Cancer : ಬಿಯರ್ ಮತ್ತು ಮಾಂಸ ಪ್ರಿಯರೇ ಎಚ್ಚರಿಕೆ! ಕ್ಯಾನ್ಸರ್ ನಿಮ್ಮನ್ನು ಅಂಟಿಕೊಳ್ಳಲಿದೆ!

Cancer : ನಾವು ಎಷ್ಟೇ ಕಾಳಜಿ ವಹಿಸಿ ಕಲಬೆರಕೆ ಮುಕ್ತ ಆಹಾರ ಸೇವಿಸಿದರು ಸಹ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆ ಕಾಡುತ್ತವೆ. ಹಾಗಿರುವಾಗ, ಪ್ರಸ್ತುತ ಕ್ಯಾನ್ಸರ್‌ (Cancer) ಕಾರಣವಾಗುವ ನೈಟ್ರೊಸಮೈನ್ ಎಂಬ ರಾಸಾಯನಿಕ ಸಂಯುಕ್ತಗಳು ದಿನನಿತ್ಯದ ಆಹಾರಗಳಲ್ಲಿ ಪತ್ತೆಯಾಗಿವೆ ಮತ್ತು ಗ್ರಾಹಕರಿಗೆ ಆರೋಗ್ಯದ ಅಪಾಯವನ್ನುಂಟುಮಾಡಬಹುದು ಎಂದು ಯುರೋಪಿಯನ್ ಆಹಾರ ಭದ್ರತೆ ಪ್ರಾಧಿಕಾರ ಮಂಗಳವಾರ ಗಂಭೀರ ಎಚ್ಚರಿಕೆ ನೀಡಿದೆ.

ಮಾಹಿತಿ ಪ್ರಕಾರ 10 ನೈಟ್ರೊಸಮೈನ್‌ಗಳನ್ನು ಉದ್ದೇಶಪೂರ್ವಕವಾಗಿ ಆಹಾರಕ್ಕೆ ಸೇರಿಸಲಾಗಿಲ್ಲ. ಆದರೆ, ಆಹಾರದ ತಯಾರಿಕೆ ಮತ್ತು ಸಂಸ್ಕರಣೆಯ ಸಮಯದಲ್ಲಿ ರೂಪುಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಇವುಗಳು ಕಾರ್ಸಿನೋಜೆನಿಕ್ ಮತ್ತು ಜಿನೋಟಾಕ್ಸಿಕ್ ಆಗಿದೆ. ಅಂದರೆ ಇವುಗಳಿಂದ ಮನುಷ್ಯನ ಡಿಎನ್ಎಗೆ ಹಾನಿಯಾಗಬಹುದು ಎಂದು ಯುರೋಪಿಯನ್ ಯೂನಿಯನ್ ಸಂಸ್ಥೆ ನಡೆಸಿದ ಹೊಸ ಅಧ್ಯಯನ ತಿಳಿಸಿದೆ.

ಆಹಾರ ಸರಪಳಿಯಲ್ಲಿನ ಮಾಲಿನ್ಯಕಾರಕಗಳ ಮೇಲೆ ಇಎಫ್‌ಎಸ್ಎ ಸಮಿತಿಯ ಅಧ್ಯಕ್ಷರಾದ ಡೈಟರ್ ಶೆಂಕ್ ಪ್ರಕಾರ, ನಮ್ಮ ಮೌಲ್ಯಮಾಪನದ ಪ್ರಕಾರ ಯುರೋಪಿಯನ್ ಒಕ್ಕೂಟದ ಜನಸಂಖ್ಯೆಯಾದ್ಯಂತ ಎಲ್ಲಾ ವಯೋಮಾನದವರಿಗೆ, ಆಹಾರದಲ್ಲಿ ನೈಟ್ರೊಸಮೈನ್‌ಗಳಿಗೆ ಒಡ್ಡಿಕೊಳ್ಳುವ ಮಟ್ಟವು ಆರೋಗ್ಯದ ಕಾಳಜಿಯನ್ನು ಹೆಚ್ಚಿಸುತ್ತದೆ ಎಂದು ತೀರ್ಮಾನಿಸುತ್ತದೆ ಎಂದು ಹೇಳಿದ್ದಾರೆ.

ಇನ್ನು ಆಹಾರದಲ್ಲಿ ಪತ್ತೆಯಾದ ಎಲ್ಲಾ ನೈಟ್ರೋಸಮೈನ್‌ಗಳು ಸಂಯುಕ್ತದ ಅತ್ಯಂತ ಹಾನಿಕಾರಕ ರೂಪವಾಗಿ ಕ್ಯಾನ್ಸರ್ ಅನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ಶ್ರಂಕ್ ಹೇಳಿದ್ದಾರೆ.

ಅದಲ್ಲದೆ “ಪ್ರಾಣಿಗಳ ಅಧ್ಯಯನಗಳ ಆಧಾರದ ಮೇಲೆ, ಇಲಿಗಳ ಯಕೃತ್ತಿನ ಗೆಡ್ಡೆಗಳ ಸಂಭವವನ್ನು ನಾವು ಅತ್ಯಂತಪರಿಣಾಮವೆಂದು ಪರಿಗಣಿಸಿದ್ದೇವೆ’ ಎಂದು ಅವರು ಹೇಳಿದರು.

ಮುಖ್ಯವಾಗಿ ಸಂಸ್ಕರಿಸಿದ ಮಾಂಸ, ಸಂಸ್ಕರಿಸಿದ ಮೀನು, ಕೋಕೋ, ಬಿಯರ್ ಮತ್ತು ಇತರ ಆಲ್ಕೋಹಾಲ್ ಪಾನೀಯಗಳಲ್ಲಿ ನೈಟ್ರೋಸಮೈನ್‌ಗಳು ಪತ್ತೆಯಾಗಿವೆ ಎಂದು ಇಎಫ್‌ಎಸ್‌ಎ (EFSA) ಹೇಳಿದೆ.

ಅದಲ್ಲದೆ ಮಾಂಸದಿಂದಲೇ ಅತ್ಯಂತ ಹೆಚ್ಚು ಪ್ರಮಾಣದ ನೈಟ್ರೊಸಮೈನ್ ಮಾನವನ ದೇಹಕ್ಕೆ ಸೇರುತ್ತದೆ. ನೈಟ್ರೋಸೈಮನ್‌ನಲ್ಲಿ ಅತ್ಯಂತ ಪ್ರಮುಖ ಆಹಾರ ಗುಂಪು ಇದಾಗಿದೆ ಎಂದು ತಿಳಿಸಲಾಗಿದೆ.

ಸದ್ಯ ಇಎಫ್‌ಎಸ್‌ಎ ತನ್ನ ಅಭಿಪ್ರಾಯವನ್ನು EU ನ ಕಾರ್ಯನಿರ್ವಾಹಕ ಅಂಗವಾಗಿರುವ ಯುರೋಪಿಯನ್ ಕಮಿಷನ್ ಹಂಚಿಕೊಳ್ಳಲಾಗುವುದು ಎಂದು ಹೇಳಿದ್ದು, ಇದು 27-ಸದಸ್ಯ ಬ್ಲಾಕ್‌ನಲ್ಲಿರುವ ರಾಷ್ಟ್ರಗಳೊಂದಿಗೆ ಸಂಭಾವ್ಯ ಅಪಾಯ ನಿರ್ವಹಣೆ ಕ್ರಮಗಳನ್ನು ಚರ್ಚಿಸುತ್ತದೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ಕೆಲವು ಆಹಾರ ಗುಂಪುಗಳಲ್ಲಿ ನೈಟ್ರೋಸಮೈನ್‌ಗಳ ಉಪಸ್ಥಿತಿಯ ಬಗ್ಗೆ ತುಂಬಾ ಅನುಮಾನಗಳಿವೆ ಎಂದು ಹೇಳಿದ್ದು, ಅಧ್ಯಯನವು ನೈಟ್ರೊಸಮೈನ್‌ಗಳ ಸೇವನೆಯನ್ನು ಕಡಿಮೆ ಮಾಡಲು ವಿವಿಧ ರೀತಿಯ ಆಹಾರಗಳೊಂದಿಗೆ ಸಮತೋಲಿತ ಆಹಾರವನ್ನು ತಿನ್ನಬೇಕು ಎಂದು ಸಲಹೆ ನೀಡಿದೆ.

 

ಇದನ್ನು ಓದಿ : Shruti Haasan: ಹೀರೋಗಳಿಗೆ ಜಾಕೆಟ್‌, ನಮಗೆ ಬ್ಲೌಸ್ ಮಾತ್ರ ! ಶ್ರುತಿ ಹಾಸನ್ ವ್ಯಥೆಯ ಮಾತು 

Leave A Reply

Your email address will not be published.