PPF Interest Rates : ಪಿಪಿಎಫ್ ಬಡ್ಡಿದರದ ಕಂಪ್ಲೀಟ್ ವಿವರ ಇಲ್ಲಿದೆ!

PPF interest rate: ಯಾವುದೇ ರೀತಿಯಿಂದ ನಮಗೆ ಹಣ ಗಿಟ್ಟಿಸಿದರು ಆ ಹಣ ನಮ್ಮ ಕೈಯಲ್ಲಿ ಸುರಕ್ಷಿತವಾಗಿ ಉಳಿಯುವುದು ಬಹಳ ಕಷ್ಟವೇ. ಯಾವುದಾದರೂ ಒಂದು ರೀತಿಯಿಂದ ಹಣ ಖರ್ಚಾಗಿಯೇ ಹೋಗುತ್ತದೆ. ಹಾಗಾಗಿ ಹಣದ ಸುರಕ್ಷತೆಗಾಗಿ ಜನರು ಬೇರೆ – ಬೇರೆ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಮುಂದಾಗುತ್ತಾರೆ. ಯಾವ ರೀತಿ ಪೋಸ್ಟ್ ಆಫೀಸ್ ನಲ್ಲಿ ಜನರು ಹಣವನ್ನು ಹೂಡಿಕೆ ಮಾಡುತ್ತಾರೋ ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund)-PPF ಯಲ್ಲಿ ಹಣವನ್ನು ಹೂಡಿಕೆ ಮಾಡಲು ಜನರು ಮುಂದಾಗುತ್ತಾರೆ. ಇದೀಗ PPF ಯೋಜನೆಯು ಅತ್ಯಂತ ಜನಪ್ರಿಯವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ (Investment) ಮಾಡಿದರೆ ನಮ್ಮ ಹಣ ಸುರಕ್ಷಿತವಾಗಿರುತ್ತದೆ. ಜೊತೆಗೆ ಕೇಂದ್ರ ಸರ್ಕಾರವು (Central Government) ಅದರ ಜೊತೆಗೆ ಉತ್ತಮ ಬಡ್ಡಿದರವನ್ನು  ( PPF Interest Rates) ನೀಡುತ್ತಿದೆ.

 

ಇದೇ ಕಾರಣಕ್ಕಾಗಿ ಅನೇಕ ಜನರು ತನ್ನ ಕೈಯಲ್ಲಿ ಹಣ ಇದ್ದರೂ, ಪಿಪಿಎಫ್ (PPF)ನಲ್ಲಿ ಹಣವನ್ನು ಹೂಡಿಕೆ ಮಾಡಲು ಆಸಕ್ತಿ ತೋರುತ್ತಾರೆ. ಕೇಂದ್ರ ಸರ್ಕಾರವು (Central Government) ಅದರ ಜೊತೆಗೆ ಪಿಪಿಎಫ್ ಉತ್ತಮ ಬಡ್ಡಿದರವನ್ನು (PPF Interest Rates) ನಿಮಗೆ ನೀಡುತ್ತಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಕಾರಣದಿಂದ ಕೇಂದ್ರ ಸರ್ಕಾರ ಮಹತ್ವ ರೀತಿಯ ಸೌಲಭ್ಯವನ್ನು ಘೋಷಣೆ ಮಾಡಿದೆ.

2023-24 ರ ಹೊಸ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಇದೀಗಾಗಲೇ ಪ್ರಕಟಿಸಿದೆ. ಆದರೆ, ಪಿಪಿಎಫ್ ಬಡ್ಡಿ ದರದಲ್ಲಿ (PPF Interest Rate) ಯಾವುದೇ ರೀತಿಯ ಹೊಸ ಬದಲಾವಣೆ ಮಾಡಲಾಗಿಲ್ಲ. ಕೇಂದ್ರ ಸರ್ಕಾರವು ಸತತ 12ನೇ ತ್ರೈಮಾಸಿಕದಲ್ಲಿ ಪಿಪಿಎಫ್ ಬಡ್ಡಿದರಗಳನ್ನು ಯಾವುದೇ ರೀತಿ ಬದಲಾಯಿಸದೆ ಇದ್ದ ರೀತಿಯ ಹಾಗೆ ಈ ವರ್ಷನೂ ಮುಂದುವರಿಸುತ್ತಾ ಹೋಗಿದೆ. ಹಿಂದೆ ಇದ್ದ ಹಾಗೇನೇ ಶೇಕಡಾ 7.1 ರ ಬಡ್ಡಿದರವನ್ನೇ ಈ ಬಾರಿಯೂ ಹೂಡಿಕೆ ಮಾಡುವವರಿಗೆ ನೀಡಲಾಗುತ್ತದೆ.

ಪಿಪಿಎಫ್ (PPF) ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಲು ಇಚ್ಛಿಸಿದರೆ ವರ್ಷಕ್ಕೆ ಕನಿಷ್ಠ 500 ರೂಪಾಯಿಗಳಿಂದ ಹೂಡಿಕೆಯನ್ನು ಶುರುಮಾಡಬಹುದು. ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಇದಕ್ಕೆ ಸರಿಯಾದ ರೀತಿಯಲ್ಲಿ ಬಡ್ಡಿ ದರದ ಜೊತೆಗೆ ನಿಮ್ಮ ಹಣವನ್ನು ನೀವು ಗಳಿಸಿಕೊಳ್ಳಬಹುದು. ಹಾಗೆಯೇ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರ ಜೊತೆಗೆ ಇನ್ನು ಕೆಲವು ಪ್ರಯೋಜನಗಳನ್ನು ಸಹ ಪಡೆದುಕೊಳ್ಳಬಹುದು. ಅದೇನಪ್ಪ ಅಂದ್ರೆ ಜನರು ತೆರಿಗೆ ಪ್ರಯೋಜನಗಳನ್ನು ಸಹ ಪಿಪಿಎಫ್ ನಿಂದ ಪಡೆದುಕೊಳ್ಳಬಹುದು. ಪ್ರತಿ ತಿಂಗಳು ಪಿಪಿಎಫ್ ನಲ್ಲಿ ಹಣವನ್ನು ಠೇವಣಿ ಮಾಡಬಹುದು.

ಪಿಪಿಎಫ್ ನಲ್ಲಿ ನಿಮಗೆ ಇಷ್ಟ ಬಂದ ರೀತಿಯಲ್ಲಿ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ 15 ವರ್ಷಗಳ ನಂತರ ಪಿಪಿಎಫ್ ಸ್ಕೀಮ್ ಮೆಚ್ಯೂರಿಟಿ (PPF scheme maturity) ಪೂರ್ಣಗೊಂಡರೆ ಆಗ ಮಾತ್ರ ಯೋಜನೆಯ ಒಟ್ಟು ಮೊತ್ತ ನಿಮಗೆ ಸಿಗುತ್ತದೆ. 15 ವರ್ಷಗಳು ಪೂರ್ಣಗೊಂಡ ನಂತರ ಯೋಜನೆಯನ್ನು ಐದು ವರ್ಷಗಳ ಬ್ಲಾಕ್ ಸಮಯದ (block time) ಮೂಲಕ ವಿಸ್ತರಿಸಬಹುದು.

ಹಾಗೆಯೇ ಜನರು ಕಷ್ಟದ ಪರಿಸ್ಥಿತಿಯಲ್ಲಿ ಇದ್ದರೆ ಈ ಯೋಜನೆಯ ಮೂಲಕ ಸಾಲವನ್ನೂ ಪಡೆಯಬಹುದು. ಹೂಡಿಕೆ ಆರಂಭಿಸಿದ ಮೂರನೇ ಹಣಕಾಸು ವರ್ಷದ ನಂತರ ಸಾಲ ಸೌಲಭ್ಯ ಲಭ್ಯವಾಗಲಿದೆ. ಸಾಲದ ಆಯ್ಕೆಯು ಆರನೇ ಹಣಕಾಸು ವರ್ಷದ (financial year) ಅಂತ್ಯದವರೆಗೆ ಮಾತ್ರ ಲಭ್ಯವಿರುತ್ತದೆ. ನೀವು ಹೂಡಿಕೆ ಮಾಡಿದ ಮೊತ್ತದ ಮೇಲೆ ಶೇ. 25 ರಷ್ಟು ವರೆಗೆ ನೀವು ಸಾಲ ಪಡೆಯಬಹುದು.

ಈ ಸಾಲದ ಮೇಲಿನ ಬಡ್ಡಿದರವು ಪಿಪಿಎಫ್‌ನಲ್ಲಿ ಸರ್ಕಾರ (government) ನಿಗದಿಪಡಿಸಿದ ದರಕ್ಕಿಂತ ಒಂದು ಶೇಕಡದಷ್ಟು ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ನೀವು ಪಿಪಿಎಪ್ ನಲ್ಲಿ ಹಣವನ್ನು ಹೂಡಿಕೆ ಮಾಡಿದಾಗ ಪಿಪಿಎಫ್ ನ ಬಡ್ಡಿ ದರವು ವಾರ್ಷಿಕವಾಗಿ ಶೇ. 7.1 ರಷ್ಟು ಇದೆ. ಆದರೆ ನೀವು ತೆಗೆದುಕೊಳ್ಳುವ ಸಾಲದ ಮೇಲಿನ ಬಡ್ಡಿ ದರವು ವಾರ್ಷಿಕ 8.1 ರಷ್ಟು ಆಗಿರುತ್ತದೆ. ಇದು ನಿಮ್ಮ ಗಮನದಲ್ಲಿರಬೇಕು.

ಇಪಿಎಫ್ ನ ಬಡ್ಡಿ ದರವನ್ನು ಹೆಚ್ಚಿಸಿದ ಸರ್ಕಾರ.

2023-24 ರ ಹೊಸ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಇದೀಗಾಗಲೇ ಪ್ರಕಟಿಸಿದೆ.ಅದರ ಜೊತೆಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್‌ಒ ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲೆ ಬಡ್ಡಿಯನ್ನು ಇತ್ತೀಚೆಗಷ್ಟೇ ಶೇ.8.15ಕ್ಕೆ ಹೆಚ್ಚಿಸಲಾಗಿದೆ. 2022- 23 ನೇ ಸಾಲಿಗೆ ಈ ದರಗಳು ಅನ್ವಯಿಸಲಿದ್ದು, ದೇಶದಲ್ಲಿ ಸಂಬಳ ಪಡೆಯುತ್ತಿರುವ ಸುಮಾರು 7 ಕೋಟಿ ಉದ್ಯೋಗಿಗಳಿಗೆ ಈ ಹೊಸ ಬಡ್ಡಿದರ ಅವರಿಗೂ ಅನ್ವಯಿಸಲಿದೆ.

ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952 ರ ಅಡಿಯಲ್ಲಿ ಭವಿಷ್ಯ ನಿಧಿ ಉಳಿತಾಯವು ಬಹಳ ಕಡ್ಡಾಯವಾಗಿದೆ. 2022ರ ಮಾರ್ಚ್ ನಲ್ಲಿ ಇಪಿಎಫ್‌ಒ (EPFO) ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನು ಶೇ. 8.10 ಕ್ಕೆ ಇಳಿಕೆ ಮಾಡಲಾಗಿತ್ತು. ಮೂರು ದಶಕಗಳಲ್ಲಿ ಅತ್ಯಂತ ಕಡಿಮೆಯಾದ ಬಡ್ಡಿದರ ಎನ್ನಬಹುದು. ಲಕ್ಷಾಂತರ ಉದ್ಯೋಗ ದಾತರಿಗೆ ಇದು ಬಹಳ ನಿರಾಸೆಯನ್ನು ತಂದಿತ್ತು. ಆದರೆ ಈ ವರ್ಷದ ಇಪಿಎಫ್ ಬಡ್ಡಿ ದರಗಳನ್ನು(interest rate) ಶೇಕಡ 8.15ಕ್ಕೆ ಹೆಚ್ಚಿಸಲಾಗಿದೆ. ಭವಿಷ್ಯ ನಿಧಿಯು ಸಾಮಾಜಿಕ ಭದ್ರತೆ ಮತ್ತು ಖಚಿತವಾದ ನಿವೃತ್ತಿ ಆದಾಯದ ನಿರ್ಣಾಯಕ ಮೂಲವಾಗಿದೆ.

1 Comment
  1. Dang k'y Binance says

    Can you be more specific about the content of your article? After reading it, I still have some doubts. Hope you can help me.

Leave A Reply

Your email address will not be published.