APL ration card ರದ್ದು ಮಾಡುವ ವಿಧಾನ ತಿಳ್ಕೊಳ್ಳಿ! ಇಲ್ಲಿದೆ ಕಂಪ್ಲೀಟ್‌ ಮಾಹಿತಿ

APL ration card : ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ (BPL)ಕಾರ್ಡ್ ಇರುವ ಬಡವರಿಗೆ ಎಲ್ಲರಿಗೂ ಸೌಲಭ್ಯಗಳು ದೊರಕುತ್ತದೆ. ಬಿಪಿಎಲ್ ಕಾರ್ಡ್ ಜೊತೆ ಇನ್ನು ಎರಡು ಕಾರ್ಡ್ ಗಳು ಚಾಲ್ತಿಯಲ್ಲಿವೆ ಅದು ಯಾವುದೆಂದರೆ ಎಪಿಎಲ್(APL) ಮತ್ತು ಎಎವೈ (AAY).  ಬಡತನ ರೇಖೆಯಿಂದ ಮೇಲಿರುವ ವ್ಯಕ್ತಿಗಳಿಗೆ ಎಪಿಎಲ್ ಕಾರ್ಡ್ ಅನ್ನು ನೀಡಲಾಗುತ್ತದೆ. ಅತೀ ಬಡತನದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅಂತ್ಯೋದಯ ಅನ್ನ ಯೋಜನೆ (AAY) ಕಾರ್ಡ್ ಅನ್ನು ನೀಡಲಾಗುತ್ತದೆ. ಹಾಗಾಗಿ ಕೆಲವು ಕಾರಣದಿಂದ ಎಪಿಎಲ್ ಕಾರ್ಡನ್ನು ರದ್ದು ಮಾಡಿಸುವ ಪರಿಸ್ಥಿತಿ ಬರುತ್ತದೆ.

 

ಎಪಿಎಲ್ ಕಾರ್ಡನ್ನು ಏಕೆ ರದ್ದು ಮಾಡಿಸಬೇಕು? ಇದನ್ನು ರದ್ದು ಮಾಡಿಸುವ ಕಾರಣ ಏನು? ಇದರಿಂದ ಏನು ಉಪಯೋಗ ಆಗಬಹುದು ಎಂಬುದನ್ನು ನೋಡಿ.

ಹೌದು, ಒಂದು ಬಾರಿ ನೀವು ಎಪಿಎಲ್ ಕಾರ್ಡನ್ನು (APL ration card) ಪಡೆದುಕೊಂಡರೆ ಅದನ್ನು ರದ್ದು ಮಾಡಲು ಬಹಳ ಕಷ್ಟವಿದೆ. ಎಲ್ಲಾದರೂ ನಿಮಗೆ ನಿಮ್ಮ ಎಪಿಎಲ್ ಕಾರ್ಡನ್ನು(card) ರದ್ದು ಮಾಡಬೇಕಾದರೆ ಅದಕ್ಕೆ ಸೂಕ್ತ ಕಾರಣ ಕೊಟ್ಟು ಮತ್ತು ಅರ್ಜಿಗಳನ್ನು (form)ನೀಡಬೇಕು ನಂತರ ಅದನ್ನು ರದ್ದು ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅಸಾಧ್ಯವಾದ ಕೆಲಸ.

ಎಪಿಎಲ್ ಕಾರ್ಡನ್ನು ರದ್ದುಗೊಳಿಸುವಾಗ (convert) ಅದಕ್ಕೆ ಕೆಲವು ದಾಖಲೆಗಳನ್ನು ನೀಡಬೇಕು. ಹಾಗಾದರೆ ಆ ದಾಖಲೆಗಳು ಯಾವುದು ಮತ್ತು ಅರ್ಜಿ ಸಲ್ಲಿಸುವಾಗ ಯಾವ ಪ್ರಕ್ರಿಯೆಗಳನ್ನು ಮಾಡಬೇಕು ಮತ್ತು ಎಲ್ಲಿ ಅರ್ಜಿ (form) ಸಲ್ಲಿಸಬೇಕು ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಒಮ್ಮೆ ಕಣ್ಣು ಹಾಯಿಸಿ.

ಎಪಿಎಲ್ ಅನ್ನು ರದ್ದು ಮಾಡಿಸಲು ಏನೆಲ್ಲ ದಾಖಲೆಗಳನ್ನು ನೀಡಬೇಕು:

– ಎಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡಿರುವ ಆ ಕುಟುಂಬದ ಯಜಮಾನರ ಆಧಾರ್ ಕಾರ್ಡ್(Aadhar card)

– ಮೂಲ ಎಪಿಎಲ್ ಕಾರ್ಡ್

-20 ರೂಪಾಯಿಯ ಸ್ಟ್ಯಾಂಪ್ ಪೇಪರ್(stamp paper) ಮೇಲೆ ಸೂಕ್ತವಾದ ಮಾಹಿತಿಯನ್ನು ಬರೆದು ನಂತರ ವಕೀಲರಿಂದ ನೋಟರಿ(notary) ಮಾಡಿಸಬೇಕು.

– ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳಿಂದ ಜಮೀನು ಇರುವ ಮತ್ತು ಇಲ್ಲದಿರುವುದರ ಬಗ್ಗೆ ಅಧಿಕೃತ ಮಾಹಿತಿಯ ಜೊತೆಗೆ ದೃಢೀಕರಣ ಪತ್ರವನ್ನು ಕೊಡಬೇಕಾಗುತ್ತದೆ.

– ಬಿಳಿ ಹಾಳೆಯಲ್ಲಿ(white sheet) ತಹಶೀಲ್ದಾರರಿಗೆ ಅರ್ಜಿಯನ್ನು ಬರೆಯಬೇಕು.

ಹಾಗಾದರೆ ಅರ್ಜಿ ಬರೆಯುವ ವಿಧಾನ ಹೇಗೆ?

– ಗೆ ಎನ್ನುವಲ್ಲಿ ಮಾನ್ಯ ತಹಶೀಲ್ದಾರರು ಮತ್ತು ನಿಮ್ಮ ಜಿಲ್ಲೆಯ (district)ಹೆಸರನ್ನು ಬರೆಯಬೇಕು

– ವಿಷಯ ಎಂದು ನೀಡಿದಲ್ಲಿ ಎಪಿಎಲ್ ಕಾರ್ಡ್(APL card) ರದ್ದು ಪಡಿಸುವುದರ ಬಗ್ಗೆ ಎಂದು ಬರೆಯಿರಿ.

– ಯಾವಾಗಲೂ ವಿಷಯವನ್ನು ವಿಸ್ತರಿಸಿದಾಗ ನಿಮ್ಮ ಹೆಸರು ಮತ್ತು ಗ್ರಾಮ ಪಂಚಾಯಿತಿ ಯಾವುದು ಎಂಬುದನ್ನು ಬರೆಯಬೇಕು. ನಾವು ಬಹಳಷ್ಟು ಬಡತನ (poor)ರೇಖೆಯಲ್ಲಿ ಇದ್ದೇವೆ ನಾವು ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದೆವು ಆದ್ರೆ ಅದು ತಪ್ಪಿ ಎಪಿಎಲ್ ಕಾರ್ಡ್ ಆಗಿ ಮಂಜೂರಾಗಿದೆ. ಹಾಗಾಗಿ ಎಪಿಎಲ್ ಕಾರ್ಡನ್ನು ರದ್ದು ಮಾಡಿ ಬಿಪಿಎಲ್ (BPL)ಕಾರ್ಡನ್ನು ಮಂಜೂರು ಆಗುವಂತೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ ಹಾಗೆ ಸರಕಾರಿ ಸೌಲಭ್ಯಗಳನ್ನು ನಾವು ಪಡೆದುಕೊಳ್ಳುವಂತೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ ಎಂದು ಬರೆಯಿರಿ.

– ಕೊನೆಯಲ್ಲಿ ಕೆಳಭಾಗದಲ್ಲಿ ನಿಮ್ಮ ಹೆಸರು ಬರೆದು ಸಹಿ (signature)ಹಾಕಬೇಕು. ಹಾಗೆ ಎಡಭಾಗದಲ್ಲಿ ಅರ್ಜಿಯ ಜೊತೆ ಲಗತ್ತಿಸುತ್ತಿರುವ ಲಗತ್ತುಗಳು ಯಾವುದು ಎಂಬುದರ ಬಗ್ಗೆ ಬರೆಯಿರಿ.

– ಆದರ್ ಕಾರ್ಡ್(Aadhar card) ಮೂಲ ಎಪಿಎಲ್ ಕಾರ್ಡ್ ಅಧಿಕಾರಿಗಳ ವರದಿ ಇವುಗಳನ್ನು ಅರ್ಜಿಯ ಜೊತೆಗೆ ಅಟ್ಯಾಚ್(attach) ಮಾಡಿ ನೀಡಬೇಕು.

ಈ ರೀತಿ ನೀವು ಅರ್ಜಿ ಬರೆದು ಇನ್ವರ್ಡ್(in word) ವಿಭಾಗಕ್ಕೆ ನಿಮ್ಮ ಅರ್ಜಿಯನ್ನು ಸಲ್ಲಿಸಿದರೆ ನಿಮ್ಮ ಎಪಿಎಲ್ ಕಾರ್ಡ್ ರದ್ದಾಗುತ್ತದೆ

Leave A Reply

Your email address will not be published.