Buddhist Leader Dalai Lama Controversy: ತುಟಿಗೆ ಮುತ್ತಿಕ್ಕಿ, ನಾಲಿಗೆ ಚೀಪುವಂತೆ ಬಾಲಕನಿಗೆ ಹೇಳಿದ ದಲೈಲಾಮಾ! ಬೌದ್ಧ ಗುರು ವಿರುದ್ಧ ಭುಗಿಲೆದ್ದ ಆಕ್ರೋಶ!

Buddhist Leader Dalai-Lama Controversy : ಟೆಬೆಟಿಯನ್ ಬೌದ್ಧ ಧರ್ಮ ಗುರು ದಲೈಲಾಮಾ(Dalai Lama) ಅವರು ಚಿಕ್ಕ ಬಾಲಕನ ತುಟಿಗಳಿಗೆ ಚುಂಬಿಸಿ ಬಳಿಕ ತಮ್ಮ ನಾಲಿಗೆಯನ್ನು ಚೀಪುವಂತೆ ಆತನಿಗೆ ಹೇಳುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಹೌದು, ಬೌದ್ಧ ಧರ್ಮ ಗುರು ದಲೈ ಲಾಮಾ (Dalai Lama) ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪುಟ್ಟ ಬಾಲಕನ ತುಟಿಗಳಿಗೆ ಚುಂಬಿಸಿರುವ ದಲೈಲಾಮಾ, ತಮ್ಮ ನಾಲಿಗೆಯನ್ನು (Tongue) ಚೀಪುವಂತೆ ಆತನಿಗೆ ಹೇಳುವ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋ (Video) ಕಂಡ ನೆಟ್ಟಿಗರು ದಲೈ ಲಾಮಾ ಈ ರೀತಿ ಯಾಕೆ ಮಾಡಿದರೂ ಅನ್ನುವ ಪ್ರಶ್ನೆ ಎದ್ದಿದೆ. ಇದು ಸುಮಾರು ಒಂದು ತಿಂಗಳ ಹಿಂದಿನ ವಿಡಿಯೋ(Buddhist Leader Dalai-Lama Controversy) ಎನ್ನಲಾಗಿದ್ದು, ಇತ್ತೀಚೆಗೆ ವಿಡಿಯೋ ವೈರಲ್ ಆಗಿದೆ.

ಬೌದ್ಧರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಗುವೊಂದು ದಲೈಲಾಮಾ ಅವರನ್ನು ಅಪ್ಪಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿತ್ತು ಎಂದು ಹೇಳಲಾಗಿದೆ. ನಂತರ ದಲೈಲಾಮಾ ಮಗುವನ್ನು ಕರೆದರು. ಮಗುವಿನೊಂದಿಗೆ ಮಾತನಾಡುವಾಗ, ದಲೈ ಲಾಮಾ ಮೊದಲು ಅವನ ತುಟಿಗಳನ್ನು ಚುಂಬಿಸಿದರು ಮತ್ತು ನಂತರ ಅವರ ನಾಲಿಗೆಯನ್ನು ಹೊರತೆಗೆದು ನನ್ನ ನಾಲಿಗೆಯನ್ನು ನೆಕ್ಕುವಂತೆ ಹೇಳಿದ್ದರು.

ಈ ವಿಡಿಯೋವನ್ನು ಜೂಸ್ಟ್​ ಬ್ರೋಕರ್ ಎಂಬ ಟ್ವಿಟ್ಟರ್ ಬಳಕೆದಾರ ಹಂಚಿಕೊಂಡಿದ್ದು, ದಲೈಲಾಮಾರ ಈ ವರ್ತನೆಗೆ ಹಿಂದಿನ ಉದ್ದೇಶವೇನೆಂದು ಎಲ್ಲರೂ ಪ್ರಶ್ನಿಸಿದ್ದಾರೆ. ಅನೇಕರು ಈ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ. ದೇಶದಲ್ಲಿ ಮಕ್ಕಳ ಕೆನ್ನೆಗೆ ಮುತ್ತು ಕೊಡುವುದು ಆಕ್ಷೇಪಾರ್ಹವಲ್ಲ ಆದರೆ ಭಾರತೀಯ ಸಂಪ್ರದಾಯವಾದಿಗಳು ಸಾರ್ವಜನಿಕವಾಗಿ ಚುಂಬಿಸುವುದನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಸಾಮಾನ್ಯವೇ ಆಗಿರಬಹುದು. ಆದರೆ ಅಲ್ಲಿಯೂ ಕೂಡ ಹಿರಿಯರಿಗೆ ಸೀಮಿತವಾಗಿದೆ.

ಇದು ಅಸಹ್ಯಕರ ನಡವಳಿಕೆ ಎಂದು ಅನೇಕರು ಕಿಡಿಕಾರಿದ್ದಾರೆ. “ಇದು ದಲೈಲಾಮಾ ಅವರ ಯೋಗ್ಯವಲ್ಲದ ವರ್ತನೆ. ಈ ಕೆಟ್ಟ ನಡವಳಿಕೆಯನ್ನು ಯಾರೂ ಸಮರ್ಥಿಸಬಾರದು” ಎಂದು ದೀಪಿಕಾ ಪುಷ್ಕರ್ ನಾಥ್ ಎಂಬುವವರು ಟ್ವೀಟ್ ಮಾಡಿದ್ದಾರೆ. “ನಾನು ನೋಡುತ್ತಿರುವುದು ಏನನ್ನು? ಇದು ದಲೈ ಲಾಮಾ ಅವರೇ? ಶಿಶು ಕಾಮದ ಪ್ರಕರಣದಲ್ಲಿ ಅವರನ್ನು ಬಂಧಿಸಬೇಕು. ಇದು ಅಸಹ್ಯಕರ” ಎಂದು ಜಾಸ್ ಒಬೆರಾಯ್ ಎಂಬುವವರು ಹೇಳಿದ್ದಾರೆ.

ಇನ್ನು ಕೆಲವರು ಇದರ ಹಿನ್ನೆಲೆ ಏನು ಎಂಬುದನ್ನು ನೋಡದೆ ಟೀಕಿಸುವುದು ಸರಿಯಲ್ಲ ಎಂದಿದ್ದಾರೆ. ಸಾರ್ವಜನಿಕವಾಗಿ ಆಲಂಗಿಸುವುದು, ಕೆನ್ನೆಗಳಿಗೆ ಚುಂಬಿಸುವುದು, ಮುಖ ಹಾಗೂ ನಾಲಿಗೆಗೆ ಚುಂಬಿಸುವುದು ಟೆಬೆಟ್ ಸಂಸ್ಕೃತಿಯಲ್ಲ. ನಾಲಿಗೆ ಮೂಲಕ ಶುಭಕೋರುವುದು ಟಿಬೆಟ್ ಸಂಪ್ರದಾಯವಾಗಿದೆ. ಆದರೆ ಈಗ ಗಡಿಪಾರಾಗಿರುವ ಸಮುದಾಯದಲ್ಲಿ ಈ ಪದ್ಧತಿ ಕಣ್ಮರೆಯಾಗಿದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಹೇಳಿದ್ದಾರೆ.

 

https://twitter.com/NatlyDenise_/status/1645050811955724292?t=D-wboqiFvfVLPWSj2RnICQ&s=08

 

ಇದನ್ನು ಓದಿ : 2nd PUC Result 2023: ದ್ವಿತೀಯ ಪಿಯುಸಿ ಫಲಿತಾಂಶದ ಕುರಿತು ಮಹತ್ವದ ಮಾಹಿತಿ!

Leave A Reply

Your email address will not be published.