Uttar Pradesh Encounter: ಮಗನನ್ನು ಎನ್‌ಕೌಂಟರ್‌ನಲ್ಲಿ ಹೊಡೆದು ಹಾಕಿದ ಸುದ್ದಿ ಕೇಳಿ ಗಳಗಳನೆ ಅತ್ತು ಕುಸಿದು ಬಿದ್ದ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ !
Uttar Pradesh Encounter : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಎಂಬ ಟಪ್ ರಾಜಕಾರಣಿ ಕಟು ಮಾತುಗಳಿಗೆ ಮಾತ್ರ ಸೀಮಿತವಲ್ಲ, ತನ್ನ ಕಡಕ್ ನಿರ್ಧಾರಗಳಿಗೂ ಹೆಸರುವಾಸಿ. ‘ ಮಣ್ಣಲ್ಲಿ ಹೂತು ಹಾಕುತ್ತೇನೆ ‘ ಎಂದವರು ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಘರ್ಜಿಸಿದ ನಂತರ ಮೂವರು ‘ ಮಣ್ಣು ಪಾಲಾ’ ಗಿದ್ದಾರೆ. ಬುಲ್ಡೋಜರ್ ಯೋಗಿಯ ಆಕ್ಷನ್ ಕೇಳಿ, ಅತೀಕ್ ಅಹಮ್ಮದ್ ನಂತಹಾ ಕ್ರೂರಿ ಕ್ರಿಮಿನಲ್ ಕೂಡಾ ಇಲಿಯಂತೆ ಆಗಿದ್ದು ಜೀವ ಭಯದಿಂದ ನಡುಗುತ್ತಿದ್ದಾನೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಅತೀಕ್ ಅಹ್ಮದ್ ಪುತ್ರ ಅಸಾದ್ ಅಹ್ಮದ್‌ನ ಎನ್‌ಕೌಂಟರ್ ಸುದ್ದಿ ಕೇಳಿದ ತಂದೆ ಅತೀಕ್ ಅಹ್ಮದ್ ಗಳಗಳನೆ ಅತ್ತುಬಿಟ್ಟು ಕುಸಿದು ಬಿದ್ದ ಘಟನೆ ನಡೆದಿದೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹಾಗೂ ಸಮಾಜವಾದಿ ಪಕ್ಷದ ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಅಸಾದ್ ಅಹ್ಮದ್‌ನನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಎನ್‌ಕೌಂಟರ್‌ನಲ್ಲಿ ( Uttar Pradesh Encounter) ಹೊಡೆದುರುಳಿಸಿದ್ದರು. ಈ ಸುದ್ದಿ ಕೇಳಿದ, ಇದೀಗ ಬಂಧನದಲ್ಲಿರುವ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಕುಸಿದು ಬಿದ್ದು ಗಳಗಳನೇ ಅತ್ತಿದ್ದಾನೆ.
ಮಗನ ಸಾವಿನ ಸುದ್ದಿ ಕೇಳಿ, ಈ ಘಟನೆಗೆ ನಾನೇ ಕಾರಣ, ನಾನೇ ಇದರ ಹೊಣೆ ಹೊರುತ್ತೇನೆ ಎಂದು ಪೊಲೀಸರ ಬಳಿ ಆತ ಹೇಳಿರುವುದಾಗಿ ಇಂಡಿಯಾ ಟುಡೇ ಪತ್ರಿಕೆ ವರದಿ ಮಾಡಿದೆ. ಅಲ್ಲದೇ, ಅಹ್ಮದ್ ನು ತನ್ನ ಮಗನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾನೆ ಎಂಬುದಾಗಿ ವರದಿಯಾಗಿದೆ.
ನಿನ್ನೆ ಉತ್ತರಪ್ರದೇಶದ ಝಾನ್ಸಿಯಲ್ಲಿ ಪೊಲೀಸರು ರಿವಾಲ್ವರ್ ಎತ್ತಿದ್ದರು. ಬೈಕಿನಲ್ಲಿ ಓಡಿ ಹೋಗಲು ಹವಣಿಸುತ್ತಿದ್ದ ಅಸಾದ್ ನ ಎನ್‌ಕೌಂಟರ್ ನಡೆದು ಹೋಗಿತ್ತು. ಈ ಘಟನೆಯಲ್ಲಿ ಅಸಾದ್ ಸಹಚರ ಗುಲಾಂ ಮೊಹಮ್ಮದ್ನನ್ನು ಕೂಡ ಹತ್ಯೆ ಮಾಡಲಾಗಿದೆ.
ಬಿಎಸ್ಪಿ ಶಾಸಕನ ಹತ್ಯೆಯ ಕೇಸಿನಲ್ಲಿ ಪ್ರಮುಖ ಸಾಕ್ಷಿದಾರ ಆಗಿದ್ದ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅಸಾದ್ ಮತ್ತು ಗುಲಾಂ ಪ್ರಮುಖ ಆರೋಪಿಗಳಾಗಿದ್ದರು. ಆರೋಪಿಗಳ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಆರೋಪಿಗಳನ್ನು ಯುಪಿ ಎಸ್‌ಟಿಎಫ್ ತಂಡ ಎನ್‌ಕೌಂಟರ್ ಮಾಡಿದೆ ಎಂದು ವಿಶೇಷ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್ ಅವರ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದರು ಉಮೇಶ್ ಪಾಲ್. ಅವರ ಅಪಹರಣ ಪ್ರಕರಣದಲ್ಲಿ ಮಾಫಿಯಾ ಡಾನ್, ಮಾಜಿ ಸಂಸದ ಅತೀಕ್ ಅಹ್ಮದ್ ಅಪರಾಧಿ ಎಂದು ಸಾಬೀತಾಗಿತ್ತು. ಆತನಿಗೆ ಉತ್ತರ ಪ್ರದೇಶದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆನಂತರ ಉಮೇಶ್ ಪಾಲ್ ನನ್ನು ಮುಗಿಸಲು ಅತೀಕ್ ಅಹ್ಮದ್, ಆತನ ಮಕ್ಕಳು ಮತ್ತು ತಂಡ ಹೊಂಚು ಹಾಕಿ ಅದರಲ್ಲಿ ಸಕ್ಸಸ್ ಕಂಡಿದ್ದರು.
ಆಗ ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ನೀಡಿದ್ದ ದೂರಿನನ್ವಯ ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್, ಅಸಾದ್, ಗುಲಾಂ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 147 (ಗಲಭೆ), 302 (ಕೊಲೆ), 307 (ಕೊಲೆಗೆ ಯತ್ನ) ಹಾಗೂ ಬೆದರಿಕೆ ಒಡ್ಡಿದ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದೀಗ ಗ್ಯಾಂಗ್ ಲೀಡರ್ ನ ಇನ್ನೊಬ್ಬ ಮಗನೂ ಮಣ್ಣು ಸೇರಿದ್ದಾನೆ. ‘ ಮಿಟ್ಟಿ ಮೇ ಮಿಲಾದೂಂಗಾ ‘ ಮಾತನ್ನು ಯೋಗಿ ಆದಿತ್ಯನಾಥ್ ಸಾಧಿಸಿದ್ದಾರೆ.