Indian Railways : ಇವರಿಗೆ ಇನ್ನು ಸಿಗಲಿದೆ ನಿಶ್ಚಿಂತೆಯ ಪ್ರಯಾಣ ! ರೈಲ್ವೆಯಿಂದ ವಿಶೇಷ ಮಾಹಿತಿ ಇಲ್ಲಿದೆ ನೋಡಿ!
Indian Railways update : ಭಾರತದಲ್ಲಿ ಲಕ್ಷಾಂತರ ಪ್ರಯಾಣಿಕರು(Railway Passengers) ರೈಲ್ವೇ ಮೂಲಕ ಪ್ರಯಾಣಿಸುವುದು ಗೊತ್ತಿರುವ ವಿಚಾರವೇ! ಈಗಾಗಲೇ ಭಾರತೀಯ ರೈಲ್ವೆ( Indian Railways update)ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ. ಇದರ ನಡುವೆ ರೈಲ್ವೇ ಇಲಾಖೆ ಮತ್ತೊಂದು ಸಿಹಿ ಸುದ್ದಿಯೊಂದನ್ನೂ ನೀಡಿದೆ.
ಭಾರತೀಯ ರೈಲ್ವೇ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿಶೇಷ ನಿರ್ಣಯ ಕೈಗೊಂಡಿದೆ. ರೈಲ್ವೇಯಿಂದ ಬಂದಿರುವ ಮಾಹಿತಿಯ ಅನುಸಾರ, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ(Express Trains) ವಿಕಲಚೇತನರಿಗೆ (Handicapped)ಲೋವರ್ ಬರ್ತ್‌ಗಳನ್ನು ಒದಗಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜೊತೆಗೆ ದೈಹಿಕ ನ್ಯೂನತೆ ಹೊಂದಿರುವ ಪ್ರಯಾಣಿಕರಿಗೆ ಲೋವರ್ ಬರ್ತ್ ನೀಡಲು ನಿರ್ಧಾರ ಮಾಡಲಾಗಿದೆ.
‘ಹಿರಿಯ ನಾಗರಿಕರಿಗೆ ರೈಲಿನಲ್ಲಿ ಲೋವರ್ ಬರ್ತ್( Lower Birth) ಸೌಲಭ್ಯ ಕಲ್ಪಿಸಲಾಗಿದ್ದು, ಹೀಗಾಗಿ, ರೈಲ್ವೆ ಪ್ರತ್ಯೇಕ ವ್ಯವಸ್ಥೆ ಜಾರಿ ಮಾಡಿರುವ ಕುರಿತು ರೈಲ್ವೇ ಸಚಿವರಾದ (Minister of Railways of India)ಅಶ್ವಿನಿ ವೈಷ್ಣವ್( Ashwini Vaishnaw) ಮಾಹಿತಿ ನೀಡಿದ್ದಾರೆ. 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು ಲೋವರ್ ಬರ್ತ್‌ಗಾಗಿ ಪ್ರತ್ಯೇಕ ಬೇಡಿಕೆ ನೀಡಬೇಕಾದ ಅವಶ್ಯಕತೆಯಿಲ್ಲ. ಈ ಪ್ರಯಾಣಿಕರು ಆಟೋಮ್ಯಾಟಿಕ್ ಆಗಿ ರೈಲ್ವೇ ಕಡೆಯಿಂದ ಲೋವರ್ ಬರ್ತ್ ಪಡೆಯಬಹುದಾಗಿದೆ.
ರೈಲ್ವೆ ಇಲಾಖೆಯ ಆದೇಶ :
ಸ್ಲೀಪರ್ ಕ್ಲಾಸ್‌ನಲ್ಲಿ ನಾಲ್ಕು ಆಸನಗಳು (ಎರಡು ಕೆಳ ಮತ್ತು ಎರಡು ಮಧ್ಯಮ ಬರ್ತ್‌ಗಳು), ಎಸಿ3 ಕಂಪಾರ್ಟ್‌ಮೆಂಟ್‌ನಲ್ಲಿ ಎರಡು ಆಸನಗಳು (ಒಂದು ಕೆಳ ಮತ್ತು ಒಂದು ಮಧ್ಯಮ ಬರ್ತ್), ಎಸಿ3 (ಇಕಾನಮಿ ) ವಿಭಾಗದಲ್ಲಿ ಎರಡು ಆಸನಗಳು (ಒಂದು ಕೆಳ ಮತ್ತು ಒಂದು ಮಧ್ಯಮ ಬರ್ತ್) ವಿಕಲಾಂಗ ವ್ಯಕ್ತಿಗಳಿಗೆ ಮೀಸಲಿಡಲಾಗಿದೆ ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಗರೀಬ್ ರಥ ರೈಲಿನಲ್ಲಿ ಅಂಗವಿಕಲರಿಗೆ 2 ಲೋವರ್ ಬರ್ತ್ ಮತ್ತು 2 ಮೇಲಿನ ಸೀಟುಗಳನ್ನು ಕಾಯ್ದಿರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಮಂಡಳಿ ಮಾಹಿತಿ ನೀಡಿದೆ. ಈ ಸೌಲಭ್ಯವನ್ನು ಪಡೆಯಲು ಅವರು ಸಂಪೂರ್ಣ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ‘ಎಸಿ ಚೇರ್ ಕಾರ್'( AC Chair Car)ರೈಲಿನಲ್ಲಿ ವಿಕಲಾಂಗರಿಗೆ ಎರಡು ಸೀಟುಗಳನ್ನು ಮೀಸಲಿಡಲಾಗುತ್ತದೆ.
ರೈಲ್ವೇಯಿಂದ ಬಂದಿರುವ ಮಾಹಿತಿಯ ಅನುಸಾರ, ಹಿರಿಯ ನಾಗರಿಕರು( Senior Citizens), 45 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಗರ್ಭಿಣಿಯರಿಗೆ(Pregnant Women) ಸ್ಲೀಪರ್ ವಿಭಾಗದಲ್ಲಿ 6 ಲೋವರ್ ಬರ್ತ್‌ಗಳನ್ನು ನಿಗದಿ ಮಾಡಲಾಗಿದೆ. ಇದಲ್ಲದೆ, 3ಎಸಿಯಲ್ಲಿ ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ ನಾಲ್ಕರಿಂದ ಐದು ಲೋವರ್ ಬರ್ತ್‌ಗಳನ್ನು ಮತ್ತು 2ಎಸಿಯಲ್ಲಿ ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ ಮೂರರಿಂದ ನಾಲ್ಕು ಲೋವರ್ ಬರ್ತ್‌ಗಳನ್ನು ನಿಗದಿ ಮಾಡಲಾಗಿದೆ. ಇದರೊಂದಿಗೆ ರೈಲ್ವೆಯು ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಕೂಡಾ ಲೋವರ್ ಬರ್ತ್ ಸೌಲಭ್ಯವನ್ನು ಒದಗಿಸಲು ಆದೇಶ ಹೊರಡಿಸಿದೆ. ಈ ಸಂಬಂಧ ರೈಲ್ವೆ ಇಲಾಖೆಯು ಮಾರ್ಚ್ 31ರಂದು ವಿವಿಧ ವಲಯಗಳಿಗೆ ಆದೇಶ ರವಾನೆ ಮಾಡಿದೆ.
ಇದನ್ನೂ ಓದಿ: Rocking Star Yash: ಏಪ್ರಿಲ್-14 ನಟ ಯಶ್ ಗೆ ಸ್ಪೆಷಲ್ ! ಯಾಕೆಂದು ತಿಳಿದರೆ ಖಂಡಿತ ಖುಷಿ ಪಡ್ತೀರ!