Sleep setting : ಸ್ಮಾರ್ಟ್ ಫೋನ್ ನ ಈ ಸೆಟ್ಟಿಂಗ್ ಬದಲಾವಣೆ ಮಾಡುವ ಮೂಲಕ ನೀವು ಮಾಡಬಹುದು ಸರಿಯಾದ ನಿದ್ದೆ!

Sleep setting : ಮೊಬೈಲ್ ಫೋನ್ ಇಂದಿನ ಯುವ ಜನತೆಯ ಬಲಗೈ ಇದ್ದಂತೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಫೋನ್ ಬಳಸದ ಜನರಿಲ್ಲ. ಎಷ್ಟರ ಮಟ್ಟಿಗೆ ಅಡಿಕ್ಟ್ ಆಗಿದ್ದಾರೆ ಅಂದ್ರೆ ಒಂದು ಹೊತ್ತು ಮೊಬೈಲ್ ಇರದೇ ಇರಲು ಸಾಧ್ಯವಿಲ್ಲ. ಹಲವು ಕೆಲಸಗಳಿಗೆ ಉಪಯೋಗವಾಗುವ ಮೊಬೈಲ್ ನಿಂದ ಆರೋಗ್ಯಕ್ಕೆ ಎಷ್ಟು ಉಪಯೋಗ ಇದೆ ಎಂಬುದು ತಿಳಿಯದೆ ಹೋಗಿದೆ.

ಸ್ಮಾರ್ಟ್ ಫೋನ್ ಬಳಕೆಯ ಕುರಿತು ಅಧ್ಯಯನವೊಂದು ನಡೆದಿದ್ದು, ಮೊಬೈಲ್ ಬಳಕೆಯಿಂದ ಏನೆಲ್ಲಾ ಪರಿಣಾಮ ಉಂಟಾಗಬಹುದು ಎಂಬುದನ್ನು ಹೇಳಲಾಗಿದೆ. ಹೌದು. ಮೊಬೈಲ್ ಫೋನ್ ಹೆಚ್ಚು ಬಳಸುವುದರಿಂದ ಮೆದುಳಿನ ಆಲೋಚನಾ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಮನೋವೈದ್ಯರು ಹೇಳಿದ್ದಾರೆ.

ನಿದ್ರಾಹೀನತೆಯ ಸಮಸ್ಯೆ ಸ್ಮಾರ್ಟ್ ಫೋನ್ ನಿಂದ ಹೊರಸೂಸುವ ಕಿರಣಗಳಿಂದ ಉಂಟಾಗುತ್ತದೆ. ಹೀಗಾಗಿ ಸ್ಮಾರ್ಟ್ಫೋನ್ಗಳ ದೀರ್ಘಕಾಲದ ಬಳಕೆಯು ನಿದ್ರಾಹೀನತೆಗೆ ಕಾರಣವಾಗಬಹುದು. ಇಂತಹ ಸಮಸ್ಯೆಗಳನ್ನು ದೂರ ಮಾಡಲು ಮೊಬೈಲ್ ಫೋನ್ ನಲ್ಲಿಯೇ ಕೆಲವೊಂದು ಟಿಪ್ಸ್ ಗಳಿದೆ. ಹಾಗಿದ್ರೆ ಬನ್ನಿ ತಜ್ಞರು ಹೇಳಿರುವ ಕೆಲವೊಂದು ಸೆಟ್ಟಿಂಗ್ (Sleep setting) ಬದಲಾವಣೆಗಳ ಕುರಿತು ತಿಳಿಯೋಣ.

ಫೋನ್ ಬೆಳಕಿನಿಂದ ಹೊರಸೂಸುವ ನೀಲಿ ಬೆಳಕಿನ ಹೊರಸೂಸುವಿಕೆಯು ಮಲಗುವ ಸಮಯವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ವಿಶೇಷವಾಗಿ ಉತ್ಪತ್ತಿಯಾಗುವ ಮೆಲಟೋನಿನ್ ಎಂಬ ಹಾರ್ಮೋನ್ ಅನ್ನು ನಿರ್ಬಂಧಿಸುವುದು ನಿದ್ರೆಯ ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ರಾತ್ರಿ ಓದುವ ಮೋಡ್ ಬದಲಾಯಿಸಬೇಕು.

ಆಂಡ್ರಾಯ್ಡ್ 7.1 ಆವೃತ್ತಿಯಿಂದ ನೈಟ್ಲೈಟ್ ಎಂಬ ವೈಶಿಷ್ಟ್ಯವನ್ನು ಈ ಸಮಸ್ಯೆಯನ್ನು ನಿವಾರಿಸಲು ಪರಿಚಯಿಸಲಾಗಿದೆ. ಈ ನವೀಕರಣವು ನಿಮಗೆ ಬೇಗನೆ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಫೋನ್ನಲ್ಲಿ ಸೆಟ್ಟಿಂಗ್ಗಳನ್ನು ತೆರೆದು ಡಿಸ್ಪ್ಲೇ ಮತ್ತು ಪ್ರಕಾಶಮಾನತೆಯನ್ನು ಆಯ್ಕೆ ಮಾಡಿ ಮತ್ತು ಅದರಲ್ಲಿ ನೈಟ್ ಲೈಟ್ / ರೀಡಿಂಗ್ ಮೋಡ್ ಅನ್ನು ಆನ್ ಮಾಡಿ ಸೆಟ್ಟಿಂಗ್ ಬದಲಾಯಿಸಬಹುದು.

ಮುಖ್ಯವಾಗಿ ಸರಿಯಾದ ನಿದ್ದೆಗೆ ನಾವು ಸಮಯವನ್ನು ನಿಗದಿ ಪಡಿಸೋದು ಮುಖ್ಯ. ನಾವು ನಿಗದಿ ಪಡಿಸೋ ಸಮಯದಲ್ಲಿ ಮೊಬೈಲ್ ಫೋನ್ ಅನ್ನು ಪಕ್ಕಕ್ಕೆ ಇಟ್ಟು ಉತ್ತಮ ನಿದ್ದೆಯನ್ನು ಮಾಡಬಹುದು. ನಿಮಗೆ ನೆನಪು ಮಾಡಲು ಮೊಬೈಲ್ ನಲ್ಲಿ ಅಲಾರಾಂ ಕೂಡ ಇಡಬಹುದು. ಈ ಮೂಲಕ ಸರಿಯಾದ ನಿದ್ದೆಯನ್ನು ಮಾಡಬಹುದು.

Leave A Reply

Your email address will not be published.