Honor to Rajamouli : ಸ್ಟಾರ್ ಡೈರೆಕ್ಟರ್ ರಾಜಮೌಳಿ ಹುಡುಕುತ್ತಾ ಬಂತು ಮತ್ತೊಂದು ಗೌರವ!
Honor to Rajamouli : ತೆಲುಗು ಚಿತ್ರರಂಗದಲ್ಲಿ ಮಗಧೀರ, ಛತ್ರಪತಿ, ಬಾಹುಬಲಿ, ಇತ್ತೀಚಿನ ಆರ್ ಅರ್ ಆರ್ ನಂತಹ ಸೂಪರ್ ಹಿಟ್ (super hit)ಚಿತ್ರಗಳನ್ನು ನೀಡಿದ ಸ್ಟಾರ್ ನಿರ್ದೆಶಕ ಹಾಗೂ ಕಥೆಗಾರ ಎಸ್. ಎಸ್. ರಾಜಮೌಳಿ ಅವರಿಗೆ ಹೆಚ್ಚಾಗುತ್ತಲೇ ಇದೆ ಕ್ರೇಜ್. ಹೌದು, ಆರ್ ಆರ್ ಆರ್ ಚಿತ್ರದ ಮೂಲಕ ಭಾರತ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ರಾಜಮೌಳಿ (Honor to Rajamouli ) ಅವರಿಗೆ ಇದೀಗ ಮತ್ತೊಂದು ಗೌರವ ದೊರಕಿದೆ. ವಿಶ್ವದಲ್ಲಿ ಟಾಪ್ (top) 100 ಪ್ರಭಾವಿ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ.
ಕೆಲವು ದಿನಗಳ ಹಿಂದೆ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ (oscar award) ಆಯ್ಕೆ ಆಗಿ, ಆಸ್ಕರ್ (oscar) ಅನ್ನು ಮುಡಿಗೆರಿಸಿಕೊಂಡಿತ್ತು. ಈ ಪ್ರಶಸ್ತಿ ಇಡೀ ಭಾರತೀಯ ಚಿತ್ರರಂಗ ಹಾಗೂ ತೆಲುಗು ಚಿತ್ರರಂಗ ಹೆಮ್ಮೆ ಪಡುವಂತೆ ಮಾಡಿದ್ದು, ಟೈಮ್ಸ್ ಮ್ಯಾಗಜೀನ್ (times magnize) ಇತ್ತೀಚಿಗೆ ವಿಶ್ವದ ಟಾಪ್ (top) 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ರಾಜಮೌಳಿ ಸ್ಥಾನ ಪಡೆದುಕೊಂಡಿದ್ದಾರೆ. ಇಡೀ ವಿಶ್ವ ಮತ್ತೊಮ್ಮೆ ಟಾಲಿವುಡ್ (tollywood) ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದೆ.
ಈ ವಿಶ್ವದ ಟಾಪ್ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ಕಿಂಗ್ ಖಾನ್ ಕೂಡ ಇದ್ದಾರೆ. ಮತ್ತು ಭಾರತದ ಖ್ಯಾತ ಬರಹಗಾರ ಸಲ್ಮಾನ್ ರಶ್ಚಿ ಮತ್ತು ನ್ಯಾಯಾಧೀಶೆ ಪದ್ಮಲಕ್ಷ್ಮಿ ಕೂಡ ಇದ್ದಾರೆ. ಇನ್ನು ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಕಿಂಗ್ ಚಾರ್ಲ್ಸ್, ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ , ಸಾಕರ್ ದಿಗ್ಗಜ ಲಿಯೋನಲ್ ಮೆಸ್ಸಿ ಮತ್ತು ಇನ್ನು ಇತರ ಖ್ಯಾತ ಸೆಲೆಬ್ರಿಟಿ(celebrities) ಗಳು ಈ ಪಟ್ಟಿಯಲ್ಲಿದ್ದಾರೆ. ಇಂತಹ ಅದ್ಬುತ ವ್ಯಕ್ತಿಗಳಲ್ಲಿ ರಾಜಮೌಳಿ ಇರುವುದು ನಿಜಕ್ಕೂ ಹೆಮ್ಮೆ ಪಡುವ ವಿಷಯವಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು, ದಿಲ್ ಖುಷ್ ಆಗಿದ್ದಾರೆ. ಇನ್ನು ಸೆಲೆಬ್ರಿಟಿ( celebrities)ಗಳು ರಜಮೌಳಿ ಅವರಿಗೆ ಕರೆ ಮಾಡಿ ಸಂತೋಷ ಹಂಚಿ ಕೊಂಡಿದ್ದಾರೆ.
ಟೈಮ್ಸ್ (times) ನ ಈ ಸಮೀಕ್ಷೆಯಲ್ಲಿ ತೆಲುಗು ನಿರ್ದೆಶಕ ಸ್ಥಾನ ಪಡೆದಿರುವುದು ಇದೇ ಮೊದಲು. ಅಭಿಮಾನಿಗಳು ರಾಜಮೌಳಿ ಚಿತ್ರದಲ್ಲಿ ಮತ್ತಷ್ಟು ಬದಲಾವಣೆಯನ್ನು ಬಯಸುತ್ತಿದ್ದಾರೆ. ಇನ್ನು ಆರ್ ಆರ್ ಆರ್ ಚಿತ್ರದ ಬಳಿಕ ರಾಜಮೌಳಿ ಟಾಲಿವುಡ್ ಸೂಪರ್ ಸ್ಟಾರ್ (tollywood super star) ಮಹೇಶ್ ಬಾಬು ಅವರಿಗೆ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಮೊದಲು ರಾಜಮೌಳಿ ಅವರು ಬಾಬು ಅವರಿಗೆ ಸಿನೆಮಾವನ್ನು ಒಂದೇ ಭಾಗವನ್ನಾಗಿ ಮಾಡಲು ನಿರ್ಧರಿಸಿದ್ದರು, ಆದರೆ ಇವರ ಕ್ರೇಜ್ ಹೆಚ್ಚಾದಂತೆ ಬಾಬು ಅವರ ಜೊತೆ ಸಿನೆಮಾವನ್ನು ಮೂರು ಭಾಗವಾಗಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಕೆಲವೇ ದಿನಗಳಲ್ಲಿ ರಾಜಮೌಳಿ ಅವರು ಸಿನೆಮಾದ ಬಗ್ಗೆ ಅಧಿಕೃತವಾಗಿ ಅನೌನ್ಸ್ (announce) ಮಾಡಲಿದ್ದಾರೆ. ಈ ಚಿತ್ರವನ್ನು ಯಾವ ಮಟ್ಟದಲ್ಲಿ ಮಾಡುತ್ತಾರೆ ಎಂದು ಕಾದು ನೋಡಬೇಕು.