7th Pay Commission : ಹಿಂದಿನ ಸರಕಾರದ ನಿಯಮದಲ್ಲಿ ಮಹತ್ತರ ಬದಲಾವಣೆ! CGHS ನ ಹೊಸ ದರ ಬಿಡುಗಡೆ!

Central govt CGHS Scheme : ಕೇಂದ್ರ ನೌಕರರಿಗೆ (government employees) ಪ್ರಯೋಜನಕಾರಿಯಾಗುವಂತಹ ನಿಯಮವನ್ನು ಸರ್ಕಾರ ಮಾಡಿದ್ದು, ‘ಆರೋಗ್ಯ ಭದ್ರತೆ’ ಅಡಿಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಲ್ಲಿ (Central Govt CGHS Scheme) ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

 

ಇದೀಗ ಹಿಂದಿನ ಸರಕಾರದ ( 7th Pay Commission) ನಿಯಮದಲ್ಲಿ ಮಹತ್ತರ ಬದಲಾವಣೆಯಾಗಲಿದ್ದು, ಸದ್ಯ CGHS ನ ಹೊಸ ದರಗಳನ್ನು ಸರ್ಕಾರವು ಬಿಡುಗಡೆ ಮಾಡಿದೆ. ಸಿಜಿಎಚ್‌ಎಸ್ ಎಂಪನೆಲ್ಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸರ್ಕಾರ ಹೆಚ್ಚಿನ ಹಣವನ್ನು ಪಾವತಿಸುತ್ತದೆ ಎನ್ನಲಾಗಿದೆ.

ಮೇ 6, 2014 ರಂದು CGSH ನ ಹೊಸ ದರಗಳು ಜಾರಿಗೆ ಬಂದಿದ್ದು, 2014ರ ನಂತರ CGHS ದರದಲ್ಲಿ ಬದಲಾವಣೆ ಮಾಡಲಾಗಿದೆ. ಸರಕಾರ ಒಪಿಡಿ/ಐಪಿಡಿಗೆ ಸಮಾಲೋಚನಾ ಶುಲ್ಕವನ್ನು 150 ರೂ.ನಿಂದ 350 ರೂ.ಗೆ ಹೆಚ್ಚಿಸಿದೆ. ಐಸಿಯು ಶುಲ್ಕವನ್ನು 5,400 ರೂ.ಗೆ ಏರಿಕೆ ಮಾಡಲಾಗಿದೆ. ಇದರಲ್ಲಿ ಖಾಸಗಿ ವಾರ್ಡ್ ಗೆ 4500 ರೂ., ಎನ್ ಎಬಿಎಚ್ ಗೆ 862 ರೂ. ನಿಗದಿ ಪಡಿಸಲಾಗಿದೆ. ಕೊಠಡಿ ಬಾಡಿಗೆಯನ್ನು 1500, 3000 ಹಾಗೂ 4500 ರೂ. ಮಾಡಲಾಗಿದೆ. ಖಾಸಗಿ ವಾರ್ಡ್‌ಗಳ ದರವನ್ನು 3,000 ರೂ.ನಿಂದ 4,500 ರೂ.ಗೆ ಹೆಚ್ಚಿಸಲಾಗಿದ್ದು, ಅರೆ-ಖಾಸಗಿ ವಾರ್ಡ್‌ನ ಶುಲ್ಕವನ್ನು 2,000 ರೂ.ನಿಂದ 3,000 ರೂ.ಗೆ ಹೆಚ್ಚಿಸಲಾಗಿದೆ.

ಈ ಹಿಂದೆ ಫಲಾನುಭವಿಯು ಆಸ್ಪತ್ರೆಗೆ ರೆಫರಲ್ ಪಡೆಯಲು CGHS ವೆಲ್‌ನೆಸ್ ಸೆಂಟರ್‌ಗೆ ಖುದ್ದಾಗಿ ಭೇಟಿ ನೀಡಬೇಕಾಗಿತ್ತು. ಆದರೆ, ಇನ್ನು ಮುಂದೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರವು ರೆಫರಲ್‌ಗಳಿಗೆ ವೀಡಿಯೊ ಕರೆ ಆಯ್ಕೆಯನ್ನು ಅನುಮತಿಸಿದೆ. ಫಲಾನುಭವಿಯು CGHS ಸ್ವಾಸ್ಥ್ಯ ಕೇಂದ್ರವನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೆ, ಆ ಸ್ಥಳಕ್ಕೆ ಯಾರನ್ನಾದರೂ ರೆಫರಲ್ ಪಡೆಯಲು ಕಳುಹಿಸಬಹುದು. ರೆಫರಲ್ ಮೂಲಕ ಫಲಾನುಭವಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಅನುಮತಿಸುವ ಮೊದಲು ವೈದ್ಯಕೀಯ ಅಧಿಕಾರಿ ಡಾಕ್ಯುಮೆಂಟ್ ಅನ್ನು ಪರಿಶೀಲಿಸುತ್ತಾರೆ.

ಇನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸರ್ಕಾರ ಹೆಚ್ಚಿನ ಹಣವನ್ನು ಪಾವತಿಸುವುದರಿಂದ ಕೇಂದ್ರ ಸರಕಾರದ ಬೊಕ್ಕಸಕ್ಕೆ 240 ಕೋಟಿ ರೂ.ನಿಂದ 300 ಕೋಟಿ ರೂ.ಗೆ ಹೆಚ್ಚಿನ ಹೊರೆ ಬೀಳಲಿದೆ.

Leave A Reply

Your email address will not be published.