Meatloaf in Veg Biryani: ಆನ್ಲೈನ್ ಅಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ ಲೇಡಿಗೆ ತಿನ್ನುವಾಗ ಸಿಕ್ತು ಮಾಂಸದ ತುಂಡು!

Share the Article

Meatloaf in Veg Biryani :ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ಮೂಲಕ ಆರ್ಡರ್ ಮಾಡೋ ಫುಡ್ ವಿಚಾರವಾಗಿ ತುಂಬಾನೇ ಕಂಪ್ಲೇಂಟ್ ಗಳು ಬರಲು ಶುರುವಾಗಿವೆ. ಅಂತೆಯೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರೆ ಅದರಲ್ಲಿ ಮಾಂಸದ ತುಂಡುಗಳು (Meatloaf in Veg Biryani) ಕಂಡುಬಂದಿವೆ.

ಹೌದು! ನತಾಷಾ ಭಾರದ್ವಾಜ್​ ಎಂಬ ಮಹಿಳೆ ಸ್ವಿಗ್ಗಿಯಲ್ಲಿ ವೆಜ್​ ಬಿರಿಯಾನಿ ಆರ್ಡರ್​ ಮಾಡಿದ್ದರು. ಆದರೆ ಅವರಿಗೆ ಬಂದಿದ್ದು ಮಾತ್ರ ನಾನ್​ವೆಜ್​ ಬಿರಿಯಾನಿ. ಅದನ್ನು ತಿಳಿಯದೇ ತಿನ್ನುತ್ತಿರುವಾಗ ಅವರಿಗೆ ಮೂಳೆಯ ತುಂಡೊಂದು ಸಿಕ್ಕಿದೆ. ಇದರಿಂದ ಆಘಾತಕ್ಕೊಳಗಾದ ಅವರು ತಕ್ಷಣ ಸ್ವಿಗ್ಗಿಗೆ ದೂರನ್ನು ನೀಡಿದ್ದಾರೆ. ಹಣವನ್ನು ಮರುಪಾವತಿ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಅಲ್ಲಿನ ಕಸ್ಟಮರ್​ ಕೇರ್​ ವಿಭಾಗದವರು ಮಾತ್ರ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ.

ಆಹಾರವನ್ನು ತಯಾರಿಸಿದ ಹೋಟೇಲಿನವರು ಹಣ ಮರುಪಾವತಿ ಮಾಡುವುದಕ್ಕೆ ಒಪ್ಪದ ಕಾರಣ ಅದನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಅದಲ್ಲದೇ ನಿಮಗಾದ ಅನುಭವದ ಫೀಡ್​ಬ್ಯಾಕ್​ ನೀಡಿದರೆ ನಾವು ಹೋಟೇಲಿಗೆ ಅದನ್ನು ಫಾರ್ವರ್ಡ್​ ಮಾಡುತ್ತೇವೆ ಎಂದಿದ್ದಾರೆ. ಆದರೆ ಈ ಮಹಿಳೆ ಮಾತ್ರ ‘ಮಾಂಸಾಹಾರ ತಿಂದು ನನಗಾದ ಮಾನಸಿಕ ಆಘಾತ ಫೀಡ್​ಬ್ಯಾಕ್​ ನೀಡದರೆ ಸರಿಯಾಗುತ್ತದೆಯೇ’ ಎಂದು ಸಿಟ್ಟಾಗಿ ಪ್ರಶ್ನಿಸಿದ್ದಾರೆ.

ನಂತರ ಮಹಿಳೆ ಕೋರ್ಟ್​ಗೆ ಹೋಗುವುದಾಗಿ ಹೇಳಿದ ಮೇಲೂ ಹಿಂದೆ ನೀಡಿದ್ದ ರೀತಿಯಲ್ಲೇ ಅವರು ಉತ್ತರಿಸಿದ್ದಾರೆ. ಇದರಿಂದಾಗಿ ಸಿಟ್ಟಿಗೆದ್ದ ಮಹಿಳೆ ಟ್ವೀಟ್​ ಮಾಡಿದ್ದಾರೆ. ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಸಿಟ್ಟಾಗಿರುವ ಮಹಿಳೆ ಬಹು ಗಂಭೀರವಾಗಿ ಟ್ವೀಟ್​ ಮಾಡಿದ್ದು ಅಗತ್ಯ ದಾಖಲೆಗಳನ್ನು ಜತೆಗೆ ಲಗತ್ತಿಸಿದ್ದಾರೆ.

ನಮಗೆ ಹಸಿವಾಯ್ತು ಅಂದ್ರೆ ಆನ್ಲೈನ್ಗಳಲ್ಲಿ ಫುಡ್ ಆರ್ಡರ್ ಮಾಡ್ತೀವಿ. ಆದ್ರೆ ಇನ್ನು ಮುಂದೆ ಆರ್ಡರ್ ಮಾಡುವಾಗ ಬಹುಶಃ ನೂರು ಬಾರಿ ಯೋಚನೆ ಮಾಡಬೇಕು ಅಂತ ಅನಿಸುತ್ತೆ. ಯಾಕಂದ್ರೆ ಈ ಘಟನೆ ಹಾಗೆಯೇ ಇದೆ.

ಇನ್ನು ಮುಂದೆ ನೀವು ಕೂಡ ಫುಡ್ ಅಥವಾ ದಿನಸಿಗಳನ್ನ ಆರ್ಡರ್ ಮಾಡುವಾಗ 100 ಬಾರಿ ಯೋಚಿಸಿ ಆನಂತರ ಆರ್ಡರ್ ಮಾಡಿ. ಹಾಗೆಯೇ ಈ ರೀತಿಯಾದಂತಹ ಕೇಸ್ಗಳು ನಿಮ್ಮಲ್ಲಿ ನಡೆದರೆ ಮುಲಾಜೇ ಇಲ್ಲದೆ ಅವರನ್ನ ಸಂಪರ್ಕಿಸಿ ಹಾಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿ. ಇದರ ಮೂಲಕ ಆದ್ರೂ ಅವರು ಬುದ್ಧಿಯನ್ನ ಕಲಿತುಕೊಳ್ಳಬಹುದು.

Leave A Reply