Under Construction Temple : ನಿರ್ಮಾಣ ಹಂತದ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು! ದೇವಸ್ಥಾನ ಸುಟ್ಟು ಭಸ್ಮ

Under Construction Temple : ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಲೇ ಇದೆ. ಮನುಷ್ಯ ಮಾಡುವ ಕೆಲವೊಂದು ಕೃತ್ಯಗಳು ಅನ್ಯಾಯಗಳು ಯಾಕಾಗಿ ಮಾಡುತ್ತಾರೆ ಎನ್ನುವುದು ಊಹಿಸಲು ಸಹ ಸಾಧ್ಯವಿಲ್ಲ. ಅದರಲ್ಲೂ ದೇವರ ಬಗೆಗಿನ ಜನರ ನಂಬಿಕೆ ಮತ್ತು ಭಾವನೆಗಳ ಜೊತೆಗೆ ಚೆಲ್ಲಾಟ ಆಡಿರುವುದು ಬೆಳಕಿಗೆ ಬಂದಿದೆ.

 

ಹೌದು, ನಿರ್ಮಾಣ ಹಂತದಲ್ಲಿರುವ ಓಂ ಶಕ್ತಿ ದೇವಾಲಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಇದರಿಂದ ದೇವರ ಫೋಟೋಗಳು ಹಾಗೂ ಪೂಜಾ ವಸ್ತುಗಳು ಬೆಂಕಿಗೆ ಸುಟ್ಟು ಭಸ್ಮವಾಗಿದೆ.

ಕೋಲಾರದ ಲಕ್ಷ್ಮೀ ಸಾಗರ ಗ್ರಾಮದಲ್ಲಿ ಘಟನೆ ನಡೆದಿದ್ದು, ನಿರ್ಮಾಣ ಹಂತದಲ್ಲಿರುವ ಓಂ ಶಕ್ತಿ ದೇವಾಲಯ(Om Shakti Temple)ಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಸರ್ಕಾರಿ ಖರಾಬಿನಲ್ಲಿ ದೇವಾಲಯ ನಿರ್ಮಾಣ ಮಾಡಲು ಗ್ರಾಮಸ್ಥರು ಮುಂದಾಗಿದ್ದು (Under Construction Temple), ಪಾಯ ಹಾಕಿದ್ದರು. ಆದರೆ ಏಪ್ರಿಲ್ 11 ರಂದು ರಾತ್ರಿ ಕಿಡಿಗೇಡಿಗಳು ದೇವಾಲಯಕ್ಕೆ ಬೆಂಕಿ ಹಾಕಿದ್ದಾರೆ. ಇದರಿಂದ ದೇವರ ಫೋಟೋಗಳು ಹಾಗೂ ಪೂಜಾ ವಸ್ತುಗಳು ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಈ ಕುರಿತು ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಗಾಗಲೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Leave A Reply

Your email address will not be published.