Weekend With Ramesh : ಈ ವಾರದ ಸಾಧಕರ ಸೀಟಿನಲ್ಲಿ ರಾರಾಜಿಸಲು ರೆಡಿಯಾದ ವ್ಯಕ್ತಿ ಯಾರು ಗೊತ್ತಾ? ಇವರೇ ನೋಡಿ!

Share the Article

Weekend with Ramesh: ರಮೇಶ್ ಅರವಿಂದ್ ಮಾತುಕತೆಯ ಮೂಲಕ ಜೀ ಕನ್ನಡದಲ್ಲಿ(Zee Kannada) ಕಾಣಿಸಿಕೊಳ್ಳುವ ವೀಕೆಂಡ್ ವಿತ್ ರಮೇಶ್ (Weekend with Ramesh)ಕಾರ್ಯಕ್ರಮ ಅತ್ಯಂತ ಜನಪ್ರಿಯ ಹಾಗೂ ಹೆಸರು ಪಡೆದಂತಹ ಕಾರ್ಯಕ್ರಮವಾಗಿದೆ. ವಾರಾಂತ್ಯದಲ್ಲಿ ಪ್ರೋಗ್ರಾಂ(program) ನೋಡಲು ಅಭಿಮಾನಿಗಳು (fans)ಕಾತುರದಿಂದ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಇದೀಗ ಈ ವಾರದ ಅತಿಥಿ ಯಾರೆಂಬುದರ ಬಗ್ಗೆ ಸುಳಿವು ಸಿಕ್ಕಿದೆ ನೋಡಿ.

ಜೀ ಕನ್ನಡದಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ (weekend with Ramesh)ಸೀಸನ್ 4 ಕಾರ್ಯಕ್ರಮ ಈಗಾಗಲೇ 3 ವಾರಗಳ ಜರ್ನಿಯನ್ನು ಪೂರ್ಣಗೊಳಿಸಿದೆ. ಸೀಸನ್ 4 ರ ಸಾಧಕರ ಕುರ್ಚಿಯಲ್ಲಿ ಮೊದಲ ಅತಿಥಿಯಾಗಿ ಎಲ್ಲರ ನೆಚ್ಚಿನ ಸ್ಯಾಂಡಲ್​ವುಡ್ ನಟಿ ಮೋಹಕ ತಾರೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಕಾಣಿಸಿಕೊಂಡ್ರು. ತನ್ನ ಜೀವನದ ಸಿಹಿ-ಕಹಿ ಘಟನೆಗಳನ್ನು ಹಂಚಿಕೊಂಡ್ರು. ಹಾಗೆಯೇ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ (Ramya alyas Divya spandana)ಮಾತಾಡಿದ ಇಂಗ್ಲಿಷ್ ವಿಷಯದಲ್ಲಿ ಸಿಕ್ಕಾಪಟ್ಟೆ ಟ್ರೂಲ್ ಗಳಿಗೂ ಒಳಗಾದರೂ. ಬಳಿಕ 2ನೇ ವಾರ ಭಾರತದ ಮೈಕಲ್ ಜಾಕ್ಸನ್ ಎಂದೇ ಕರೆಸಿಕೊಂಡು ಅಭಿಮಾನಿಗಳಿಂದ ಹೆಚ್ಚಿನ ಸಂಭಾವನೆಯನ್ನು ಪಡೆದಂತಹ ಪ್ರಭುದೇವ್(Prabhu Deva) ಸಾಧಕರ ಕುರ್ಚಿ ಏರಿದ್ರು. ನನ್ನ ಸಿನಿ ಜರ್ನಿಯ ಏಳು-ಬೀಳುಗಳ ಬಗ್ಗೆ ಮುಕ್ತವಾಗಿ ಮಾತಾಡಿದ್ರು. ಅದೇ ರೀತಿ ಅಭಿಮಾನಿಗಳಿಂದ ಹೆಚ್ಚಿನ ಮೆಚ್ಚುಗೆಯನ್ನು ಕೂಡ ಪಡೆದುಕೊಂಡರು.

ಕನ್ನಡದಲ್ಲಿ ನಡೆಯುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೂರನೇ ವಾರಕ್ಕೆ ಇಬ್ಬರು ದೊಡ್ಡ ಅತಿಥಿಗಳು ಕಾಣಿಸಿಕೊಂಡ್ರು. ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್(Dr Manjunath) ಸಾಧಕರ ಕುರ್ಚಿಯಲ್ಲಿ ಕುಳಿತು ಹೃದಯದ ಕಥೆ ಹೇಳಿ ಪ್ರೇಕ್ಷಕರ ಹೃದಯವನ್ನೇ ಗೆಲ್ಲುವ ಮೂಲಕ ತನ್ನ ಅಭಿಮಾನಿಗಳ ಮನಸ್ಸನ್ನು ಗೆದ್ದರು. ಹಾಗೆಯೇ ಭಾನುವಾರದ ಎಪಿಸೋಡ್​ನಲ್ಲಿ ಹಿರಿಯ ನಟ ದತ್ತಣ್ಣ (dattana)ಅತಿಥಿಯಾಗಿ ಆಗಮಿಸಿದ್ರು. ಬಾಲ್ಯ, ಶಿಕ್ಷಣ, ಸೇನೆಯಲ್ಲಿ ಸೇವೆ, ರಂಗಭೂಮಿ, ಸಿನಿಮಾ ಜರ್ನಿ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ವೀಕೆಂಡ್ ವಿತ್ ರಮೇಶ್(weekend with Ramesh) ಜೊತೆ ಮಾತಾಡಿದ ದತ್ತಣ್ಣ, ಬ್ಯಾಚುಲರ್ಸ್ ಬದುಕೆ ಬೆಸ್ಟ್ ಅಂತ ಹೇಳಿ ದತ್ತಣ್ಣ ಸಿಂಗಲ್ಸ್ ಹಾರ್ಟಲ್ಲಿ ಇನ್ನಷ್ಟು ಮೇಲಕ್ಕೆ ಹೋದ್ರು.

ಆದರೆ ಇದೀಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 4ನೇ ವಾರದ ಅತಿಥಿ ಯಾರು ಆಗಿರಬಹುದು ಎಂಬ ವಿಷಯವನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಕಾಯ್ತಿದ್ದಾರೆ. ಇದೀಗ ಜೀ ವಾಹಿನಿಯ ಸಾಮಾಜಿಕ ಜಾಲತಾಣದಲ್ಲಿ(social media) ಪೋಸ್ಟರ್ ಒಂದನ್ನು ಅಪ್ಲೋಡ್ (upload)ಮಾಡಿದ್ದಾರೆ. ನಾಲ್ಕನೇ ವಾರದ ಅತಿಥಿ ಯಾರು ಎಂಬುದನ್ನು ಗೆಸ್ ಮಾಡಿ, ಸ್ನೇಹಕ್ಕಾಗಿ ಜೀವ ಕೊಡೋ ವಿಶಿಷ್ಟ ವ್ಯಕ್ತಿ ಈ ವೀಕೆಂಡ್ ಅತಿಥಿ ಎಂಬುದರ ಮೂಲಕ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral) ಆಗಿದೆ. ಅದನ್ನು ನೋಡಿದ ಪ್ರೇಕ್ಷಕರಿಗೆ ಒಮ್ಮೆ ಯಾರಿರಬಹುದು ಎಂಬ ಕುತೂಹಲ ಮೂಡಿದೆ ಆದರೂ ಮುಖ ಸರಿಯಾಗಿ ಕಾಣದ ಫೋಟೋ ನೋಡಿದ ಅಭಿಮಾನಿಗಳು ಅತಿಥಿಯನ್ನು ಕೊನೆಗೂ ಗೆಸ್ ಮಾಡಿಯೇ ಬಿಟ್ಟಿದ್ದಾರೆ.

ಈ ವಾರ ಸಾಧಕರ ಕುರ್ಚಿಯಲ್ಲಿ ಕೂರುವುದು ನಟ ರಾಕ್ಷಸ ಡಾಲಿ ಧನಂಜಯ್(dolly Dhananjay) ಎಂದು ಅಭಿಮಾನಿಗಳು ಕಮೆಂಟ್(comment) ಮಾಡ್ತಿದ್ದಾರೆ. ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಂತಹ ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್ (weekend with Ramesh)ಕುರ್ಚಿಯನ್ನು ಏರಲಿದ್ದಾರೆ ಎಂಬ ವಿಷಯವನ್ನು ಕೇಳಿ ಅಭಿಮಾನಿಗಳು ಸಂತಸವನ್ನು ಪಟ್ಟಿದ್ದಾರೆ. ಹಾಗೆಯೇ ಬಡವರ ಮಕ್ಳು ಬೆಳೀಬೇಕು ಅವರು ಮೊದಲು ಮೇಲಕ್ಕೆ ಬರಬೇಕು. ದೈರ್ಯ ಮತ್ತು ಹಿರಿಯರ ಆಶೀರ್ವಾದ ಇದ್ರೆ ಬಡವರ ಮಕ್ಳು ಏನ್ ಬೇಕಾದ್ರೂ ಸಾಧಿಸುತ್ತಾರೆ ಎಂದು ಡಾಲಿ ಧನಂಜಯ್ ಬಗ್ಗೆ ಅಭಿಮಾನಿಯೊಬ್ಬರು ಕಮೆಂಟ್(comment) ಮಾಡಿದ್ದಾರೆ. ಈಗಾಗಲೇ ಅಭಿಮಾನಿಗಳು ಡಾಲಿ ಧನಂಜಯ್ ಬಗ್ಗೆ ತಿಳಿದುಕೊಳ್ಳಲು ಕಾತುರದಿಂದ ತುದಿಗಾಲಲ್ಲಿ ಕಾಯುತ್ತಿದ್ದಾರೆ.

Leave A Reply