Children Marriage with Dogs : ದುಷ್ಟ ಶಕ್ತಿಗಳನ್ನು ದೂರ ಮಾಡಲು ಪುಟ್ಟ ಮಕ್ಕಳನ್ನು ಬೀದಿ ನಾಯಿ ಜೊತೆ ಮದುವೆ ಮಾಡಿಸಿದ ಪೋಷಕರು!
Children marriage with dogs : ಈಗಿನ ಕಾಲದಲ್ಲಂತೂ ಎಲ್ಲರೂ ವಿದ್ಯಾವಂತರೇ (educated people) ಆಗಿಬಿಟ್ಟಿದ್ದಾರೆ. ವಿದ್ಯಾವಂತರಾದರು ಸಹ ಕೆಲವರು ಮೂಢನಂಬಿಕೆಯನ್ನು ನಂಬುತ್ತಾರೆ. ಅದರಲ್ಲಿಯೂ ಶಿಕ್ಷಣ (education) ಪಡೆಯದ ಜನರನ್ನು ಕೇಳುವುದೇ ಬೇಡ ಬಿಡಿ. ಮೂಡನಂಬಿಕೆಗಳಿಂದ ಇನ್ನೂ ಹೊರ ಬಂದಿಲ್ಲ. ಈ ಸಾಮಾಜಿಕ ಪಿಡುಗು ಇನ್ನೂ ಕೆಲವೆಡೆ ಹಾಗೆಯೇ ಜೀವಂತವಾಗಿದೆ ಎಂಬುದಕ್ಕೆ ಒಡಿಶಾದಲ್ಲಿ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿಯಾಗಿದೆ ನೋಡಿ.
ಮಳೆ ಬರಲೆಂದು ಕಪ್ಪೆಗಳಿಗೆ ಮದುವೆ ಮಾಡಿಸುವುದನ್ನು ನಾವು ಕೇಳಿರುತ್ತೇವೆ. ಆದರೆ ಒಡಿಶಾದ ಬಾಲಸೋರ್ (Odisha Balasore) ಜಿಲ್ಲೆಯ ಬಂಧಸಾಹಿ ಎಂಬ ಗ್ರಾಮದಲ್ಲಿ ದುಷ್ಟಶಕ್ತಿಗಳಿಂದ ಯಾವುದೇ ರೀತಿಯ ತೊಂದರೆ ಎದುರಾಗಬಾರದು ಅವರು ಜೀವನದಲ್ಲಿ (life) ಸಂತೋಷದಿಂದ ಇರಬೇಕು ಎಂಬ ಕಾರಣಕ್ಕೆ ಬೀದಿ ನಾಯಿಗಳ ಜೊತೆ ಮಕ್ಕಳ (children) ಮದುವೆ ಮಾಡಿಸಲಾಗಿದೆ.
ಬುಡಕಟ್ಟು ಸಮುದಾಯದ ಜನರು ವಾಸಿಸುವ ಗ್ರಾಮ ಇದು. ಇಲ್ಲಿ ಮಗುವಿನ ಮೇಲಿನ ದವಡೆಯ ಮೇಲೆ ಮೊದಲ ಹಲ್ಲು (teeth) ಹುಟ್ಟುವುದು ತನ್ನ ತಂದೆ ತಾಯಿಗೆ ಮತ್ತು ಅ ಮಗುವಿಗೆ ಅಶುಭ ಎಂದು ಇಲ್ಲಿನ ಜನರು ಮೊದಲಿನಿಂದಲೂ ನಂಬಿಕೊಂಡು(belief) ಬಂದಿದ್ದಾರೆ. ಹಾಗಾಗಿ ಈ ಅಶುಭ ಇರುವ ಕಾರಣ ನಾಯಿಗಳ ಜೊತೆ ಮಗುವಿನ ಮದುವೆ (children marriage with dogs) ಮಾಡಿಸದಿದ್ದರೆ ಭವಿಷ್ಯದಲ್ಲಿ ಮಗುವಿಗೆ ಅಪಾಯ ಎದುರಾಗುತ್ತದೆ ಎಂದು ಆ ಊರಿನ ಜನಗಳು ನಂಬಿದ್ದಾರೆ.
ಹಾಗಾದರೆ ಏಕೆ ಈ ನಾಯಿಯ ಜೊತೆ ಮಗುವಿನ ಮದುವೆ ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇಲ್ಲಿದೆ ನೋಡಿ ಅದಕ್ಕೆ ಸರಿಯಾದ ಉತ್ತರ. ಏಕೆಂದರೆ, ನಾಯಿಗಳ ಜೊತೆ ಮದುವೆ (marriage)ಮಾಡಿಸಿದರೆ ಆ ಮಕ್ಕಳಿಗೆ ಭವಿಷ್ಯದಲ್ಲಿ ಎದುರಾಗುವ ಕಂಟಕಗಳೆಲ್ಲಾ ನಾಯಿಗಳ ಮೇಲೆ ಹಾದು ಹೋಗುತ್ತದೆ ಎಂಬ ಮೂಡನಂಬಿಕೆಯನ್ನು ಇವರು ಮೊದಲಿನಿಂದಲೂ ನಂಬಿಕೊಂಡು(trust) ಬಂದಿದ್ದಾರೆ. ಹಾಗಾಗಿ ಈ ಒಡಿಸ್ಸಾದ ಬುಡಕಟ್ಟು ಸಮುದಾಯದ ಜನರು ವಾಸಿಸುವ ಪ್ರದೇಶದಲ್ಲಿ ನಾಯಿಯ ಜೊತೆ ಮಗುವಿನ (child)ಮದುವೆಯನ್ನು ಮಾಡಿಸುತ್ತಾರೆ.
ಇದಕ್ಕಿಂತ ಮುಂಚೆ ಮೇಲಿನ ದವಡೆಯ ಮೇಲೆ ಮೊದಲ ಹಲ್ಲು ಹುಟ್ಟಿದ ಇಬ್ಬರು ಮಕ್ಕಳಿಗೆ ಬೀದಿ ನಾಯಿಗಳ ಜೊತೆ ಮದುವೆ ಮಾಡಿಸಲಾಗಿದೆ. ಮಚುವಾ ಸಿಂಗ್ ಎಂಬವರ 11 ವರ್ಷದ ಮಗನಿಗೆ ಹೆಣ್ಣು ನಾಯಿ ಹಾಗೂ ಮನಶ್ ಸಿಂಗ್ ಎಂಬವರ 5 ವರ್ಷದ ಮಗಳಿಗೆ ಗಂಡು ನಾಯಿಯ ಜೊತೆ ಯಾವ ರೀತಿ ನಾವು ಗಂಡು ಹೆಣ್ಣಿಗೆ ಮದುವೆ ಮಾಡಿಸುತ್ತೇವೋ ಹಾಗೆಯೇ ಮಗು ಮತ್ತು ನಾಯಿಯ ಜೊತೆಗೆ ಶಾಸ್ತ್ರಬದ್ಧವಾಗಿ ವಿವಾಹ ಮಾಡಿಸಿದ್ದಾರೆ.
ಈ ನಾಯಿಯ ಜೊತೆ ಮದುವೆ ಮಾಡಿಸುವ ಸಂಪ್ರದಾಯ ಹೇಗಿದೆ ಎಂದರೆ ಏಳು ಮನೆಗಳಿಂದ ಸಾಸಿವೆ ಎಣ್ಣೆ, ಅರಿಶಿನ ಮತ್ತು ನೀರನ್ನು ತಂದು, ಸೂರ್ಯ ದೇವರು ಮತ್ತು ಗ್ರಾಮ ದೇವತೆಗೆ ಸಿಂಧೂರ ಮತ್ತು ಆಭರಣಗಳನ್ನು ಅರ್ಪಿಸಿ, ಮದುವೆಯ ಸಾಂಪ್ರದಾಯಿಕ (culture) ಆಚರಣೆಗಳನ್ನು ನಡೆಸಿ ನಾಯಿಗಳ ಜೊತೆ ಮಕ್ಕಳ ಮದುವೆ ಮಾಡಿಸುತ್ತಾರೆ. ಯಾವ ರೀತಿ ಗಂಡು ಹೆಣ್ಣಿನ (boy and girl)ಮದುವೆ ಕಾರ್ಯಕ್ರಮಕ್ಕೆ ಇಡೀ ಊರೇ ಸಾಕ್ಷಿಯಾಗುತ್ತದೆಯೋ ಅದೇ ರೀತಿ ಈ ಮಗು ಮತ್ತು ನಾಯಿಯ ಮದುವೆ ಕಾರ್ಯಕ್ರಮಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಗಿತ್ತು.
ಹಾಗೆಯೇ ಇದರ ಜೊತೆಗೆ ಬುಡಕಟ್ಟು ಜನಾಂಗದ ನೃತ್ಯ ಮತ್ತು ಹಾಡುಗಳು ಇದ್ದವು. ಹೀಗೆ ಸಂಪ್ರದಾಯ ಬದ್ಧವಾಗಿ ನಾಯಿಗಳ(dogs) ಜೊತೆ ಮಕ್ಕಳ ಮದುವೆ ಮಾಡಿಸಿದರೆ ಗ್ರಹಗಳನ್ನು ಮೆಚ್ಚಿಸಿ ದುಷ್ಟಶಕ್ತಿಗಳಿಂದ ಮಕ್ಕಳನ್ನು ದೂರ ಇಡಬಹುದು ಎನ್ನುತ್ತಾರೆ ಇಲ್ಲಿನ ಜನರು(people). ಈ ಮದುವೆಯನ್ನು ಬಹಳ ವಿಜೃಂಭಣೆಯಿಂದ ಮಾಡಿಕೊಡುತ್ತಾರೆ. ಜನರು ಎಷ್ಟರಮಟ್ಟಿಗೆ ಮೂಢನಂಬಿಕೆಯನ್ನು ನಂಬುತ್ತಾರೆ ಎಂಬುದನ್ನು ಇದನ್ನು ನೋಡಿದ ಬಳಿಕ ತಿಳಿದು ಬರುತ್ತದೆ.