Indian Railway and Summer Vacations : ಬೇಸಿಗೆ ರಜೆಗೆ 217 ವಿಶೇಷ ರೈಲುಗಳು! ಕರ್ನಾಟಕದ ಪ್ರವಾಸಿ ತಾಣದ ಮಾಹಿತಿ, ಸಂಪರ್ಕ, ವಿವರ ಇಲ್ಲಿದೆ

Indian Railway and Summer Vacations : ಈ ತಿಂಗಳಲ್ಲಿ ಮಕ್ಕಳಿಗೆ ಬೇಸಿಗೆ ರಜೆ (summer holiday)ಇರುವುದರಿಂದ ಕುಟುಂಬ ಸಮೇತರಾಗಿ ದೂರದ ಪ್ರವಾಸ ಪ್ರಯಾಣವನ್ನು ಮಾಡಲು ಇಚ್ಚಿಸುತ್ತಾರೆ. ಹಾಗಾಗಿ ಇವರ ಬಯಕೆಗೆ ರೈಲ್ವೇ ಸಚಿವಾಲಯವು ಬೇಸಿಗೆ ರಜೆಗೆ(Indian Railway and Summer Vacations) 217 ವಿಶೇಷ ರೈಲುಗಳನ್ನು ಓಡಿಸಲು ಇದೀಗ ನಿರ್ಧರಿಸಿದೆ. ಹಾಗೆಯೇ ದೇಶದ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಸಲಿವೆ ಎಂದು ರೈಲ್ವೆ ಅಧಿಕಾರಿಗಳು (railway officer)ಮಾಹಿತಿಯನ್ನು ನೀಡಿದ್ದಾರೆ. ಈ ಕ್ರಮವನ್ನು ಪ್ರಯಾಣಿಕರಿಗೆ ದೂರದ ಪ್ರವಾಸಿ ಪ್ರಯಾಣ ಮಾಡಲು ಇಂತಹ ಅನುಕೂಲವಾಗುವಂತ ಕ್ರಮವನ್ನು ಕೈಗೆತ್ತಿಕೊಂಡಿದ್ದಾರೆ.

 

ಬೇಸಿಗೆ ಅವಧಿಯಲ್ಲಿ ಜನರು ದೂರದ ಪ್ರವಾಸಿ(trip) ಪ್ರಯಾಣ ಮಾಡುವಾಗ ಕಡಿಮೆ ರೈಲಿನ ವ್ಯವಸ್ಥೆ ಇರುವ ಕಾರಣ ಅದರಲ್ಲಿ ಹೆಚ್ಚುವರಿ ಜನದಟ್ಟಣೆ ಆಗುವ ಕಾರಣದಿಂದ ಅದನ್ನು ಕಡಿಮೆ ಮಾಡುದಕ್ಕಾಗಿ ಈ ಯೋಜನೆಯನ್ನು ಮಾಡಲು ಶುರುವಾಗಿದ್ದಾರೆ

ವಿಶೇಷ ರೈಲುಗಳು (train) ಭಾರತದಾದ್ಯಂತ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತವೆ. ಪಾಟ್ನಾ, ಮುಂಬೈ, ಬೆಂಗಳೂರು ಮತ್ತು ಚೆನ್ನೈನಂತಹ ಜನಪ್ರಿಯ ಪ್ರವಾಸಿ (trip)ತಾಣಗಳಿಗೆ ಹೋಗುವವರ ಪ್ರಯಾಣ ಅಗತ್ಯಗಳನ್ನು ಪೂರೈಸುತ್ತವೆ. ಈ ಸೌಲಭ್ಯವು ಬೇಸಿಗೆಯ ತಿಂಗಳುಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ರೈಲ್ವೆ ಇಲಾಖೆಯ ಹೇಳಿಕೆಯ ಪ್ರಕಾರ, ನೈಋತ್ಯ ರೈಲ್ವೆಯಿಂದ 69 ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿವೆ. ದಕ್ಷಿಣ ಕೇಂದ್ರ ವಿಭಾಗವು ಅಂತಹ 48 ರೈಲುಗಳನ್ನು ವ್ಯವಸ್ಥೆ ಮಾಡುವ ರೀತಿ ಯೋಚನೆಯನ್ನು ಮಾಡಿದೆ. ಅದೇ ರೀತಿ ನೈಋತ್ಯ ರೈಲ್ವೆ ವಲಯವು ಆಂಧ್ರಪ್ರದೇಶ(Andhra Pradesh), ಕರ್ನಾಟಕ, ಮಹಾರಾಷ್ಟ್ರ(Maharashtra) ಮತ್ತು ತೆಲಂಗಾಣದ (Telangana) ರೈಲು ನಿಲ್ದಾಣಗಳನ್ನು ಒಳಗೊಳ್ಳುತ್ತದೆ.ಅದೇ ರೀತಿ ಈ ಉಪಕ್ರಮದ ಭಾಗವಾಗಿ, ಪಶ್ಚಿಮ ರೈಲ್ವೆ ವಲಯವು 40 ವಿಶೇಷ ರೈಲುಗಳನ್ನು ಜನರ ಹಿತದೃಷ್ಟಿಯಿಂದ ಓಡಿಸಲಿದೆ ಮತ್ತು ದಕ್ಷಿಣ ರೈಲ್ವೆ (dakshina railway)ವಲಯವು 20 ವಿಶೇಷ ರೈಲುಗಳನ್ನು ಜನರಿಗೆ ಸಹಾಯ ಆಗುವ ರೀತಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ.

ಕೇಂದ್ರ ಮತ್ತು ಪೂರ್ವ ಕೇಂದ್ರ ರೈಲ್ವೆ ವಲಯಗಳು ಜನರು ಪ್ರವಾಸಿ ತಾನಕ್ಕೆ ಹೋಗಲು ತಲಾ 10 ವಿಶೇಷ ರೈಲುಗಳನ್ನು ಪ್ರಾರಂಭಿಸುವ ಯೋಜನೆಯನ್ನು ಲೆಕ್ಕ ಹಾಕಿದ್ದು. ಬಿಹಾರವನ್ನು ಒಳಗೊಂಡಿರುವ ಪೂರ್ವ ಕೇಂದ್ರ ರೈಲ್ವೆ ವಲಯವು ಒಟ್ಟು 296 ಟ್ರಿಪ್‌ಗಳನ್ನು ಪೂರ್ಣಗೊಳಿಸುವ 10 ವಿಶೇಷ ರೈಲುಗಳನ್ನು (train)ಓಡಿಸಲಿದೆ. ಹೆಚ್ಚುವರಿಯಾಗಿ, ಪಶ್ಚಿಮ ಬಂಗಾಳವನ್ನು ಒಳಗೊಂಡಿರುವ ಪೂರ್ವ ರೈಲ್ವೆ ವಲಯವು ಅದರ ಮಾರ್ಗದಲ್ಲಿ ನಾಲ್ಕು ವಿಶೇಷ ರೈಲುಗಳನ್ನು ಓಡಿಸಲಿದೆ.

ವಾಯುವ್ಯ ರೈಲ್ವೆ ವಲಯವು 16 ರೈಲುಗಳನ್ನು ಬೇಸಿಗೆಕಾಲದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಘೋಷಿಸಿದೆ. ಆದರೆ ಉತ್ತರ ರೈಲ್ವೆ ವಲಯಕ್ಕೆ ಅಂತಹ ಯಾವುದೇ ರೈಲುಗಳನ್ನು ಹೋಗುವ ಸೌಲಭ್ಯವನ್ನು ನೀಡಿಲ್ಲ. ಪ್ರತಿ ವಲಯದ ಅಡಿಯಲ್ಲಿ ಬರುವ ಯಾವುದೆಲ್ಲ ಪ್ರಮುಖ ನಿಲ್ದಾಣಗಳಿವೆಯೋ ಅವುಗಳಿಗೆ ಮಾತ್ರ ಈ ಉಪಕ್ರಮದಲ್ಲಿ ಸೇರಿಸಲಾಗುವುದು ಎಂದು ರೈಲ್ವೆಯ ಸೂಚನೆಯಲ್ಲಿ ಈ ರೀತಿಯ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ.

ಈ ವಿಶೇಷ ಬೇಸಿಗೆಯಲ್ಲಿ(summer) ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಲುವಾಗಿ ರೈಲುಗಳ ಸಂಖ್ಯೆ, ಹೆಸರುಗಳು, ದಿನಾಂಕಗಳು ಮತ್ತು ಮಾರ್ಗಗಳ ಬಗ್ಗೆ ಹೊರತುಪಡಿಸಿದೇ ಬಿಟ್ಟರೆ ಬೇರೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಜನರು ಈ ಯೋಜನೆಯನ್ನು ತಿಳಿದ ಬಳಿಕ ವಿಶೇಷ ರೈಲುಗಳಲ್ಲಿ ಜನರು ಪ್ರಯಾಣ(travel) ಮಾಡಲು ಇಚ್ಚಿಸಿದ್ದಾರೆ ಹಾಗಾಗಿ ಟಿಕೆಟ್ ಗಳನ್ನು ಶೀಘ್ರದಲ್ಲೇ ನೀಡಿ ಎನ್ನುವ ರೀತಿ ರೈಲ್ವೆ ಅಧಿಕಾರಿಗಳ ಬಗ್ಗೆ ತಿಳಿಸಿದ್ದಾರೆ.

Leave A Reply

Your email address will not be published.