ಪುತ್ತೂರು : ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ ,ಪಕ್ಷದಲ್ಲಿ ದುಡಿದವರಿಗೆ ಅವಕಾಶ ನೀಡುವಂತೆ ಟಿಕೆಟ್ ಆಕಾಂಕ್ಷಿಗಳಿಂದ ಬೇಡಿಕೆ
Congress ticket : ಪುತ್ತೂರು: ಪುತ್ತೂರು ಕಾಂಗ್ರೆಸ್ ಪಾಳಯದಲ್ಲಿ ಬುಧವಾರ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದ್ದು, ಅರ್ಧದಷ್ಟು ಆಕಾಂಕ್ಷಿಗಳು ಬೆಂಗಳೂರಿಗೆ ಭೇಟಿ ನೀಡಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಲ್ಲಿ ಟಿಕೆಟ್ ( Congress ticket ) ಕುರಿತು ವಿಭಿನ್ನ ಬೇಡಿಕೆ ಇಟ್ಟಿದ್ದಾರೆ.
ಪುತ್ತೂರಿನ ಟಿಕೆಟ್ ಗಾಗಿ ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಗೊಂಡವರು ಸೇರಿದಂತೆ ಒಟ್ಟು 14 ಮಂದಿ
ಅರ್ಜಿ ಗುಜರಾಯಿಸಿದರು. ಈ ಪೈಕಿ ಇಂದು 7 ಮಂದಿ ಆಕಾಂಕ್ಷಿಗಳು ತಮ್ಮಬೆಂಬಲಿಗರ ಜತೆ ಬೆಂಗಳೂರಿಗೆ ತೆರಳಿ ಹೊಸಬರನ್ನು ಬಿಟ್ಟು ಪಕ್ಷಕ್ಕಾಗಿ ದೀರ್ಘ ಕಾಲ ದುಡಿದವರಾದ ಉಳಿದ 13 ಮಂದಿಯಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡುವಂತೆ ಅಧ್ಯಕ್ಷರನ್ನು ಒತ್ತಾಯಿಸಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಪುತ್ತೂರಿನಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಡಿಕೆಶಿಯವರಿಗೆ ಒತ್ತಾಯಿಸಲಾಗಿದೆ.
ಎರಡು ಬಾರಿ ಶಾಸಕರಾಗಿ ಮಹಿಳೆಯರಿಗೆ ಚಿರಪರಿಚಿತರಾಗಿರುವ ಶಕುಂತಳಾ ಶೆಟ್ಟಿ ಅವರಿಗೆ ನೀಡುವಂತೆ ಕೋರಿಕೊಂಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿ. ಕೆ.ಶಿವಕುಮಾರ್ ಪಟ್ಟಿ ಈಗಾಗಲೇ ದೆಹಲಿಗೆ ಹೋಗಿದ್ದು, ಸಮಯ ಮೀರಿದೆ. ಆದರೂ ನಿಮ್ಮಬೇಡಿಕೆಯನ್ನು ದೆಹಲಿ ವರಿಷ್ಠರಿಗೆ ತಲುಪಿಸಲಾಗುವುದು, ಆದರೇ ಟಿಕೆಟ್ ಘೋಷಣೆಯ ಬಳಿಕ ಎಲ್ಲರೂ ಜತೆಯಾಗಿ ಪಕ್ಷದ ಗೆಲುವಿಗಾಗಿ ಶ್ರಮವಹಿಸಿ ದುಡಿಯಬೇಕೆಂಬ ಸೂಚನೆಗೆ ನಿಯೋಗ ಸಮ್ಮತಿ ಸೂಚಿಸಿದೆ ಎಂದು ತಿಳಿದು ಬಂದಿದೆ.
ಕೆಪಿಸಿಸಿ ಕಚೇರಿಯಲ್ಲಿ 1 ಗಂಟೆಗೂ ಅಧಿಕ ಕಾಲ ಸಭೆ ನಡೆದಿದ್ದು, 100 ಕ್ಕೂ ಅಧಿಕ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹ ಕಾರ್ಯ ಸಭೆಯಲ್ಲಿ ನಡೆದೆ ಎನ್ನಲಾಗಿದೆ.
ಟಿಕೇಟ್ ಆಕಾಂಕ್ಷಿಗಳಾದ ಶಕುಂತಳಾ ಟಿ. ಶೆಟ್ಟಿ, ಸತೀಶ್ ಕೆಡಿಂಜಿ, ದಿವ್ಯಪ್ರಭಾ ಚಿಲ್ತಡ್ಕ, ಹೇಮನಾಥ ಶೆಟ್ಟಿ, ಕಾವು, ಚಂದ್ರಹಾಸ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ, ಕೃಪಾ ಆಳ್ವಾ ಪ್ರಮುಖವಾಗಿ ಭಾಗವಹಿಸಿದ್ದರು.
ಟಿಕೇಟ್ ಆಕಾಂಕ್ಷಿಗಳಾದ ಶಕುಂತಳಾ ಟಿ. ಶೆಟ್ಟಿ, ಸತೀಶ್ ಕೆಡಿಂಜಿ, ದಿವ್ಯಪ್ರಭಾ ಚಿಲ್ಲಡ್ಕ, ಹೇಮನಾಥ ಶೆಟ್ಟಿ, ಕಾವು, ಚಂದ್ರಹಾಸ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ, ಕೃಪಾ ಆಳ್ವಾ ಪ್ರಮುಖವಾಗಿ ಭಾಗವಹಿಸಿದ್ದರು. ಪುತ್ತೂರು ಭಾಗದಿಂದ ನಗರಸಭಾ ಸದಸ್ಯರಿಯಾಝ್, ರೋಷನ್ ರೈ, ರಂಜಿತ್ ಬಂಗೇರ, ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ಶಾರದಾ ಅರಸ್, ವಿಲ್ಮಾಗೋನ್ಸಾಲ್ವಿಸ್, ಮೀನಾಕ್ಷಿ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ, ಪಟ್ಟಣ ಪಂಚಾಯಿತಿ ಸದಸ್ಯ ವಿ.ಕೆ. ಎಂ. ಅಶ್ರಫ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿ. ಎ. ರಶೀದ್, ಯೂತ್ ನಗರ ಅಧ್ಯಕ್ಷ ಅಂಝ ವಿ.ಕೆ., ಅಬ್ದುಲ್ ರಹಿಮಾನ್ ಕುರುಂಬಳ ಮತ್ತಿತರರು ಹಾಜರಿದ್ದರು.