Election 2023: ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಲು ಕಾರಣವೇನು? ಇಲ್ಲಿದೆ ಅಸಲಿ ಗುಟ್ಟು!

Election-2023: ಈಗಾಗಲೇ ಚುನಾವಣೆಯ (Election-2023) ಕಾವು ಎಲ್ಲೆಡೆ ಗರಿಗೆದರಿದ್ದು, ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲುವಿನ ಜಯಭೇರಿ ಸಾಧಿಸಲು ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿದೆ. ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ( Election 2023) ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ನಡುವೆ, ಎಲ್ಲರ ನಿರೀಕ್ಷೆ ತಲೆ ಕೆಳಗಾಗುವ ಹಾಗೆ ಈ ಬಾರಿ ಹಳೆಯ ಮುತ್ಸದ್ದಿ ನಾಯಕರನ್ನು ಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಿರುವುದು ಕಂಡುಬಂದಿದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಕಾಡುತ್ತಿದೆ. ಇದಕ್ಕೆ ಉತ್ತರ ಸದ್ಯ ಲಭ್ಯವಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ 52 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರುವ ಕಮಲ ಪಾಳಯದಲ್ಲಿ(BJP) ಅಸಮಾಧಾನ ಭುಗಿಲೆದ್ದಿದೆ. ಈಗಾಗಲೇ ಕೆಲ ನಾಯಕರು ರಾಜೀನಾಮೆ ಅಸ್ತ್ರ ಕೂಡ ಬಳಕೆ ಮಾಡಿದ್ದಾರೆ. ರಾಜ್ಯದಾದ್ಯಂತ ಬಂಡಾಯದ ಬಿಸಿಯನ್ನು ಎದುರಿಸುತ್ತಿದೆ.ಆದರೆ, ಹೊಸಬರಿಗೆ ಟಿಕೆಟ್ ಏಕೆ ನೀಡಲಾಗಿದೆ ಎಂಬ ಕುರಿತು ರಾಜ್ಯ ಉಸ್ತುವಾರಿ ಸಚಿವರಾದ ಅರುಣ್ ಸಿಂಗ್ (Arun Singh)ಮಾಧ್ಯಮವೊಂದರ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಸರ್ಕಾರ (Government) ಇಲ್ಲವೇ ಪಕ್ಷದ ವಿರುದ್ಧ ಆಡಳಿತ ವಿರೋಧಿ ನಿಲುವು ಹೊಂದಿಲ್ಲ. ಬಿಜೆಪಿಯು ರಾಜ್ಯಾದ್ಯಂತ ಯುವ ಮುಖಗಳಿಗೆ ಅವಕಾಶ ಕಲ್ಪಿಸಿದ್ದು, ನಾವು ಹಿರಿಯ ನಾಯಕರನ್ನು ಗೌರವಿಸುವುದನ್ನು ಮುಂದುವರಿಸುತ್ತೇವೆ. ನಾವು ಹೊಸಬರಿಗೆ ಅವಕಾಶ ನೀಡುವುದನ್ನು ಯುಪಿ, ಉತ್ತರಾಖಂಡ, ಅಸ್ಸಾಂ, ಗುಜರಾತ್ ಅಥವಾ ಹಿಮಾಚಲದಲ್ಲಿ ಈಗಾಗಲೇ ಮಾಡಿದ್ದು, ಇಲ್ಲಿ ನಾವು ಮುಂದಿನ ಪೀಳಿಗೆಯ ನಾಯಕರನ್ನು ಬೆಳೆಸಲು ಈ ಕ್ರಮ ಕೈಗೊಂಡಿರುವ ಕುರಿತು ಅರುಣ್ ಸಿಂಗ್ ಮಾಹಿತಿ ನೀಡಿದ್ದಾರೆ.

ಬಿಜೆಪಿ ಸಂಘಟನಾತ್ಮಕವಾಗಿಯೂ ಬಲಿಷ್ಠ ಪಕ್ಷವಾಗಿದ್ದು, ಕಳೆದ 4-5 ವರ್ಷಗಳಿಂದ ತಳಮಟ್ಟದಿಂದ ನಮ್ಮನ್ನು ಕಟ್ಟಿಕೊಳ್ಳುತ್ತಿದ್ದೇವೆ. ಕಾಂಗ್ರೆಸ್ ಸಂಘಟನಾತ್ಮಕವಾಗಿ ತಯಾರಿ ನಡೆಸಿಲ್ಲ ಜೊತೆಗೆ ಅವರಿಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಲ್ಲ. ಹೀಗಾಗಿ ಅಲ್ಲಿ ಗುಂಪುಗಾರಿಕೆ ಮತ್ತು ಒಳಜಗಳ ಸದಾ ನಡೆಯುತ್ತಲೇ ಇರುತ್ತದೆ. ಮೂರು ಕ್ಯಾಂಪ್ಗಳು ಪರಸ್ಪರ ಸೆಣೆಸಲು ಯತ್ನಿಸುತ್ತಾ ಇರುತ್ತದೆ. ಇದು ನಮಗೆ ಪ್ರಯೋಜನವನ್ನು ನೀಡುತ್ತದೆ. ಕಾಂಗ್ರೆಸ್ ಪಕ್ಷದ (Congress Party) ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಕ್ರಮವಾಗಿ ವಿ ಸೋಮಣ್ಣ ಮತ್ತು ಆರ್ ಅಶೋಕ್ ಎಂಬ ಇಬ್ಬರು ಹಿರಿಯ ನಾಯಕರನ್ನು ಎದುರಾಳಿಯಾಗಿ ಕಣಕ್ಕೆ ನಿಲ್ಲಿಸಿದ್ದೇವೆ.

ಪ್ರಧಾನಿ ಮೋದಿ ಅವರ ಜನಪ್ರಿಯತೆಯ ಬಗ್ಗೆ ವಿವರಿಸಬೇಕಾಗಿಲ್ಲ. ಹೀಗಾಗಿ, ಕರ್ನಾಟಕ ( Karnataka) ಪ್ರಚಾರದ ನೇತೃತ್ವ ವಹಿಸಲಿದ್ದು, ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಸ್ಮೃತಿ ಇರಾನಿ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಮತ್ತು ಹಿಮಂತ ಬಿಸ್ವ ಶರ್ಮಾ ಅವರಂತಹ ಪಕ್ಷದ ಹಿರಿಯ ಮುಖಗಳು, ರಾಜ್ಯ ನಾಯಕರಾದ ಬಿಎಸ್ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಅವರು ಬಿಜೆಪಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ತಿಂಗಳು ಬೆಳಗಾವಿ, ಶಿವಮೊಗ್ಗ, ಮಂಡ್ಯ ಮತ್ತು ದಾವಣಗೆರೆಯಲ್ಲಿ ಪ್ರಧಾನಿ ಮೋದಿಯವರ ರ್ಯಾಲಿ ಲಕ್ಷಾಂತರ ಜನರ ಗಮನ ಸೆಳೆದಿದೆ.

ಕೆಲವು ನಾಯಕರ ಭಾವನೆಗಳನ್ನು ನೋಯಿಸುತ್ತಿದ್ದೇವೆ ಎಂಬುದು ಸಾಮಾನ್ಯ ಸಂಗತಿಯಲ್ಲ. ಪ್ರತಿ ಕ್ಷೇತ್ರದ ಟಿಕೆಟ್ ಗಳಿಗೆ ನಾವು 5 ಕ್ಕೂ ಹೆಚ್ಚು ಆಕಾಂಕ್ಷಿಗಳನ್ನು ಗುರುತಿಸಿದ್ದೇವೆ. ಕಾಂಗ್ರೆಸ್ ಎರಡು ಪಟ್ಟಿಗಳಲ್ಲಿ 165 ಹೆಸರುಗಳನ್ನು ಪ್ರಕಟಿಸಿದೆ.ಆದರೆ ಅವರು ಪ್ರತಿಭಟನೆಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿಲ್ಲ. ಬೇರೆ ಹೆಸರುಗಳನ್ನು ನೀಡಲು ತಯಾರಿಲ್ಲ.ಆದರೆ ನಾವು ನಮ್ಮ ಎಲ್ಲವನ್ನೂ ಎದುರಿಸಲು ಬದ್ಧರಾಗಿದ್ದೇವೆ. ಬೊಮ್ಮಾಯಿ( CM Bommayi)ಸರ್ಕಾರದ ಕಾರ್ಯಗಳು ಮತ್ತು ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಕರ್ನಾಟಕದ ಬೆಳವಣಿಗೆಯೇ ನಿದರ್ಶನ ಹಾಗೂ ಸಾಕ್ಷಿ ಎಂದು ಸಂದರ್ಶನದ ಸಂದರ್ಭ ಅರುಣ್ ಸಿಂಗ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Richest CM Of India : ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ರಿಲೀಸ್! ಸಿಎಂ ಬೊಮ್ಮಾಯಿ ಎಷ್ಟು ಸಿರಿವಂತರು ಗೊತ್ತಾ?

Leave A Reply

Your email address will not be published.