ತದೆ. ಹಾಗಾಗೀ ಈ ಸಮಯದಲ್ಲಿ ಕೂದಲನ್ನು ವಿಶೇಷವಾಗಿ ಕಾಳಜಿ ವಹಿಸುವುದು ಅಗತ್ಯ. ಕೂದಲು ಕೊಳೆ, ಬೆವರು(sweat) , ವಾಸನೆ(smell) , ಹಾಗೂ ಕೂದಲಲ್ಲಿ ಎಣ್ಣೆ (oil) ಅಂಶ ಕೂಡ ಶೇಖರಣೆ ಅಗುತ್ತದೆ. ಇದಕ್ಕೆಲ್ಲ ಸೂಕ್ತ ಪರಿಹಾರ ಅಳವಡಿಸಿಕೊಳ್ಳಿ.
ವಾರಕ್ಕೆ ಎರಡು ಬಾರಿ ತಲೆ ಸ್ನಾನ ಮಾಡಿರಿ : ವಾರಕ್ಕೆ ಎರಡು ಬಾರಿ ತಲೆಗೆ ಎಣ್ಣೆ ಹಚ್ಚಿ ಜೊತೆಗೆ ಕೂದಲಿನಲ್ಲಿರುವ ಬೆವರನ್ನು ತೊಲಗಿಸಲು ವಾರಕ್ಕೆ ಎರಡು ಬಾರಿ ತಲೆಸ್ನಾನ ಮಾಡಿ.
ರೋಸ್ ವಾಟರ್ ಬಳಸಿ : ಕೂದಲಿನಲ್ಲಿ ಅತಿಯಾದ ಬೆವರುವುದು ಒಳ್ಳೆಯದಲ್ಲ. ಬೆವರುವಿಕೆಯಿಂದಾಗಿ ನೆತ್ತಿಯ ಮೇಲೆ ಬ್ಯಾಕ್ಟೀರಿಯಾದ ಬೆಳವಣಿಗೆಯ ಹೆಚ್ಚಾಗುತ್ತದೆ. ಕೂದಲಿನ ಜಿಗುಟುತನದಿಂದ ತೊಂದರೆಯಾಗುತ್ತದೆ. ಅದ್ದರಿಂದ ಹತ್ತಿಯ ಸಹಾಯದಿಂದ ರೋಸ್ ವಾಟರ್ (rose water) ಅನ್ನು ತಲೆಗೆ ಹಚ್ಚಿಕೊಳ್ಳಿ. ಇದರಿಂದ ಜಿಗುಟುತನ ಸಮಸ್ಯೆ ದೂರವಾಗುತ್ತದೆ.
ಕೂದಲಿಗೆ ನಿಂಬೆ ಹಚ್ಚಿ: ನಿಮ್ಮ ಕೂದಲಲ್ಲಿ ಎಣ್ಣೆ (oil) ಹಾಗೆಯೇ ಇದ್ದರೆ, ನೀವು ನಿಂಬೆರಸ(Lemon) ವನ್ನು ಬಳಸಬಹುದು. ನಿಂಬೆರಸದಿಂದ ನಿಮ್ಮ ಕೂದಲಿನ ಜಿಗುಟುತನವನ್ನು ಹೋಗಲಾಡಿಸಬಹುದು. ರಸವನ್ನು ನೀರಿನಲ್ಲಿ ಬೆರೆಸಿ ಹಚ್ಚಿ, 15 ನಿಮಿಷಗಳ ಹಾಗೆಯೇ ಬಿಟ್ಟು ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ.
ಇವುಗಳು ಸಾಮಾನ್ಯವಾಗಿ ಮನೆಮದ್ದುಗಳು, ನಿಮಗೇನಾದರೂ ಇಲ್ಲಿನ ಪರಿಹಾರ ಅಳವಡಿಸಿಕೊಳ್ಳಲು ಅನುಮಾನವಿದ್ದರೆ ಹತ್ತಿರ ವೈದ್ಯರ ಸಲಹೆ ಪಡೆದುಕೊಳ್ಳಿ.
ಇದನ್ನು ಓದಿ : Draupadi Murmu : ಕರ್ನಾಟಕದ ದ್ರೌಪದಿ ಮುರ್ಮು ಭಾಗೀರಥಿ ಮುರುಳ್ಯ – ಕೋಟ