Nandini- Amul : ನಂದಿನಿ ವಿವಾದ ಬಗೆಹರಿಸುವಂತೆ ಬಿಜೆಪಿ ಹೈಕಮಾಂಡ್ ಸೂಚನೆ!

Nandini- Amul: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಶುರುವಾದ ಮೇಲೆ ಕೆಎಂಎಫ್ (KMF) ವಿಚಾರದಲ್ಲಿ ಬಿಜೆಪಿಯೂ ಪದೇ ಪದೇ ಇಕ್ಕಟ್ಟಿಗೆ ಸಿಲುಕ್ಕುತ್ತದೆ ಇದೆ. ನಂದಿನಿ (Nandini- Amul) ವಿವಾದದಿಂದಾಗಿ ಬಿಜೆಪಿ ಹೈಕಮಾಂಡ್ ಗೆ ನಿದ್ದೆಯೇ ಇಲ್ಲದ ಹಾಗೆ ಆಗಿದೆ. ಆದ್ದರಿಂದ ಶೀಘ್ರದಲ್ಲೇ ಈ ವಿವಾದಕ್ಕೆ ಬ್ರೇಕ್ ಹಾಕಲು ರಾಜ್ಯ ನಾಯಕರಿಗೆ ಹೊಸ ಟಾಸ್ಕ್ (TASK) ಒಂದನ್ನು ನೀಡಿದ್ದಾರೆ.

 

ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ತಿರುಗೇಟು ನೀಡಲು ಇಡಿ ಬಿಜೆಪಿ ಇದೀಗ ನಂದಿನಿ ಪರವಾಗಿ ನಿಂತಿದೆ. ರಾಜ್ಯದ ಜನತೆಗೆ ವಾಸ್ತವದ ಮಾಹಿತಿ ನೀಡಲು ಬಿಜೆಪಿ ಹೈಕಮಾಂಡ್ ರೆಡಿ ಆಗಿದೆ.

2022 ರ ವರ್ಷದ ಅಂತ್ಯದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಮಂಡ್ಯದಲ್ಲಿ ನೆಡೆದ ಮೆಗಾ ಡೇರಿ ಉದ್ಘಾಟನೆಯಲ್ಲಿ ನಂದಿನಿ ಮತ್ತು ಅಮುಲ್ ಒಟ್ಟಾಗಿ ತಂತ್ರಜ್ಞಾನ ವಿನಿಮಯ ಮಾಡಿಕೊಂಡು ಮತ್ತಷ್ಟು ಬೆಳೆಯಬೇಕು ಎಂದು ಹೇಳಿಕೆ ನೀಡಿದ್ದರು, ಈ ಹೇಳಿಕೆಯೇ ಇದೀಗ ರಾಜ್ಯದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಗುಜರಾತ್ ನ ಬ್ರಾಂಡ್ ಆದ ಅಮುಲ್ (Amul) ಜೊತೆ ಕರ್ನಾಟಕದ ಕೆಎಂಎಫ್ ಅನ್ನು ಜೊತೆಗೂಡಿಸುವ ಪ್ಲಾನ್ (Plan) ನಡೆಸಲಾಗಿದೆ ಎಂದು ಬಿಜೆಪಿ ಪಕ್ಷದ ಮೇಲೆ ಆರೋಪ ಬಂದಿತ್ತು. ಈ ಆಪಾದನೆಯಿಂದ ಹೊರ ಬರಲು ಬಿಜೆಪಿಯು ಸಾಕಷ್ಟು ಪ್ರಯತ್ನ ಪಟ್ಟಿತ್ತು. ನಂದಿನಿ (nandini) ವಿಚಾರದ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿ ಅಮುಲ್ (amul) ಜೊತೆ ನಂದಿನಿ ವಿಲೀನ ಆಗುವುದಿಲ್ಲ ಎಂದು ಸಂದೇಶವ ನೀಡುವುದರಲ್ಲಿ ಸಫಲರಾಗಿದ್ದರು.

ಆದರೆ ಇದೀಗ ಮತ್ತೊಮ್ಮೆ ನಂದಿನಿ(nandini) ವಿಚಾರದ ಕುರಿತು ಬಿಜೆಪಿ ಮೇಲೆ ಆಪಾದನೆ ಬಂದಿದೆ. ಇ- ಕಾಮರ್ಸ್ (E- commerce) ಮೂಲಕ ನಂದಿನಿ ಹಾಲು ಹಾಗೂ ಮೊಸರು ಬೆಂಗಳೂರಿಗೆ ಪ್ರವೇಶ ಮಾಡುತ್ತದೆ, ಈ ಪ್ರವೇಶದ ಹಿಂದೆ ಅಮಿತ್ ಶಾ ಅವರು ಇದ್ದಾರೆ. ಅಮುಲ್ ಜೊತೆ ನಂದಿನಿ ಸಫಲವಾಗದ ಹಿನ್ನಲೆಯಲ್ಲಿ ನಂದಿನಿಯ ಮಾರುಕಟ್ಟೆ ಕುಸಿಯುವಂತೆ ಮಾಡುವ ಮೂಲಕ ವಿಲೀನಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಜೆಪಿ ಮೇಲೆ ಆರೋಪ ಮನೆ ಮಾಡಿದೆ.

ನಿಜಕ್ಕೂ ಇದು ಬಿಜೆಪಿ ಗೆ ನುಂಗಲಾರದ ತುತ್ತಾಗಿದೆ. ಈ ಹಿಂದೆ ಬಂದಿದ್ದ ಆಪದಾನೆಯಿಂದ ಸಾಕಷ್ಟು ಪ್ರಯತ್ನ ದಿಂದ ಹೊರ ಬಂದಿದ್ದೆವು, ಆದರೆ ಇದೀಗ ಮತ್ತೆ ಆಪಾದನೆ ನೀಡಿರುವುದು ಬಿಜೆಪಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಅದರಲ್ಲಿಯೂ ಹಳೆ ಮೈಸೂರನಲ್ಲಿ ಬಿಜೆಪಿ ಪ್ರಾಬಲ್ಯ ಇಲ್ಲ ಈ ಬಾರಿ ಪ್ರಾಬಲ್ಯಕ್ಕಾಗಿ ಹೊಸ ಪ್ಲಾನ್ (plan) ಒಂದನ್ನು ರೂಪಿಸಿಕೊಂಡಿತ್ತು. ಆದರೆ ನಂದಿನಿ ವಿರುದ್ದವಾಗಿ ಬಿಜೆಪಿ ಇದೆ ಎಂಬ ವಿಚಾರವು ಸದೃಢವಾಗಿ ಬೆಳೆದಿದೆ, ಹಾಗಾಗಿ ಬಿಜೆಪಿ ಪಾಲಿಗೆ ಹಳೆ ಮೈಸೂರು ಕೇವಲ ಭರವಸೆಯಾಗಿಯೇ ಉಳಿಯಲಿದೆ. ಇದನೆಲ್ಲ ಅರಿತ ಬಿಜೆಪಿ ಹೈಕಮಾಂಡ್ ರಾಜ್ಯದ ಜನತೆಗೆ ಸ್ಪಷ್ಟವಾಗಿ ಸತ್ಯವನ್ನು ಬಿಚ್ಚಿಡಲು ರೆಡಿ ಆಗಿದೆ.

ಕರ್ನಾಟಕದ ಕೆಎಂಎಫ್ (KMF) ಗೆ ಬಿಜೆಪಿಯಿಂದ ಧಕ್ಕೆಯಾಗಲಿದೆ ಎನ್ನುವ ಆರೋಪದಿಂದ ಹೊರಬರಬೇಕು. ಇಲ್ಲದೆ ಇದ್ದಲ್ಲಿ ಚುನಾವಣೆಯ ಸಂದರ್ಭದಲ್ಲಿ ಇದೆ ವಿಚಾರ ಬಿಜೆಪಿ ಗೆ ಹೈಲೈಟ್ (Highlight) ಆಗಲಿದೆ, ಇದಕ್ಕೆ ಬಿಜೆಪಿ ದೊಡ್ದ ಮಟ್ಟದಲ್ಲಿ ಬೆಲೆ ತರಬೇಕಾಗಲಿದೆ. ಶೀಘ್ರದಲ್ಲೇ ಬಿಜೆಪಿ ನಾಯಕರು ಈ ವಿಚಾರಕ್ಕೆ ತೆರೆ ಎಳೆಯಲು ಮುಂದಾಗಬೇಕು ಎಂದು ಸಂದೇಶವನ್ನು ಹೊರಹಾಕಿದ್ದಾರೆ. ಅಲ್ಲದೆ ಬಿಜೆಪಿ ನಂದಿನಿ, ಗೋವು ಎರಡೂ ಮುಖ್ಯವಾದ ವಿಷಯವಾಗಿದೆ. ಬಿಜೆಪಿ ಮೇಲೆ ಬರುತ್ತಿರುವ ಆರೋಪ ಪಕ್ಷಕ್ಕೆ ನಕಾರಾತ್ಮಕ ಫಲಿತಾಂಶ ತಂದುಕೊಡುವ ಸಾಧ್ಯತೆ ಇದೆ ಎಂದು ರವಿ ಕುಮಾರ್ ಟಿಕೆಟ್ ಘೋಷಣೆಯಲ್ಲಿ ತಿಳಿಸಿದ್ದಾರೆ.

ಇನ್ನೇನೂ ಕೆಲವೇ ದಿನಗಳಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ರಾಷ್ಟೀಯ ನಾಯಕರು ರಾಜ್ಯ ಪ್ರವಾಸಕ್ಕೆ ಆಗಮಿಸಲಿದ್ದಾರೆ, ಚುನಾವಣೆ ದಿನಾಂಕ ಘೋಷನೆಯಾದ ಬಳಿಕ ಚುನಾವಣೆಯ ಪ್ರಚಾರ ಆಗಲಿದ್ದು ಅಷ್ಟರಲ್ಲಿ ನಂದಿನಿ (nandini) ವಿವಾದ ತಣ್ಣಗಾಗಬೇಕು, ಈ ವಿವಾದದಿಂದ ರಾಷ್ಟೀಯ ನಾಯಕರು ಆಗಮಿಸಿದಾಗ ಮುಜುಗರ ಉಂಟಾಗಬಾರದು ಎಂಬ ಹೈಕಮಾಂಡ್ ಸಂದೇಶ ಬರುತ್ತಿದ್ದಂತೆಯೇ ಬಿಜೆಪಿ (BJP) ನಾಯಕರು ಪ್ರತಿ ದಿನವೂ ನಂದಿನಿ ವಿಚಾರ ಕುರಿತು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಹಕಾರಿ ಸಚಿವ ಎಸ್. ಟಿ ಸೋಮಶೇಖರ್, ಸಚಿವರಾದ ಸುಧಾಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಹಲವಾರು ಬಿಜೆಪಿಯ ನಾಯಕರು ಕೆಎಂಎಫ್ (KMF) ಕುರಿತು ಸುದ್ದಿಗೋಷ್ಠಿ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ನಂದಿನಿ ವಿವಾದ ವಿಚಾರ ಬಿಜೆಪಿ ಹೈಕಮಾಂಡ್ ನ ನಿದ್ದೆಗೆಡಿಸಿದ್ದು, ವಿವಾದ ತಣಿಸಲು ದಿನ ದಿನಕ್ಕೆ ಹೊಸ ಪ್ಲಾನ್ ಗಳನ್ನು ಬಿಜೆಪಿ (BJP) ನಾಯಕರು ರೆಡಿ ಮಾಡುತ್ತಿದ್ದು, ಕಾಂಗ್ರೆಸ್ ಜೆಡಿಎಸ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿ ವಿಲೀನ ವಿಷಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಈ ವಿವಾದ ಯಾರಿಗೆ ಒಳ್ಳಿತಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.