Daily Horoscope 10/04/2023 :ಇಂದು ಈ ರಾಶಿಯವರಿಗೆ ಸಮಾಜದಲ್ಲಿ ಗೌರವ, ಅನಿರೀಕ್ಷಿತ ಬದಲಾವಣೆ ನಡೆಯುವುದು ಸಾಧ್ಯತೆ!
Daily Horoscope 10/04/2023 : ಮೇಷ ರಾಶಿ
ವೃತ್ತಿಪರ ವ್ಯವಹಾರಗಳು ಸೀಮಿತವಾಗಿ ಸಾಗುತ್ತವೆ . ಕೆಲಸದಲ್ಲಿ ಅನಿರೀಕ್ಷಿತ ಬದಲಾವಣೆಗಳು ನಡೆಯುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಸಣ್ಣಪುಟ್ಟ ಅಡಚಣೆಗಳು ಉಂಟಾಗುವುದು. ಸಹೋದರರೊಂದಿಗೆ ವಾದ-ವಿವಾದಗಳು ನಡೆಯುತ್ತವೆ .ಹಠಾತ್ ಪ್ರಯಾಣ ಸೂಚನೆಗಳು.ವಾಹನ ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು.
ವೃಷಭ ರಾಶಿ
ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ , ಹೊಸ ವಾಹನ ಖರೀದಿ ನಡೆಯಲಿದೆ. ಸ್ನೇಹಿತರೊಂದಿಗೆ ಸಕ್ಯತೆಯಿಂದ ವರ್ತಿಸುತ್ತೀರಿ.ವ್ಯಾಪಾರದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತವೆ, ದೈವದರ್ಶನಗಳನ್ನು ಮಾಡುತ್ತೀರಿ , ಉದ್ಯೋಗದಲ್ಲಿ ಪ್ರಗತಿ ಇರುತ್ತದೆ.
ಮಿಥುನ ರಾಶಿ
ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಕಾಣಲಿದೆ. ಮಿತ್ರರಿಂದ ಆಶ್ಚರ್ಯಕರ ಸಂಗತಿಗಳು ತಿಳಿಯುತ್ತವೆ .ದೂರದ ಸ್ಥಳಗಳಿಂದ ಶುಭ ವಾರ್ತೆಗಳು ಬರುತ್ತವೆ. ಭೋಜನ ಮನರಂಜನೆಯಲ್ಲಿ ಭಾಗವಹಿಸುವಿರಿ. ವ್ಯಾಪಾರ ಉದ್ಯೋಗಗಳು ಅನುಕೂಲಕರ ವಾತಾವರಣವನ್ನು ಹೊಂದಿರುತ್ತವೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.
ಕಟಕ ರಾಶಿ
ದೂರದ ಬಂಧುಗಳೊಂದಿಗೆ ಕಲಹ ಉಂಟಾಗುವುದು.ಮಕ್ಕಳ ಆರೋಗ್ಯದ ವಿಚಾರದಲ್ಲಿ ಜಾಗರೂಕತೆಯಿಂದ ವರ್ತಿಸಬೇಕು.ಮುಖ್ಯ ವ್ಯವಹಾರಗಳಲ್ಲಿ ಖರ್ಚು ಹೆಚ್ಚಾಗುವುದು.ವ್ಯಾಪಾರ ಉದ್ಯೋಗಗಳಲ್ಲಿ ಮತ್ತಷ್ಟು ಒತ್ತಡ ಹೆಚ್ಚಾಗುವುದು. ಅನಿರೀಕ್ಷಿತ ಖರ್ಚು ಹೆಚ್ಚಾಗಲಿದೆ.
ಸಿಂಹ ರಾಶಿ
ವ್ಯರ್ಥ ಪ್ರಯಾಣವನ್ನು ಮಾಡಬೇಕಾಗಬಹುದು, ಮನೆಯ ಹೊರಗೆ ಕಿರಿಕಿರಿಗಳು ಹೆಚ್ಚಾಗುತ್ತವೆ.ಪ್ರಮುಖ ಕಾರ್ಯಕ್ರಮಗಳನ್ನು ಮುಂದೂಡುವುದು ಉತ್ತಮ.ಆರೋಗ್ಯ ಸಮಸ್ಯೆಗಳಿಂದ ಕಿರಿ ಕಿರಿ ಉಂಟಾಗುತ್ತದೆ . ವೃತ್ತಿ ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ . ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚುತ್ತದೆ.
ಕನ್ಯಾ ರಾಶಿ
ಆಪ್ತರೊಂದಿಗೆ ಮನೆಯಲ್ಲಿ ನೆಮ್ಮದಿಯಿಂದ ಕಾಲ ಕಳೆಯುವಿರಿ.ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ.ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಲಾಭವನ್ನು ಪಡೆಯುತ್ತೀರಿ.ವೃತ್ತಿಪರ ವ್ಯವಹಾರಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತವೆ. ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ ದೊರೆಯುತ್ತದೆ.
ತುಲಾ ರಾಶಿ
ಸ್ಥಿರಾಸ್ತಿಗೆ ಸಂಬಂಧಿಸಿದ ಹೊಸ ಒಪ್ಪಂದಗಳು ಮುಂದೂಡಲ್ಪಡುತ್ತವೆ.ವ್ಯಾಪಾರ ವ್ಯವಹಾರಗಳು ನಿರಾಶಾದಾಯಕವಾಗಿರುತ್ತದೆ.ಕೆಲಸಗಳಲ್ಲಿ ಕಠಿಣ ಪರಿಶ್ರಮ ಹೊರತುಪಡಿಸಿ ಯಾವುದೇ ಫಲಿತಾಂಶ ಕಂಡುಬರುವುದಿಲ್ಲ. ಉದ್ಯೋಗದಲ್ಲಿ ಅನ್ಯರಿಂದ ಅನಿರೀಕ್ಷಿತ ಸಮಸ್ಯೆಗಳು ಎದುರಾಗಲಿವೆ.ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.ಪ್ರಾಯನಗಳು ಅಷ್ಟರ ಮಟ್ಟಿಗೆ ಕೂಡಿ ಬರುವುದಿಲ್ಲ.
ವೃಶ್ಚಿಕ ರಾಶಿ
ಕುಟುಂಬದ ಸದಸ್ಯರಿಂದ ಶುಭ ಸುದ್ದಿ ಸಿಗಲಿದೆ, ಆರ್ಥಿಕವಾಗಿ ಅನುಕೂಲಕರ ವಾತಾವರಣವಿರುತ್ತದೆ.ಹೊಸ ಜನರ ಭೇಟಿಯಿಂದ ಒಂದಿಷ್ಟು ಉತ್ಸಾಹ ಮೂಡುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಾರೆ.ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ.ಭೋಜನ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.
ಧನುಸ್ಸು ರಾಶಿ
ಬಂಧು ಮಿತ್ರರಿಂದ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾಗುವುದು. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬವಾಗಲಿದೆ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆ ಮತ್ತು ಒತ್ತಡ ಹೆಚ್ಚಾಗುತ್ತದೆ. ವ್ಯಾಪಾರದ ಕೆಲಸಗಳು ಸಮಸ್ಯಾತ್ಮಕವಾಗಿರುತ್ತವೆ.ಸಮಯಕ್ಕೆ ಹಣವನ್ನು ಪಡೆಯುವಲ್ಲಿ ನಿಮಗೆ ತೊಂದರೆಯಾಗುವುದು.
ಮಕರ ರಾಶಿ.
ಸಮಾಜದಲ್ಲಿ ಹಿರಿಯರ ಜೊತೆಗಿನ ಚರ್ಚೆ ಲಾಭದಾಯಕವಾಗಲಿದೆ. ವಿವಾದಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಪಡೆಯುತ್ತೀರಿ. ಹೊಸ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಏರಿಳಿತಗಳು ಹೊರಬರುತ್ತವೆ. ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಹೊರಬರುವಿರಿ.
ಕುಂಭ ರಾಶಿ
ಹಣದ ವಿಷಯದಲ್ಲಿ ತೊಂದರೆಗಳನ್ನು ನಿವಾರಿಸಿ ಮುನ್ನಡೆಯುತ್ತೀರಿ. ಬಂಧು ಮಿತ್ರರಿಂದ ಶುಭ ಸಮಾಚಾರ ದೊರೆಯಲಿದೆ. ಬಾಲ್ಯದ ಗೆಳೆಯರೊಂದಿಗೆ ದೂರ ಪ್ರಯಾಣ ಮಾಡುವಿರಿ.ಉದ್ಯಮ ವಿಸ್ತರಣೆಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ.ನಿರುದ್ಯೋಗಿಗಳಿಗೆ ಅನುಕೂಲಕರ ವಾತಾವರಣವಿರುತ್ತದೆ. ವಿದ್ಯಾರ್ಥಿಗಳಿಗೆ ಕಷ್ಟ ಫಲಿಸುತ್ತದೆ.
ಮೀನ ರಾಶಿ.
ಅನಿರೀಕ್ಷಿತ ಪ್ರಯಾಣಗಳನ್ನು ಮಾಡಬೇಕಾಗುವುದು.ವೃತ್ತಿ ವ್ಯಾಪಾರದಲ್ಲಿ ದಿಢೀರ್ ಬದಲಾವಣೆಗಳಾಗುವುದು.ಸಾಲದ ಒತ್ತಡಗಳು ಹೆಚ್ಚಾಗುವುದು.ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗುವುದು.ಕುಟುಂಬದವರೊಂದಿಗೆ ಸಣ್ಣಪುಟ್ಟ ಕಲಹಗಳು.
ನಿತ್ಯ ಪಂಚಾಂಗ NITYA PANCHANGA ( Daily Horoscope 10/04/2023) ಸೋಮವಾರ MONDAY
ಸಂವತ್ಸರ: ಶೋಭಕೃತ್.
SAMVATSARA : SHOBHAKRUTH.
ಆಯಣ: ಉತ್ತರಾಯಣ.
AYANA: UTTARAAYANA.
ಋತು: ವಸಂತ.
RUTHU: VASANTA.
ಮಾಸ: ಚೈತ್ರ.
MAASA: CHAITRA.
ಪಕ್ಷ: ಕೃಷ್ಣ.
PAKSHA: KRISHNA.
ವಾಸರ: ಇಂದುವಾಸರ.
VAASARA: INDUVAASARA.
ನಕ್ಷತ್ರ: ಅನುರಾಧಾ.
NAKSHATRA: ANURADHA.
ಯೋಗ: ವ್ಯತೀಪಾತ.
YOGA: VYATIPATHA.
ಕರಣ: ಬಾಲವ.
KARANA: BALAVA.
ತಿಥಿ: ಚತುರ್ಥೀ.08/38.ರ ವರೆಗೆ.
TITHI: CHATURTHI.08/38.AM.
ಶ್ರಾದ್ಧ ತಿಥಿ: ಪಂಚಮೀ.
SHRADDHA TITHI: PANCHAMI.
ಸೂರ್ಯೊದಯ (Sunrise): 06.16
ಸೂರ್ಯಾಸ್ತ (Sunset): 06:42
ರಾಹು ಕಾಲ (RAHU KAALA) : 07:30AM To 09:00AM.
ಇದನ್ನೂ ಓದಿ: Astrologer Copper Ring : ತಾಮ್ರದ ಉಂಗುರದಿಂದ ನಿಮ್ಮ ಅದೃಷ್ಟ ಬೆಳಗುತ್ತೆ!
Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?