BSNL Best Prepaid Offer : ಬಿಎಸ್ಎನ್ಎಲ್ ಪರಿಚಯಿಸಿದೆ ಕಡಿಮೆ ಬೆಲೆಯ ಬೆಸ್ಟ್ ಪ್ರಿಪೇಡ್ ಆಫರ್ : ಡುಯಲ್ ಸಿಮ್ ಬಳಕೆದಾರರು ಗಮನಿಸಲೇಬೇಕಾದ ರಿಚಾರ್ಜ್ ಪ್ಲಾನ್!

Share the Article

BSNL Best Prepaid Offer : ಬಿಎಸ್ಎನ್ಎಲ್ ತನ್ನ ಬಳಕೆದಾರರಿಗಾಗಿ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ರಿಚಾರ್ಜ್ ಯೋಜನೆಯನ್ನು ಹೊಸ ಹೊಸದಾಗಿ ಪರಿಚಯಿಸುತ್ತ ಬಂದಿದೆ. ಹೌದು. ಕಡಿಮೆ ಬೆಲೆಗೆ ಹೆಚ್ಚಿನ ಮಾನ್ಯತೆಯನ್ನು ನೀಡುವ ಏಕೈಕ ಟೆಲಿಕಾಂ ಕಂಪನಿ, ಭಾರತ ಸಂಚಾರ ನಿಗಮ್ ಲಿಮಿಟೆಡ್ ಹೊಸ ಕೊಡುಗೆಗಳನ್ನು ಪ್ರಾರಂಭಿಸುವ ಮೂಲಕ ತಮ್ಮ ಪ್ರಿಪೇಡ್ (BSNL Best Prepaid Offer) ರಿಚಾರ್ಜ್ ಯೋಜನೆಗಳನ್ನು ವಿಸ್ತರಿಸಿದೆ.

ಇದೀಗ ಹೊರಡಿಸಿದ ರಿಚಾರ್ಜ್ ಪ್ಲಾನ್ ಡುಯಲ್ ಸಿಮ್ ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗಿದೆ. ಎರಡು ಸಿಮ್ ಬಳಕೆ ಮಾಡುವುದು ಸಮಸ್ಯೆಯಲ್ಲ. ಆದ್ರೆ, ಎರಡು ಸಿಮ್ ಗೂ ರಿಚಾರ್ಜ್ ಮಾಡುವುದು ಬಳಕೆದಾರರಿಗೆ ದೊಡ್ಡ ಚಾಲೆಂಜ್ ಆಗಿತ್ತು. ಇಂತಹ ಸಮಸ್ಯೆ ಸುಲಭಗೊಳಿಸಲೆಂದೆ ಬಿಎಸ್ ಎನ್ ಎಲ್ ಈ ರಿಚಾರ್ಜ್ ಪ್ಲಾನ್ ಹೊರ ತಂದಿದೆ.

ಆ ಕಡಿಮೆ ಬೆಲೆಯ ಯೋಜನೆಯೇ BSNL ನ ರೂ 22 ಪ್ರಿಪೇಯ್ಡ್ ಯೋಜನೆಯಾಗಿದ್ದು, ಸಿಮ್ ಅನ್ನು ಸಕ್ರಿಯವಾಗಿಡಲು ಇದು ಕಡಿಮೆ ಬೆಲೆಯ ಯೋಜನೆಯಾಗಿದೆ. ಈ ರಿಚಾರ್ಜ್ ನ್ನು ಕಡಿಮೆ ಬಳಕೆ ಮಾಡುವ ಸಿಮ್ ಗಳು ಡೆಡ್ ಆಗದಂತೆ ನೋಡಿಕೊಳ್ಳಲು ಕೂಡ ಬಳಸಬಹುದು.

ಇದು 90 ದಿನಗಳ ಮಾನ್ಯತೆಯೊಂದಿಗೆ ಅಂದರೆ 3 ತಿಂಗಳುಗಳ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯಾಗಿದೆ. ಈ ರಿಚಾರ್ಜ್ ನಲ್ಲಿ ಸ್ಥಳೀಯ ಮತ್ತು ಎಸ್ಟಿಡಿ ಧ್ವನಿ ಕರೆ ಮಾಡುವ ಸೌಲಭ್ಯವನ್ನು ನಿಮಿಷಕ್ಕೆ 30 ಪೈಸೆ ನೀಡಲಾಗುತ್ತದೆ. ಆದರೆ ಉಚಿತ ಧ್ವನಿ ಕರೆ ಮತ್ತು ಡೇಟಾ ಪ್ರಯೋಜನ ಇದರಲ್ಲಿ ಲಭ್ಯವಿಲ್ಲ. ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನ ನೀಡುವ ಈ ಪ್ರಿಪೇಡ್ ಆಫರ್ ಉತ್ತಮವಾಗಿದೆ.

Leave A Reply