Biometric Authentication System in Aadhar : ಆಧಾರ್‌ಕಾರ್ಡ್‌ನಲ್ಲಿ ಬರಲಿದೆ ಬದಲಾವಣೆ!
Biometric Authentication System in Aadhar : ಇತ್ತೀಚೆಗೆ ಆಧಾರ್ ಕಾರ್ಡ್ (aadhar card) ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿದೆ. ಪ್ರತಿಯೊಂದು ವಿಷಯಕ್ಕೂ ಆಧಾರ್ ಅಗತ್ಯವಿದೆ. ಒಂದು ಲೆಕ್ಕದಲ್ಲಿ ನಿಮ್ಮನ್ನು ನೀವು ಗುರುತಿಸಿಕೊಳ್ಳಬೇಕು ಅಂದರೆ ಆಧಾರ್ ಇರಲೇಬೇಕು. ಈ ನಡುವೆ ಪಾನ್ ಕಾರ್ಡ್ (pan card) ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಇದೀಗ ಆಧಾರ್ ಬಳಕೆದಾರರಿಗೆ ಗುಡ್ ನ್ಯೂಸ್ (good news) ಒಂದು ಬಂದಿದೆ.
ಹೌದು, ಆಧಾರ್ ಕಾರ್ಡ್ (adhar card) ನಲ್ಲಿ ಟಚ್ ಲೆಸ್ (touch less) ಬಯೋಮೆಟ್ರಿಕ್ (biomatric) ಕ್ಯಾಪ್ಚರ್ ಸಿಸ್ಟಮ್ (Biometric Authentication System in Aadhar ) ಅನ್ನು ಅಳವಡಿಸಲು ಐಐಟಿ (IIT) ಬೊಂಬೆಯೊಂದಿಗೆ ಯುಐಡಿಎಐ (ಉ) ಪಾಲುದಾರಿಕೆಯನ್ನು ಹೊಂದಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಈ ವಿಶೇಷ ನಮ್ಮ ದೇಶಕ್ಕೆ ಬರಲಿದೆ. ಟಚ್ ಲೆಸ್ ಬಯೋಮೆಟ್ರಿಕ್ ಕ್ಯಾಪ್ಚರ್ ಸಿಸ್ಟಮ್ (Touch less biomatric capturesystem) ಅಂದ್ರೆ ಏನೂ? ಇದರಿಂದ ಆಧಾರ್ ಬಳಕೆದಾರರಿಗೆ ಏನು ಪ್ರಯೋಜನ ? ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ಇಂಡಿಯನ್ ಇನ್ ಸ್ಟಿಟ್ಯೂಟ್ (indian institutions) ಆಫ್ ಟೆಕ್ನಾಲಜಿ ಬಾಂಬೆ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಟಚ್‌ಲೆಸ್ ಬಯೋಮೆಟ್ರಿಕ್ ಕ್ಯಾಪ್ಚರ್ (Touch less capture) ವ್ಯವಸ್ಥೆಯನ್ನು ಅಭಿವೃದ್ದಿ ಪಡಿಸಲು ಒಪ್ಪಂದಕ್ಕೆ ಸಹಿ ಹಾಕಿವೆ. ಇದರ ಮುಖ್ಯ ಪ್ರಯೋಜನವೆಂದರೆ ನೀವು ಎಲ್ಲಿ ಬೇಕಾದರೂ ಯಾವ ಸಮಯದಲ್ಲಿಯೂ ಸುಲಭವಾಗಿ ಆಧಾರ್ ಅನ್ನು ಬಳಸಬಹುದಾಗಿದೆ.
ಜಂಟಿ ಉಪಕ್ರಮವಾದ ಆಂತರಿಕ ಭದ್ರತೆಗಾಗಿ ಐಐಟಿ (IIT) ಬಾಂಬೆ ಮತ್ತು ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಸಿಸ್ಟಮ್ ಅನ್ನು ಜಾರಿಗೆ ತಂದಿದೆ.ಇನ್ನೂ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಭಾರತದ ಆಂತರಿಕ ಭದ್ರತಾ ಪಡೆಗಳು ಎಲೆಕ್ಟ್ರಾನಿಕ್ (electrics) ವ್ಯವಸ್ಥೆ ಯ ವಿನ್ಯಾಸ ಮತ್ತು ಉತ್ಪಾದನೆ ಯ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದೆ.
ಐಐಟಿ ಬಾಂಬೆ (IIT )ಹಾಗೂ ಯುಐಡಿಎಐಯು (UIDAI) ಟಚ್‌ಲೆಸ್ ಬಯೋಮೆಟ್ರಿಕ್ ಕ್ಯಾಪ್ಚರ್ ಸಿಸ್ಟಮ್‌ನಲ್ಲಿ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದೆ. ಐಐಟಿ ಬಾಂಬೆ ಮತ್ತು ಯುಐಡಿಎಐ (UIDAI) ಯು ಮೊಬೈಲ್ ಕ್ಯಾಪ್ಚರ್ ಸಿಸ್ಟಮ್ ನೊಂದಿಗೆ ಸೇರಿ ಲೈವ್ ನೆಸ್ ಮಾದರಿಯನ್ನು ರಚಿಸಲು ಮುಂದಾಗಿದೆ.
ನೀವು ಈ ವ್ಯವಸ್ಥೆಯಿಂದ ಮನೆಯಲ್ಲಿಯೇ ಫಿಂಗರ್ಪ್ರಿಂಟ್ (Fingerprint) ದೃಡೀಕರಣಕ್ಕೆ ಅನುಮತಿ ನೀಡಿದೆ. ಅಂದರೆ, ನಿಮ್ಮ ನಿಮ್ಮ ಮುಖದ ದೃಢೀಕರಣದಂತೆಯೇ ಮನೆಯಲ್ಲಿಯೇ ಫಿಂಗರ್ಪ್ರಿಂಟ್ (Fingerprint) ಅನ್ನು ಕೂಡ ದೃಢೀಕರನಕ್ಕೆ ಅನುಮತಿಸಲಾಗಿದೆ. ಈ ಹೊಚ್ಚ ಹೊಸ ವ್ಯವಸ್ಥೆಯೇ ಒಂದೇ ಸಮಯದಲ್ಲಿ ಅನೇಕ ಫಿಂಗರ್ಪ್ರಿಂಟ್ (Fingerprint) ಗಳನ್ನು ಸೆರೆ ಹಿಡಿಯುತ್ತದೆ.
ಈ ಹೊಸ ವ್ಯವಸ್ಥೆಯನ್ನು ಆಧಾರ್ ಭದ್ರತೆಯನ್ನು ಹೆಚ್ಚಿಸಲು ಪರಿಚಯಿಸಲಾಗಿದೆ. ಮತ್ತು AI ಆಧಾರಿತ ಕಾರ್ಯವಿಧಾನವು ಆಧಾರ್ (adhar) ಆಧಾರಿತ ಫಿಂಗರ್ಪ್ರಿಂಟ್ (Fingerprint) ದೃಢೀಕರಣದ ಸಮಯದಲ್ಲಿಯೇ ಸಾಧ್ಯವಾಗುವಷ್ಟು ವಂಚನೆಗಳನ್ನು ಪತ್ತೆ ಹಚ್ಚುತ್ತದೆ.
ಇದರ ಪ್ರಕಾರ ಪ್ರತಿದಿನ ಮಿಲಿಯನ್ ಗಟ್ಟಲೆ ಜನರ ಹೆಸರು, ಜನ್ಮ ದಿನಾಂಕ, ವಿಳಾಸ, ಲಿಂಗ, ಮೊಬೈಲ್ ಸಂಖ್ಯೆ, ಇ – ಮೇಲ್ ಐಡಿ, ಐರಿಸ್, ಫಿಂಗರ್ ಪ್ರಿಂಟ್, ಫೋಟೊ ಸೇರಿದಂತೆ ಇತರ ದಾಖಲೆಗನ್ನು ನವೀಕರಣಕ್ಕಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ. ನವೀಕರಣ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ಡಿಸೆಂಬರ್ 2022 ರಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ 88.29 ಶತಕೋಟಿಗಿಂತ ಮೇಲೆರಿದೆ.
ಸದ್ಯ ಈ ಹೊಸ ಯೋಜನೆ ಜಾರಿಗೆ ಬಂದರೆ ಜನರಿಗೆ ಹಲವರು ಉಪಯೋಗಗಳು ಅಗಲಿವೆ.
ಇದನ್ನೂ ಓದಿ: Best Earphones : ಇಯರ್‌ಫೋನ್ ಖರೀದಿಸಲು ಇಚ್ಛಿಸುವವರಿಗೆ ಇಲ್ಲಿವೆ ಅತ್ಯುತ್ತಮ ಬೆಸ್ಟ್ ಆಯ್ಕೆಯ ಇಯರ್‌ಫೋನ್!
Thanks for sharing. I read many of your blog posts, cool, your blog is very good.