Underarms Care : ಕಂಕುಳ ಸ್ವಚ್ಛತೆ ಕಾಪಾಡಿಕೊಳ್ಳಲು ಇಲ್ಲಿದೆ ಕೆಲವೊಂದು ಸೂಪರ್‌ ಟಿಪ್ಸ್‌!

 

 

Underarms Care: ನಮ್ಮ ದೇಹವನ್ನು ಹೇಗೆ ಆರೋಗ್ಯದಿಂದ (healthy) ಕಾಪಾಡಿಕೊಳ್ಳುತ್ತೇವೋ ಅದೇ ರೀತಿ ನಮ್ಮ ದೇಹದ ಸ್ವಚ್ಛತೆಯನ್ನು ಸಹ ಕಾಪಾಡಿಕೊಳ್ಳುದು ಅಷ್ಟೇ ಮುಖ್ಯ. ನಮ್ಮದೇಹದಲ್ಲಿನ ದೈಹಿಕ ಸ್ವಚ್ಛತೆಯ ವಿಷಯಕ್ಕೆ ಬಂದಾಗ ಕಂಕುಳ ಕಾಳಜಿ ಮಾಡುವುದು ಬಹಳ ಅವಶ್ಯಕವಾಗುತ್ತದೆ. ಇದರಿಂದ ಚರ್ಮದ (skin) ಕಿರಿಕಿರಿಯನ್ನು ತಡೆಗಟ್ಟಿ, ಸೋಂಕು ನಿವಾರಿಸಲು ಸಾಧ್ಯ. ಕೆಲವೊಮ್ಮೆ ಬೆವರಿನ ಅತಿಯಾದ ವಾಸನೆಯು(smell) ಕೆಲವರಿಗೆ ಅದು ಅಸಹನೆ ಉಂಟು ಮಾಡಬಹುದು.

ಹಾಗಾದರೆ ಕಂಕುಳ ವಾಸನೆ ಬಾರದ ರೀತಿಯಲ್ಲಿ ಶುಭ್ರವಾಗಿ ಇಟ್ಟುಕೊಳ್ಳುದು ಹೇಗೆ? ಹಾಗೆಯೇ ಕಂಕುಳ ಸ್ವಚ್ಛತೆಯನ್ನು (clean) ಕಾಪಾಡಿಕೊಳ್ಳುವುದು(Underarms Care) ಹೇಗೆ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಪ್ರತಿದಿನ ಕಂಕುಳನ್ನು ಸ್ವಚ್ಛ ಮಾಡಿಕೊಳ್ಳಿ:

ನೀವು ನಿಮ್ಮ ಕಂಕುಳನ್ನು ಸ್ವಚ್ಚವಾಗಿ ಇರಿಸಬೇಕಾದರೆ ಪ್ರತಿದಿನ ಸೋಪು ಹಾಗೂ ನೀರಿನಿಂದ ಕಂಕುಳನ್ನು ತೊಳೆಯಬೇಕು.ಇದರಿಂದ ಬರುವ ಅತಿಯಾದ ಗಬ್ಬು ವಾಸನೆಯನ್ನು (smell)ತಡೆಗಟ್ಟಬಹುದು. ಇದರಿಂದ ನಿಮ್ಮ ದೇಹದಲ್ಲಿ ಬರುವ ಅತಿಯಾದ ಬೆವರು, ಕೊಳೆ ಸ್ವಚ್ಛವಾಗುತ್ತವೆ ಹಾಗೂ ಬ್ಯಾಕ್ಟೀರಿಯಾಗಳು ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ.

ನಿರಂತರವಾಗಿ ಪರಿಶೀಲಿಸಿ:

ನಮ್ಮ ದೇಹದಲ್ಲಿ ಗುಳ್ಳೆಗಳು ಬಿದ್ದ ಹಾಗೆ ಕಂಕುಳ ಮೇಲೆ ಗುಳ್ಳೆಗಳು ಬಿದ್ದರೆ ಇದರ ಬಗ್ಗೆ ಬೇಜವಾಬ್ದಾರಿಯನ್ನು ತೋರಬೇಡಿ. ಹಾಗೆಯೇ ಕಂಕುಳ ಕೆಳಗೆ ಗಡ್ಡೆ, ಉಬ್ಬು ಅಥವಾ ಚರ್ಮ ಕೆಟ್ಟಿರುವುದು ಇಂತಹ ಯಾವುದೇ ಲಕ್ಷಣಗಳಿದ್ದರೆ ತಕ್ಷಣಕ್ಕೆ ವೈದ್ಯರ(doctor) ಸಲಹೆಯನ್ನು ಪಡೆದುಕೊಳ್ಳಿ. ಇಲ್ಲದಿದ್ದರೆ ಅಪಾಯ ಖಂಡಿತ.ಅದೇ ರೀತಿ ಆಗಾಗ ಕಂಕುಳಿನ ಕೆಳಗೆ ಪರಿಶೀಲನೆ ಮಾಡುತ್ತಿರಿ. ಕಂಕುಳನ್ನು ಯಾವಾಗಲೂ ಸ್ವಚ್ಚವಾಗಿರಿಸಿಕೊಳ್ಳಿ.

ಮಾಯಿಶ್ಚರೈಸರ್‌ ಬಳಕೆ ಮಾಡುದು ಉತ್ತಮ:

ನಿಮ್ಮ ಕಂಕುಳಿನ ಭಾಗ ತೇವಾಂಶದಿಂದ ಕೂಡಿರಲು ಮಾಯಿಶ್ಚರೈಸರ್‌(moisturizes) ಬಳಕೆ ಉತ್ತಮ. ಇದರಿಂದ ಕಂಕುಳಿನ ಭಾಗದಲ್ಲಿ ಕಾಣುವ ಅತಿಯಾದ ದುರ್ವಾಸನೆ ಮತ್ತು ಕಂಕುಳು ಒಣಗಿದಂತಾಗುದು, ತುರಿಕೆ ಈ ಸಮಸ್ಯೆಗಳಿಂದ ದೂರ ಇರಬಹುದು.

ಎಕ್ಸ್‌ಫೋಲಿಯೇಟ್‌:

ನಿಮ್ಮನ್ನು ನೀವು ಸ್ವಚ್ಚವಾಗಿ ಇಟ್ಟುಕೊಳ್ಳಬೇಕಾದರೆ ವಾರಕ್ಕೊಮ್ಮೆ ಸಲವಾದರೂ ಕಂಕುಳ ಕೆಳಗೆ ನಿಧಾನವಾಗಿ ಸ್ಕ್ರಬ್‌ (scrub) ಮಾಡಿಕೊಳ್ಳುವುದು ಅಥವಾ ಎಕ್ಸ್‌ಫೋಲಿಯೇಟ್‌ (exfoliate) ಮಾಡಿಕೊಳ್ಳುದು ಉತ್ತಮ. ಇದರಿಂದ ನಿಮ್ಮ ದೇಹದ ಮೇಲೆ ಬರುವ ನಿರ್ಜೀವ ಚರ್ಮಗಳನ್ನು ತೊಡೆದು ಹಾಕಬಹುದು. ಚರ್ಮದ ರಂಧ್ರಗಳನ್ನು ಮುಚ್ಚಲು ಇದು ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡುತ್ತದೆ.

ಯಾವುದೇ ಕಾರಣಕ್ಕೂ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ:

ಬಿಗಿಯಾದ ಬಟ್ಟೆಗಳನ್ನು ಧರಿಸಿದರೆ ಅತಿಯಾದ ಘರ್ಷಣೆ ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು, ಇದರಿಂದ ಕಂಕುಳಿನ ಭಾಗದಲ್ಲಿ ಚಿಕ್ಕ – ಚಿಕ್ಕ ಕಜ್ಜಿ ಅಥವಾ ಗುಳ್ಳೆ ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ಇದರ ಬಗ್ಗೆ ಕಾಳಜಿವಹಿಸುದು ಅತೀ ಮುಖ್ಯ.

ಶೇವಿಂಗ್‌ ಮಾಡುವ ಮುನ್ನ ಎಚ್ಚರವಿರಲಿ:

ನೀವು ನಿಮ್ಮ ದೇಹದಲ್ಲಿ ಕಂಕುಳಿನ ಭಾಗವನ್ನು ಶೇವಿಂಗ್‌ (shaving) ಮಾಡುವ ಅಭ್ಯಾಸ ಇರಿಸಿಕೊಂಡಿದ್ದರೆ, ಹರಿತವಾದ ರೇಜರ್‌ ಬಳಸಿಕೊಂಡು ಶೇವಿಂಗ್ ಮಾಡಿ. ಇದರಿಂದ ಕೂದಲುಗಳ ಕಿರಿಕಿರಿ ಹಾಗೂ ದುರ್ವಾಸನೆ ಬೀರುತ್ತಿರುವುದರಿಂದ ತಪ್ಪಿಸಿಕೊಳ್ಳಬಹುದು. ಹಾಗೆಯೇ ಕೂದಲುಗಳು ಎಲ್ಲಿ ಹೆಚ್ಚು ಬೆಳವಣಿಗೆ ಆಗುತ್ತದೋ ಆ ದಿಕ್ಕಿನಲ್ಲಿ ಶೇವಿಂಗ್‌ ಮಾಡಿ. ಕಂಕುಳಿನ ಕೂದಲಿನಿಂದ ಬರುವ ದುರ್ವಾಸನೆಯಿಂದ (smell) ನೀವು ತಪ್ಪಿಸಿಕೊಳ್ಳಬಹುದು.

ಇದನ್ನು ಓದಿ : Dali Dhananjay:ಸಂಜೆ 5 ಆದ್ಮೇಲೆ ಮದುವೆ ಆಗಿದ್ರೆ ಒಳ್ಳೆಯದಿತ್ತು ಅನ್ಸುತ್ತೆ- ನಟ ಡಾಲಿ ಮಾತು ಸಖತ್ ವೈರಲ್!

 

Leave A Reply

Your email address will not be published.