Smartphone: ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ 12,000 ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳು : ರಿಯಲ್‌ ಮಿ, ಶವೋಮಿ, ಸ್ಯಾಮ್‌ಸಂಗ್‌, ಪೋಕೋ, ಒಪ್ಪೋ ಬ್ರಾಂಡ್‌ಗಳು ಬಿಡುಗಡೆಗೊಳಿಸಿದೆ ಈ ಫೋನ್ ಗಳನ್ನು!

smartphone under Rs.12000 :ಟೆಕ್ನಾಲಜಿಗಳು ಮುಂದುವರಿದಂತೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಮೊಬೈಲ್ ಫೋನ್ ಗಳು ಲಗ್ಗೆ ಇಡುತ್ತಲೇ ಇದ್ದು, ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಲೇ ಇದೆ. ಅದರಂತೆ ಇದೀಗ ರಿಯಲ್‌ ಮಿ, ಶವೋಮಿ, ಸ್ಯಾಮ್‌ಸಂಗ್‌, ಪೋಕೋ, ಒಪ್ಪೋ ಬ್ರಾಂಡ್‌ಗಳು ಕಡಿಮೆ ಬೆಲೆಯ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿವೆ.

ಹೌದು. ಈ ಕಂಪನಿಗಳು 12,000 ಕಡಿಮೆ ಬೆಲೆಯ ಫೋನ್ ಗಳನ್ನು ಬಿಡುಗಡೆಗೊಳಿಸಿದೆ (smartphone under Rs.12000). ಹಾಗಿದ್ರೆ ಬನ್ನಿ ಅತ್ಯುತ್ತಮ ಫೀಚರ್ ಹೊಂದಿರುವ ಬೆಸ್ಟ್ ಮೊಬೈಲ್ ಫೋನ್ ಗಳು ಯಾವುದು ಎಂಬುದನ್ನು ತಿಳಿಯೋಣ.

ಸ್ಯಾಮ್​ಸಂಗ್ ಗ್ಯಾಲಕ್ಸಿ M13:
Galaxy M13 ನ 4GB RAM ಮತ್ತು 64GB ಸಂಗ್ರಹಣೆಯ ರೂಪಾಂತರವು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 11,489 ರೂ. ಗೆ ನಿಮ್ಮದಾಗಿಸಬಹುದು. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಬಲಿಷ್ಠವಾದ 6000mAh ಬ್ಯಾಟರಿ ಮತ್ತು 6.6 ಇಂಚಿನ ಡಿಸ್ ಪ್ಲೇಯನ್ನು ನೀಡಲಾಗಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ F13:
ಈ ಸ್ಮಾರ್ಟ್​ಫೋನ್ ಎಕ್ಸಿನೊಸ್ 850 ಚಿಪ್‌ಸೆಟ್‌ನಲ್ಲಿ ರನ್ ಆಗುತ್ತಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರವು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 10,999 ರೂ. ಗೆ ನಿಮ್ಮದಾಗಿಸಬಹುದು. ಈ ಫೋನ್ 6.6 ಇಂಚಿನ ಡಿಸ್ ಪ್ಲೇ ಹೊಂದಿದೆ. ದೀರ್ಘ ಸಮಯ ಬಾಳಿಕೆ ಬರುವ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ (50MP+5MP+2MP) ಜೊತೆಗೆ 8MP ಯ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಮೋಟೋರೊಲಾ G32:
ಈ ಫೋನ್‌ನ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಫ್ಲಿಪ್‌ಕಾರ್ಟ್‌ನಲ್ಲಿ 11,999 ರೂ. ಗೆ ಖರೀದಿಸಬಹುದು. ಇದು 6.5 ಇಂಚಿನ ಡಿಸ್ ಪ್ಲೇ ಹೊಂದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ (50MP + 8MP + 2MP) ಜೊತೆಗೆ 16MP ನ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. 5000mAh ಬ್ಯಾಟರಿಯನ್ನು ಹೊಂದಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 680 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ರಿಯಲ್ ಮಿ C55:
ಈ ಫೋನ್‌ನ 6GB RAM ಮತ್ತು 64GB ಸ್ಟೋರೇಜ್ ರೂಪಾಂತರವು ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ 11,999 ರೂ. ಗೆ ಸೇಲ್ ಆಗುತ್ತಿದೆ. ಇದು 6.72 ಇಂಚಿನ ಡಿಸ್ ಪ್ಲೇ ಹೊಂದಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ (64MP + 2MP) ಜೊತೆಗೆ 8MP ನ ಮುಂಭಾಗದ ಕ್ಯಾಮೆರಾವನ್ನು ನೀಡಾಗಿದೆ. ಇದು 5000mAh ಬ್ಯಾಟರಿಯನ್ನು ಹೊಂದಿದ್ದು ಮತ್ತು ಮೀಡಿಯಾಟೆಕ್ ಹಿಲಿಯೊ G88 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಒಪ್ಪೋ A17:
ಇದರ ಬೆಲೆ 11,950 ರೂ. ಆಗಿದೆ. ಇದು 4GB RAM ಮತ್ತು 64GB ಸಾಮರ್ಥ್ಯ ಹೊಂದಿದೆ. ಮೀಡಿಯಾಟೆಕ್ ಹಿಲಿಯೊ G35 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6.5 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು ಡಬಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 5000mAh ಬ್ಯಾಟರಿಯನ್ನು ನೀಡಲಾಗಿದೆ.

ಇದನ್ನೂ ಓದಿ: Airtel prepaid recharge plan : 3 ವಾರ್ಷಿಕ ವ್ಯಾಲಿಡಿಟಿ ಯೋಜನೆಗಳನ್ನು ಬಿಡುಗಡೆಗೊಳಿಸಿದ ಏರ್ಟೆಲ್!

Leave A Reply

Your email address will not be published.