Costly Sandwitch : ಜಗತ್ತಿನ ದುಬಾರಿ ಸ್ಯಾಂಡ್‌ವಿಚ್‌ ! ಜನಸಾಮಾನ್ಯರಂತೂ ಮುಟ್ಟೋ ಹಾಗಿಲ್ಲ ಈ ತಿಂಡಿನಾ!!!

Costly sandwich food : ಈಗಿನ ಕಾಲದಲ್ಲಿ ಕೇಳೋದೇ ಬೇಡ, ಪ್ರತಿಯೊಂದು ವಸ್ತುವಿನಿಂದ ಹಿಡಿದು ತಿನ್ನೋ ಆಹಾರ (food) ತನಕ ಎಲ್ಲದ್ರದ್ದು ಬೆಲೆ ಜಾಸ್ತಿ. ಹಾಗಾದ್ರೆ ನಾವು ತಿನ್ನೋ ಜಂಕ್ ಫುಡ್ (junk food) ಗಳಲ್ಲಿ ಸ್ಯಾಂಡ್ ವಿಚ್ ಬೆಲೆ ಎಷ್ಟಿರಬಹುದು? ಅನ್ನೋದನ್ನ ನೀವು ಯಾವಾಗಾದ್ರೂ ಯೋಚನೆ ಮಾಡಿದ್ದೀರಾ. ಇದರ ಬೆಲೆ ತಿನ್ನೋರಿಗೆ ಮಾತ್ರ ಗೊತ್ತಿರುತ್ತೆ. ಒಂದು ಸ್ಯಾಂಡ್ ವಿಚ್ ನಿಮಗೆ 50 ರಿಂದ 100 ರೂಪಾಯಿ ಒಳಗೆ ಸಿಗುತ್ತೆ. ದೊಡ್ಡ ದೊಡ್ಡ ಫೈ ಸ್ಟಾರ್ (5 star)ಹೊಟೇಲ್ ಗಳಲ್ಲಿ ಸ್ಯಾಂಡ್ ವಿಚ್ (sandwich)ಬೆಲೆ ಇನ್ನೂ ಸ್ವಲ್ಪ ಹೆಚ್ಚಿರಬಹುದು ಅಂದ್ರೆ ಒಂದು ಸಾವಿರ ರೂಪಾಯಿವರೆಗೆ ಇರಬಹುದು ಎಂದು ನೀವು ಯಾವತ್ತಾದರೂ ಊಹಿಸಿಕೊಂಡಿದ್ದರೆ. ನಿಮ್ಮ ಊಹೆ ತಪ್ಪಾಗಿರುತ್ತದೆ.

 

ಹೌದು, ನೀವು ಸ್ಯಾಂಡ್ ವಿಚ್ ಬೆಲೆ(rate) ಕೇಳಿದ್ರೆ ಒಮ್ಮೆನೆ ಬೆಚ್ಚಿ ಬೀಳ್ತೀರಾ. ನಾವಿಂದು ನಿಮಗೆ ದುಬಾರಿ ಸ್ಯಾಂಡ್ ವಿಚ್(costly sandwich) ಎಲ್ಲಿ ಸಿಗುತ್ತೆ, ಅದ್ರ ಬೆಲೆ ಎಷ್ಟರಮಟ್ಟಿಗೆ ಇರುತ್ತೆ ಮತ್ತು ಆ ಸ್ಯಾಂಡ್ ವಿಚ್ ನ ವಿಶೇಷತೆ ಏನು ಎಂಬುದನ್ನು ನಿಮಗೆ ತಿಳಿಸಿಕೊಡ್ತೀವಿ ನೋಡಿ.

ಒಂದು ರೆಸ್ಟೋರೆಂಟ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಸ್ಯಾಂಡ್‌ವಿಚ್ ಫುಡ್ (costly sandwich food) ಸಿಗುತ್ತೆ ನೋಡಿ. ಈ ಸ್ಯಾಂಡ್‌ವಿಚ್‌ನ ಹೆಸರು ಕ್ವಿಂಟೆಸೆನ್ಷಿಯಲ್ ಗ್ರಿಲ್ಡ್ ಚೀಸ್ (Grilled Cheese) ಸ್ಯಾಂಡ್‌ವಿಚ್. ಈ ಸ್ಯಾಂಡ್‌ವಿಚ್‌ ಜನಸಾಮಾನ್ಯರು ತಿನ್ನೋದು ಅಲ್ಲ ಮುಟ್ಟೋದು ಕೂಡ ಕನಸಿನ ಮಾತು ಅಂತ ಹೇಳಿದ್ರು ತಪ್ಪೇನಿಲ್ಲ. ಆ ಸ್ಯಾಂಡ್ ವಿಚ್ ಅನ್ನು ನಾವೆಲ್ಲಾದರೂ ಖರೀದಿಸಲು ಹೋದರೆ ಆ ಹಣದಲ್ಲಿ ಎರಡು ತಿಂಗಳ ನಮ್ಮ ಜೀವನವನ್ನು (life)ಸಾಗಿಸಬಹುದು.

ಅಬ್ಬಬ್ಬಾ ಕ್ವಿಂಟೆಸೆನ್ಷಿಯಲ್ ಗ್ರಿಲ್ಡ್ (quintinshyil grilledಚೀಸ್ ಸ್ಯಾಂಡ್‌ವಿಚ್ ಬೆಲೆ ಎಷ್ಟು ಅಂತ ಕೇಳಿದ್ರೆ ನೀವೇ ಒಮ್ಮೆ ದಂಗಾಗ್ತೀರಾ ಬಿಡಿ. ಯಾಕಂದ್ರೆ ಈ ಸ್ಯಾಂಡ್ ವಿಚ್ ತಯಾರಿಸಲು ಬಳಸಲಾದ ಪದಾರ್ಥಗಳು ತುಂಬಾ ದುಬಾರಿಯಾಗಿವೆ. ಹಾಗಾಗಿಯೇ ಇದ್ರ ಬೆಲೆ ತುಂಬಾನೇ ಹೆಚ್ಚು ಇದೆ. ನೀವು ಅಂದುಕೊಂಡಂತಹ ಅಂತಿಂತ ಬೆಲೆ ಇದರದ್ದಲ್ಲ ಒಂದು ಸ್ಯಾಂಡ್ ವಿಚ್ ಬೆಲೆ (sandwich rate)ಕನಿಷ್ಠ 17 ಸಾವಿರ ರೂಪಾಯಿ. ಇದು ವಿಶ್ವದ ಅತ್ಯಂತ ದುಬಾರಿ ಸ್ಯಾಂಡ್‌ವಿಚ್ ಎಂಬ ಗಿನ್ನೆಸ್ ದಾಖಲೆಯನ್ನು ಸಹ ಪಡೆದುಕೊಂಡಿದೆ.

ಈ ಸ್ಯಾಂಡ್ ವಿಚ್ ಅನ್ನು ನೀವೆಲ್ಲಾದರೂ ಖರೀದಿಸಿದರೆ ಎರಡು ದಿನ ಮೊದಲೇ ಅವರಿಗೆ ಆರ್ಡರ್ ನೀಡಬೇಕು. ಇಷ್ಟು ದುಬಾರಿ ಬೆಲೆಯ ಸ್ಯಾಂಡ್ ವಿಚ್ ತಿನ್ನೋದು ಸುಲಭವಲ್ಲ. ಅತಿ ಶ್ರೀಮಂತನಾದರೆ ಮಾತ್ರ ಈ ಸ್ಯಾಂಡ್ ವಿಚ್ (sandwich)ಅನ್ನು ತಿನ್ನಬಹುದು ಬಡವ ಇದನ್ನು ಮುಟ್ಟಲು ಸಾಧ್ಯವಿಲ್ಲ ಬಿಡಿ. ಎಲ್ಲಾ ತಿಂಡಿಯ ಹಾಗೆ ತಿನ್ನಬೇಕು ಎನ್ನುವ ಆಸೆ ಹುಟ್ಟಿಕೊಂಡರೆ ತಕ್ಷಣ ನೀವು ಇದನ್ನು ತಿನ್ನಲು ಸಾಧ್ಯವಿಲ್ಲ. ಎರಡು ದಿನ ಮೊದಲೇ ಈ ಸ್ಯಾಂಡ್ ವಿಚ್ ಗೆ ಆರ್ಡರ್ ನೀಡಬೇಕು. ಇದನ್ನು ತಯಾರಿಸಲು ಎರಡು ದಿನ ಬೇಕು. ಈ ವಿಷಯವನ್ನು ಕೇಳಿದಾಗ ನಿಮಗೆ ಅಚ್ಚರಿ ಎನ್ನಿಸಿದ್ರೂ ಇದು ಸತ್ಯನೇ.

ನಾವು ಒಂದು ಸ್ಯಾಂಡ್ ವಿಚ್ ಅನ್ನು ತಯಾರಿಸಬೇಕಾದರೂ ಹೊರಗಿನಿಂದ ಅದಕ್ಕೆ ಬೇಕಾದ ಪದಾರ್ಥಗಳನ್ನು ತಂದು ನಂತರ ಸ್ಯಾಂಡ್ವಿಚ್ ಮಾಡಬೇಕಾಗುತ್ತದೆ ಹಾಗಾದರೆ ಈ ಸ್ಯಾಂಡ್ ವಿಚ್ ಗೆ ಏನು ಬಳಸ್ತಾರೆ ನೋಡಿ ಡೊಮ್ ಪೆರಿಗ್ನಾನ್ ಶಾಂಪೇನ್‌ ನಿಂದ ತಯಾರಿಸಲಾದ ಫ್ರೆಂಚ್ ಪುಲ್ಮನ್ ಷಾಂಪೇನ್ ಬ್ರೆಡನ್ನು (champagne bread)ಇದಕ್ಕೆ ಬಳಸಲಾಗುತ್ತದೆ. ಬಿಳಿ ಟ್ರಫಲ್ ಬೆಣ್ಣೆಯನ್ನು ಇದಕ್ಕೆ ಸೇರಿಸಲಾಗುತ್ತದೆ. ಅತಿ ದುಬಾರಿಯ ಹಾಗೂ ಅಪರೂಪದ ಕ್ಯಾಸಿಯೋಕಾವಲ್ಲೊ ಪೊಡೊಲಿಕೊ ಚೀಸ್ (Caciocavallo Podolico cheese) ಬಳಸಲಾಗುತ್ತದೆ. ಇವೆಲ್ಲವೂ ದುಬಾರಿ. ಇದನ್ನು ಹೊರಗಿನಿಂದ ಆಮದು ಮಾಡಿಕೊಳ್ಳುವ ಕಾರಣ, ಆರ್ಡರ್ ಬಂದ ಎರಡು ದಿನದ ನಂತ್ರ ಗ್ರಾಹಕರಿಗೆ ಈ ಸ್ಯಾಂಡ್ ವಿಚ್ ಸಿಗುತ್ತದೆ. ಹಾಗಾಗಿ ಕೇಳಿದ ತಕ್ಷಣವೇ ಸ್ಯಾಂಡ್ ವಿಚ್ ಸಿಗುವುದಿಲ್ಲ.

ವಿಶೇಷ ಚೀಸ್ ನಲ್ಲಿ ಇದನ್ನು ಗ್ರಿಲ್ ಮಾಡಿದ ನಂತರ, ತ್ರಿಕೋನ ಆಕಾರದಲ್ಲಿ ಕತ್ತರಿಸಿ 23k ಎಡಿಬಲ್ ಗೋಲ್ಡ್ ಪ್ಲೆಕ್ಸ್ ನೊಂದಿಗೆ ನೀಡಲಾಗುತ್ತದೆ. ಇದನ್ನು Baccarat crystal ಪ್ಲೇಟ್ ನಲ್ಲಿ ಸರ್ವ್ ಮಾಡಲಾಗುತ್ತದೆ. ಇದಲ್ಲದೆ ಬ್ಯಾಕಾರಟ್ (Baccarat) ಗ್ಲಾಸ್ ನಲ್ಲಿ ಲೋಬ್‌ಸ್ಟರ್ ಟೊಮೇಟೊ ಬಿಸ್ಕ್ ( Lobster Tomato Bisque) ಸರ್ವ್ ಮಾಡಲಾಗುತ್ತದೆ.

ಇಷ್ಟೆಲ್ಲಾ ಮಾಹಿತಿ ನೋಡಿದಾಗ ಈ ಸ್ಯಾಂಡ್ವಿಚ್ ಎಲ್ಲಿ ಸಿಗಬಹುದು ಅಂತ ನಿಮ್ಮನ್ನು ಪ್ರಶ್ನೆ ಕಾಡಬಹುದು. ನ್ಯೂಯಾರ್ಕ್‌ನ ಸೆರೆಂಡಿಪಿಟಿ 3 ರೆಸ್ಟೋರೆಂಟ್‌ ಬರೀ ಈ ಸ್ಯಾಂಡ್ ವಿಚ್ ನಲ್ಲಿ ಸಿಗುತ್ತದೆ. ಇಲ್ಲಿ ಸಿಗುವ ಎಲ್ಲ ಎಲ್ಲಾ ತಿಂಡಿಗಳು ಬಹಳಷ್ಟು ದುಬಾರಿಯಾಗಿವೆ. ಅತ್ಯಂತ ದುಬಾರಿ (high rate)ಸಿಹಿತಿಂಡಿ ಸಹ ಆಗಿದೆ. ಅತ್ಯಂತ ದುಬಾರಿ ಹ್ಯಾಂಬರ್ಗರ್, ಅತ್ಯಂತ ದುಬಾರಿ ಹಾಟ್ ಡಾಗ್ ಮತ್ತು ಅತಿ ದೊಡ್ಡ ಮದುವೆಯ ಕೇಕ್ (cake) ತಯಾರಿಸಿದ ರೆಸ್ಟೋರೆಂಟ್ ಎಂಬ ಬಿರುದನ್ನು ಪಡೆದುಕೊಂಡು ತುಂಬಾನೇ ಪ್ರಸಿದ್ಧಿಯಾಗಿದೆ.

Leave A Reply

Your email address will not be published.