Weekend With Ramesh : ರಮ್ಯಾ ಇಂಗ್ಲೀಷ್, ಪ್ರಭುದೇವ್ ಕನ್ನಡ ದ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಅರವಿಂದ್!

Share the Article

Weekend with Ramesh :ಕನ್ನಡದ ಝೀ ಕನ್ನಡ (Zee kannada) ವಾಹಿನಿ(channel) ಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend with Ramesh) ಅಧ್ಬುತವಾಗಿ ಮೂಡಿ ಬರುತ್ತಿದೆ. ಕರ್ನಾಟಕದ ಪ್ರತಿಯೊಂದು ಮನೆಯವರು ವೀಕೆಂಡ್ ವಿತ್ ರಮೇಶ್ (WWR) ಶೋ ಅನ್ನು ನೋಡುತ್ತಾರೆ. ಸೀಸನ್ 5 (season 5) ಶೋ ಆರಂಭವಾಗಿದ್ದು, ಮೋಹಕಾ ತಾರೆ ರಮ್ಯಾ ಅವರಿಂದ, ಇದೀಗ ಪ್ರಭುದೇವ್, ಡಾಕ್ಟರ್ ಮಂಜುನಾಥ್ ಹಾಗೂ ಹಿರಿಯ ಕಲಾವಿದ ದತ್ತಣ್ಣ ಅವರು ಕುರ್ಚಿ ಏರಿ ತಮ್ಮ ಜೀವನವನ್ನು ಮತ್ತೊಮ್ಮೆ ಮೆಲುಕು ಹಾಕಿದ್ದಾರೆ. ಇನ್ನು ಹಲವಾರು ಸಾಧಕರು ಈ ಕುರ್ಚಿಯಲ್ಲಿ ಕುಳಿತು ತಮ್ಮ ಜೀವನದ ಜರ್ನಿಯನ್ನು ಹಂಚಿಕೊಳ್ಳಲಿದ್ದಾರೆ.

ವೀಕೆಂಡ್ ವಿತ್ ರಮೇಶ್ (WWR) ಮೊದಲ ಶೋನಲ್ಲಿ ರಮ್ಯಾ ಅವರು ಇಂಗ್ಲೀಷ್(english) ಮಾತನಾಡುವುದು ನೋಡಿ ಕನ್ನಡದ ಜನರೂ ಬೇಸರ ವ್ಯಕ್ತಪಡಿಸಿದರು. ಆದರೆ ನಂತರ ಶೋನಲ್ಲಿ ಪ್ರಭುದೇವ್ ಅವರು ಕನ್ನಡ ಮಾತನಾಡುವುದನ್ನು ನೋಡಿ ದಿಲ್ ಖುಷ್ ಆಗಿದ್ದಾರೆ. ಹಾಗಾಗೀ WWR ನಲ್ಲಿ ಕನ್ನಡ ಎಷ್ಟು ಮುಖ್ಯವಾಗುತ್ತದೆ ಎಂದು ರಮೇಶ್ ಅವರು ಮತ್ತೊಮ್ಮೆ ರಿಯಾಕ್ಟ್ ಮಾಡಿದ್ದಾರೆ.

ಈ ಇಂಗ್ಲೀಷ್ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಅರವಿಂದ್ ‘ ಇಲ್ಲಿ ರಮ್ಯಾ ಅವರ ಬಗ್ಗೆ ಯಾರು ಮಾತನಾಡುತ್ತಿಲ್ಲ, ಮಾತನಾಡುತ್ತಿರುವುದು ಕೇವಲ ಅವರ ಇಂಗ್ಲೀಷ್ (english) ಬಗ್ಗೆ, ರಮ್ಯಾ ಅವರು ಕನ್ನಡ ಶೋ ನಲ್ಲಿ ಇಂಗ್ಲೀಷ್ (english) ಬಳಕೆ ಮಾಡಿದರೆ ಜನರಿಗೆ ಹೇಗೆ ಅರ್ಥ ಆಗಬೇಕು, ಅವರು ಇಂಗ್ಲೀಷ್ (English) ಬಳಕೆ ಮಾಡಿದ್ದು ತಪ್ಪು ಎಂದು ಜನರು ಹೇಳುತ್ತಿದ್ದಾರೆ, ಇನ್ನು ಮುಂದೆ ಕಾರ್ಯಕ್ರಮದಲ್ಲಿ ಇಂಗ್ಲೀಷ್( English) ಕಡಿಮೆ ಮಾಡಿ ಕನ್ನಡ ಹೆಚ್ಚಾಗಿ ಬಳಸಿ ಎನ್ನುತ್ತಿದ್ದಾರೆ. ನನಗೆ ಮುಖ್ಯವಾಗಿರುವುದು ಕೇವಲ ಈ ವಿಚಾರವಷ್ಟೆ, ನೀವು ಯಾರ ಬಗ್ಗೆ ಮಾತನಾಡುತ್ತಿದ್ದಿರ ಅದು ಮುಖ್ಯವಲ್ಲ. ಯಾವ ವಿಚಾರ ಬಗ್ಗೆ ಮಾತನಾಡುತ್ತಿದ್ದಾರೆ ಅದು ಮುಖ್ಯ. ಈ ವಿಚಾರ ಕುರಿತು ಸ್ವತಹ ರಮ್ಯಾ ಅವರೇ ಪ್ರತಿಕ್ರಿಯೆಸಿದ್ದಾರೆ. ಮಾತನಾಡುವ ವಿಚಾರದಲ್ಲಿ ಸತ್ಯವಿದ್ದರೆ ನಾವು ಅದನ್ನು ಸ್ವಿಕರಿಸಿ ನಮ್ಮ ಶೋ ನಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ಖಾಸಗಿ ಯುಟ್ಯೂಬ್ ಚಾನೆಲ್ (YouTube channel) ನ ಸಂದರ್ಶನ (interview) ಒಂದರಲ್ಲಿ ರಮೇಶ್ ಅರವಿಂದ್ ಅವರು ತಿಳಿಸಿದ್ದಾರೆ.

ವೀಕೆಂಡ್ ವಿತ್ ರಮೇಶ್ (WWR) ಕುರಿತು ಮಾತನಾಡಿದ ರಮೇಶ ಅರವಿಂದ್ ‘ ಶೋ ಕೇವಲ ನನ್ನದಲ್ಲ, ಅಥವಾ ಝೀ ಕನ್ನಡ (Zee kannada) ವಾಹಿನಿಯವರದ್ದಲ್ಲ, ಇದು ನಮ್ಮ ಶೋ (show) ಎಂದು ಜನರು ಭಾವಿಸಿದ್ದಾರೆ. WWR ಶುರುವಾದ ವಾರ ವಾರವು ಟಿಆರ್ಪಿ (TRP) ಹೆಚ್ಚಾಗುತ್ತಲೇ ಇದೆ, ಇದನ್ನು ನೋಡಿ ನನಗೂ ತುಂಬಾ ಖುಷಿ ಆಗುತ್ತಿದೆ. ಇನ್ನು 14 ಸಾಧಕರು ಬಂದು ತಮ್ಮ ಜೀವನದ ಜರ್ನಿ ಬಗ್ಗೆ ಹಂಚಿಕೊಳ್ಳಬೇಕಾಗಿದೆ. ರಮ್ಯಾ ಮತ್ತು ಪ್ರಭುದೇವ ಅವರ ಭಾಷೆ ಬಗ್ಗೆ ನಾವು ವೈಯಕ್ತಿವಾಗಿ ಮಾತನಾಡುವುದು ಏನೂ ಇಲ್ಲ ‘ ಇದರ ಬಗ್ಗೆ ಜನರೇ ಅವರ ಅಭಿಪ್ರಾಯ ತಿಳಿಸಿದ್ದಾರೆ.

ಇನ್ನು ಶೋ (show) ಗೆ ಸಾಧಕರನ್ನು ಕರೆಯುವ ಬಗ್ಗೆ ಮಾತನಾಡಿದ ರಮೇಶ್ ‘ ಅನೇಕರು ನಮಗೆ ಸಾಮಾಜಿಕ ಜಾಲತಾಣ(social media) ದಲ್ಲಿ ಸಲಹೆ ನೀಡಿದ್ದಾರೆ ನಾವು ಅದನ್ನು ಪರಿಗಣಿಸುತ್ತಿದ್ದೆವೆ, ಸಾಹಿತ್ಯ ವಿಭಾಗದ ಬೈರಪ್ಪ ಅವರನ್ನು ಕರೆಸಿ ಅನ್ನುತ್ತಿದ್ದಾರೆ. ನಾವು ಸೀಸನ್ 1 (season 1) ರಿಂದ ಅವರನ್ನು ಕರೆಸಲು ಪ್ರಯತ್ನ ಮಾಡುತ್ತಿದ್ದೇವೆ. ಇನ್ನು ರಾಹುಲ್ ದ್ರಾವಿಡ್ ಅವರನ್ನು ಸಂಪರ್ಕ ಮಾಡಿದ್ದೇವೆ ಅವರಿಗೆ ಐಪಿಎಲ್ (IPL) ಇರುವ ಕಾರಣ ಬರಲು ಸಾಧ್ಯವಾಗುವುದಿಲ್ಲ. ಮತ್ತು ಅವರ ಕುಟುಂಬದವರು ಕೂಡ ಫ್ರೀ (free) ಇರಬೇಕು. ಅವರು ಫ್ರೀ ಇದ್ದ ನನ್ನ ಡೇಟ್ ನಾನು ಬ್ಯೂಸಿ (busy) ಆಗಿರುತ್ತದೆ. ಈ ಎಲ್ಲವುದನ್ನು ನೋಡಿಕೊಂಡು ಶೋ (show) ನಡೆಸಬೇಕು’ ಎಂದರು ರಮೇಶ್.

Leave A Reply