CAPF Constable Exams : ಪೊಲೀಸ್ ಕಾನ್’ಸ್ಟೇಬಲ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ! ಇನ್ಮುಂದೆ ಕನ್ನಡ ಸೇರಿ 13 ಭಾಷೆಗಳಲ್ಲಿ ಸುಲಭವಾಗಿ ಬರೆಯಬಹುದು ಪರೀಕ್ಷೆ

CAPF Constable Exams:  ಸಶಸ್ತ್ರ ಪೊಲೀಸ್ ಪಡೆಯ ಕೇಂದ್ರ ಪರೀಕ್ಷೆಯನ್ನು( CAPF Constable Exams) ಒಟ್ಟು 13 ಭಾಷೆಗಳಲ್ಲಿ ಬರೆಯಲು ಅನುಮತಿ ನೀಡಿದೆ ಸರ್ಕಾರ. ಇನ್ನೇನೂ ಕೇಂದ್ರ ಪರೀಕ್ಷೆಯು ಶುರು ಆಗಲಿದೆ. ಈ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯು ಹಿಂದಿ, ಇಂಗ್ಲೀಷ್ ಜೊತೆಗೆ ಕನ್ನಡ, ಅಸ್ಸಾಮಿ, ಬೆಂಗಾಲಿ, ಮರಾಠಿ, ಗುಜರಾತಿ, ಮಲಯಾಳಂ, ತಮಿಳು, ತೆಲುಗು, ಉರ್ದು, ಒಡಿಯಾ, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಯಲ್ಲಿ ಇರಲಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (MHA) ಶನಿವಾರ ನಿರ್ಧಾರವನ್ನು ತೆಗೆದು ಕೊಂಡಿದೆ. ಈ ನಿರ್ಧಾರಕ್ಕಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಪ್ರಹ್ಲಾದ್ ಜೋಶಿ ಅವರು ಧನ್ಯವಾದ ಅರ್ಪಿಸಿದರು.

ಶನಿವಾರ ಪರೀಕ್ಷೆ ಭಾಷೆಯ ಬಗ್ಗೆ ಅಧಿಕೃತವಾಗಿ ತಿಳಿಸಿದ ನಂತರ ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ‘ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಸ್ಥಳೀಯ ಭಾಷೆಗಳಲ್ಲಿ ಆಯೋಜಿಸುವ ಐತಿಹಾಸಿಕ ನಿರ್ಧಾರವನ್ನು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸರ್ಕಾರ ಕೈಗೊಂಡಿದೆ’ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

ಭಾರತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸರ್ಕಾರ ಇಂತಹ ಅಧಿಕೃತ ನಿರ್ಧಾರ ಕೈಗೊಂಡಿರುವುದು ಸ್ಥಳೀಯ ಭಾಷೆಗಳಿಗೆ ನಿಜಕ್ಕೂ ಹೆಮ್ಮೆ ಪಡುವ ವಿಷಯವಾಗಿದೆ. ಈ ನಿರ್ಣಯದಿಂದ ಹೆಚ್ಚು ಅಭ್ಯರ್ಥಿಗಳು ಸೇವೆಗೆ ಸೇರುವ ಅವಕಾಶ ದೊರೆಯುತ್ತದೆ ಎಂದು ತಮ್ಮ ಸಂತೋಷವನ್ನು ತೋರ್ಪಡಿಸಿಕೊಂಡರು.

ಮತ್ತು ಈ ಐತಿಹಾಸಿಕ ಹಾಗೂ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿರುವುದಕ್ಕೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಹೃದಯಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತನೆ ಎಂದು ಜೋಶಿ ಟ್ವೀಟ್ ಮಾಡಿದ್ದಾರೆ.

 

2024 ರ ಜನವರಿ 1ರಿಂದ ಹಿಂದಿ ಮತ್ತು ಇಂಗ್ಲೀಷ್ ಜೊತೆಗೆ 13 ಸ್ಥಳೀಯ ಭಾಷೆಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Leave A Reply

Your email address will not be published.