Alcohol: ಮದ್ಯಪಾನ ಮಾಡುವಾಗ ನೆಂಚಿಕೊಳ್ಳಲು ಸೈಡ್ಸ್ ಯೂಸ್ ಮಾಡ್ತೀರಾ? ಹಾಗಿದ್ರೆ ಅಪ್ಪಿತಪ್ಪಿನೂ ಈ ಪದಾರ್ಥಗಳನ್ನು ನೆಂಚಿಕೊಳ್ಳಬೇಡಿ!

Share the Article

While drinking alcohol : ಮನಸ್ಸಿನ ಒತ್ತಡಗಳನ್ನು ಕಡಿಮೆ ಮಾಡುವಲ್ಲಿ ಸುರಪಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ಅದು ಮನುಷ್ಯ ಜೀವನದ ಒಂದು ಭಾಗವೇ ಆಗಿ ಬಿಟ್ಟಿದೆ. ಕೆಲವರು ದಿನನಿತ್ಯ ಮದ್ಯಪಾನ (While drinking alcohol) ಮಾಡಿದರೆ, ಇನ್ನು ಕೆಲವರು ಅಪರೂಪಕ್ಕೆ ಮಾಡುವುದುಂಟು. ಮಧ್ಯ ಸೇವಿಸುವಾಗ ಹಲವರು ಬೇರೆ ಬೇರೆ ಖಾದ್ಯಗಳನ್ನೋ, ಸ್ನ್ಯಾಕ್ಸ್ ಗಳನ್ನು ನೆಂಚಿಕೊಳ್ಳುತ್ತಾರೆ. ಹೆಚ್ಚಾಗಿ ಮಾಂಸಹಾರಗಳನ್ನೇ ಸೇವಿಸುತ್ತಾರೆ. ಆದರೆ ಕುಡಿಯುವಾಗ ಅಪ್ಪಿತಪ್ಪಿನೂ ಈ ಪದಾರ್ಥಗಳನ್ನು ನೆಂಚಿಕೊಳ್ಳಬೇಡಿ!

ಏಕೆಂದರೆ ಕುಡಿಯುವಾಗ ತಿನ್ನುವ ಕೆಲವು ಆಹಾರಗಳು ನಿಮ್ಮ ದೇಹಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತವೆ. ಆದ್ದರಿಂದ ಕುಡಿಯುವಾಗ ಸರಿಯಾದ ಆಹಾರವನ್ನು ಆಯ್ಕೆ ಮಾಡಿಕೊಂಡು ಸೇವಿಸುವುದು ಬಹಳ ಮುಖ್ಯ. ಅಂದಹಾಗೆ ಮಧ್ಯ ಸೇವನೆ ವೇಳೆ ಯಾವ ಆಹಾರ ಸೇವಿಸಿದರೆ ಉತ್ತಮ, ಯಾವುದು ಉತ್ತಮ ಅಲ್ಲ ಎಂಬುದರ ಬಗ್ಗೆ ಡಾ. ಶುಭಾಂಗಿ ನಿಗಮ್ ಅವರು ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ನೋಡೋಣ ಬನ್ನಿ.

ಅನೇಕ ಜನರು ಕುಡಿಯುವಾಗ ಚಾಕೊಲೇಟ್ ಅಥವಾ ಐಸ್ ಕ್ರೀಮ್ ತಿನ್ನುತ್ತಾರೆ. ಆದರೆ ಇವುಗಳನ್ನು ಕೂಡ ತಿನ್ನದೇ ಇರುವುದು ಉತ್ತಮ. ಆಲ್ಕೋಹಾಲ್ನೊಂದಿಗೆ ಬೀನ್ಸ್ ತಿನ್ನುವುದು ತುಂಬಾ ಕೆಟ್ಟದು. ಜೊತೆಗೆ ಬ್ರೆಡ್ ಕೂಡ ತಿನ್ನಬಾರದು. ಅಲ್ಲದೇ ಉಪ್ಪು ಹೆಚ್ಚಿರುವ ಆಹಾರಗಳನ್ನು ತ್ಯಜಿಸಬೇಕು. ಇಲ್ಲದಿದ್ದರೆ ಆರೋಗ್ಯ ಕೆಡುಕಾಗುವುದು ಖಂಡಿತ.

ಕುಡಿಯುವಾಗ ನಾರಿನಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಹಣ್ಣುಗಳು ಮತ್ತು ಸಲಾಡ್ಗಳನ್ನು ತಿನ್ನಬಹುದು. ಇದಲ್ಲದೇ, ಆಲ್ಕೋಹಾಲ್ ಸೇವಿಸಿದ ನಂತರ ಗ್ರೀನ್ ಟೀ ಅಥವಾ ಸೂಪ್ ಅನ್ನು ಸೇವಿಸುವುದು ಉತ್ತಮ ಎಂದು ಅವರು ಹೇಳಿದ್ದಾರೆ.

 

ಇದನ್ನು ಓದಿ : Urfi Javed New Look : ಬಟ್ಟೆ ಬೋರಾಯ್ತು, ಮಲ್ಲಿಗೆ ಹೂವಿನಿಂದಲೇ ಮಾನ ಮುಚ್ಚಿದ ಉರ್ಫಿ!!! 

2 Comments
  1. iscriviti a binance says

    Your article helped me a lot, is there any more related content? Thanks!

  2. Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

Leave A Reply

Your email address will not be published.