Symptoms Of Diabetic : ಈ ಲಕ್ಷಣಗಳೇನಾದರೂ ದೇಹದಲ್ಲಿ ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ!

Symptoms Of Diabetic : ಮಧುಮೇಹ ಕಾಯಿಲೆಯನ್ನು (diabetes) ನಾವು ಸಾಮಾನ್ಯವಾಗಿ ಸಕ್ಕರೆ ಕಾಯಿಲೆ, ಡಯಾಬಿಟೀಸ್ ಮತ್ತು ಶುಗರ್‌(sugar) ಎಂದು ನಾನಾ ವಿಧಗಳ ಹೆಸರಿನಲ್ಲಿ ಕರೆಯುತ್ತೇವೆ. ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯಲ್ಲಿ ಏನಾದರೂ ಕೊರತೆ ಉಂಟಾಗುವ ಒಂದು ಕಾಯಿಲೆ. ಈ ಮಧುಮೇಹ ಕಾಯಿಲೆಯು ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆಯಲ್ಲಿಯೂ ಒಂದು.

 

ಹೌದು, ಮಧುಮೇಹ ಕಾಯಿಲೆಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ಕಾಯಿಲೆಯು ಸಾಮಾನ್ಯವಾಗಿ ಎಲ್ಲಾ ಕಾಯಿಲೆಯಂತೆಯೇ ಒಂದು. ಹೆಚ್ಚಿನ ಸಂದರ್ಭದಲ್ಲಿ ಮಧುಮೇಹ(Symptoms Of Diabetic) ರೋಗಿಗಳಲ್ಲಿ ಮಧುಮೇಹ ಮೂತ್ರಪಿಂಡ ಕಾಯಿಲೆಗಳು ಕಂಡುಬರುತ್ತದೆ. ಇದು ನಿರಂತರವಾಗಿ ಅಧಿಕ ರಕ್ತದ ಸಕ್ಕರೆಯ ಮಟ್ಟಗಳು ಮತ್ತು ಮಧುಮೇಹಕ್ಕೆ ಔಷಧಿಗಳ ಬಳಕೆಯ ಪರಿಣಾಮವಾಗಿ ಈ ಕಾಯಿಲೆಯು ಸಂಭವಿಸುತ್ತದೆ. ಮಧುಮೇಹದ ಮೂತ್ರಪಿಂಡಗಳು ನಿಮ್ಮ ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕುವ ವಿಶಿಷ್ಟ ಪಾತ್ರವನ್ನು ನಿರ್ವಹಿಸುವ ಮೂತ್ರಪಿಂಡಗಳ ಸಾಮರ್ಥ್ಯದ ಮೇಲೆ ತುಂಬಾನೇ ಪರಿಣಾಮ ಬೀಳುತ್ತದೆ.

ಮಧುಮೇಹ ಕಾಯಿಲೆಯಲ್ಲಿ(diabetes) ಕೆಲವು ಲಕ್ಷಣಗಳು ಕಂಡುಬರುತ್ತದೆ ಈ ಲಕ್ಷಣಗಳನ್ನು ನೀವು ನಿರ್ಲಕ್ಷಿಸುತ್ತಾ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದರ ಬಗ್ಗೆ ನೀವು ಎಲ್ಲಾದರೂ ಬೇಜವಾಬ್ದಾರಿ (neglect) ತೋರಿಸಿದರೆ ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ಹಾಗಾದರೆ ಈ ರೋಗದ 5 ಲಕ್ಷಣಗಳು ಯಾವುದು ನೋಡಿ.

ಕೈ ಕಾಲು ಅಥವಾ ಪಾದಗಳಲ್ಲಿ ಊತ :

ಸಾಮಾನ್ಯವಾಗಿ ಮಹಿಳೆಯರು ಗರ್ಭಿಣಿ (pregnant) ಇರುವಾಗ ಈ ಕಾಲಿನ ಊತ ಕಂಡುಬರುತ್ತದೆ. ಗರ್ಭಿಣಿಯರ ಕಾಲಿನಲ್ಲಿ ಈ ಊತ ಕಂಡು ಬಂದಾಗ ಇದನ್ನು ಮಧುಮೇಹ ಎಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಗರ್ಭಿಣಿ ಇರುವಾಗ ಕಾಣಿಸಿಕೊಳ್ಳುವ ಈ ಊತ ಸಾಮಾನ್ಯವಾಗಿದೆ. ಹಾಗಾದರೆ ಕೈ ಕಾಲು ಅಥವಾ ಪಾದಗಳಲ್ಲಿ ಏಕೆ ಊತ ಕಾಣಿಸಿಕೊಳ್ಳಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಏಕೆಂದರೆ ದೇಹದಿಂದ ಹೆಚ್ಚುವರಿ ದ್ರವವನ್ನು ಹೊರಹಾಕಲು ಸಾಧ್ಯವಾಗದೇ ಇದ್ದಾಗ ದೇಹದ ವಿವಿಧ ಭಾಗಗಳಲ್ಲಿ ಊತ ಕಂಡು ಬರುತ್ತದೆ. ಇದು ಸಾಮಾನ್ಯವಾಗಿ ಕೈಗಳು, ಪಾದಗಳ ಮೇಲೆ ಹೆಚ್ಚಾಗಿ ಕಂಡುಬರುತ್ತದೆ.

ಒಣ ಚರ್ಮ ಮತ್ತು ತುರಿಕೆ:

ಬಿಸಿಲಿನ ತಾಪಮಾನ (temperature) ಹೆಚ್ಚಾದಾಗ ಈ ಸಮಯದಲ್ಲಿ ಈ ತುರಿಕೆ ಉಂಟಾಗುವುದು ಸಾಮಾನ್ಯವಾಗಿದೆ. ಆದರೆ ಮಧುಮೇಹ ಇರುವಾಗ ಒಣ ಚರ್ಮ ಮತ್ತು ತುರಿಕೆ ಉಂಟಾದರೆ ಏನಾಗುತ್ತದೆ ಎಂದರೆ ರಕ್ತಪ್ರವಾಹದಲ್ಲಿ ವಿಷ ಮತ್ತು ತ್ಯಾಜ್ಯ ಉತ್ಪನ್ನಗಳು ಸಂಗ್ರಹವಾಗಿದೆ ಎಂಬುದರ ಸಂಕೇತವಾಗಿದೆ. ಮನುಷ್ಯನ ಚರ್ಮದ ಮೇಲೆ ಕೆಂಪು (red) ಮತ್ತು ಒಣ ಚುಕ್ಕೆಗಳಿಗೆ ಕಾರಣವಾಗಬಹುದು. ಇದರಿಂದ ಅನೇಕ ಸಮಸ್ಯೆಗಳಿಗೆ ಒಳಗಾಗಿ ಗುಳ್ಳೆ ಬೀಳುವ ಸಾಧ್ಯತೆ ಹೆಚ್ಚಿದೆ.

ಕಳಪೆ ಹಸಿವು:

ಕಳಪೆ ಹಸಿವು ಎಂದರೆ ಮನುಷ್ಯರಿಗೆ ಸಾಮಾನ್ಯವಾಗಿ ಆಗುವ ಹಸಿವಿನಿಂದ ಮಧುಮೇಹ(diabetes) ಕಾಣಿಸಿಕೊಂಡಾಗ ಯಾವುದೇ ರೀತಿಯ ಹಸಿವು ಆಗುವುದಿಲ್ಲ. ಇದು ಮೂತ್ರಪಿಂಡ ಕಾಯಿಲೆಯ ಮತ್ತೊಂದು ಎಚ್ಚರಿಕೆಯ ಲಕ್ಷಣವೆಂದರೆ ಹಸಿವಿನ ತ್ವರಿತ ಬದಲಾವಣೆ ಅಥವಾ ಹಸಿವು ಕಡಿಮೆಯಾಗುವುದು. ಇದು ವಾಕರಿಕೆ, ವಾಂತಿ, ಹಸಿವು ಕಡಿಮೆಯಾಗುವುದು ಮತ್ತು ರಕ್ತದಲ್ಲಿ ತ್ಯಾಜ್ಯ ವಸ್ತುಗಳ ಶೇಖರಣೆಯಿಂದಾಗಿ ಮನುಷ್ಯರ ತೂಕ ಕಡಿಮೆಯಾಗಿ ಹಲವು ರೋಗಗಳಿಗೆ ತುತ್ತಾಗಬಹುದು.

ಮೂತ್ರದಲ್ಲಿ ಸಮಸ್ಯೆ:

ಮೂತ್ರದಲ್ಲಿ ಕೆಲವು ಸಾರಿ ಉರಿಮೂತ್ರ ಕಂಡುಬರುತ್ತದೆ. ಅಲ್ಬುಮಿನ್, ಒಂದು ರೀತಿಯ ಪ್ರೋಟೀನ್, ಮಧುಮೇಹ ಮೂತ್ರಪಿಂಡ ಕಾಯಿಲೆಯ ಆರಂಭಿಕ ಹಂತಗಳಲ್ಲಿ ಮೂತ್ರದಲ್ಲಿ ವಿಶಿಷ್ಟವಾಗಿ ಇರುತ್ತದೆ. ಮೂತ್ರ ಪರೀಕ್ಷೆಯಿಂದ ಇದನ್ನು ಗುರುತಿಸಬಹುದು. ಮೂತ್ರದಲ್ಲಿನ ಯಾವುದೇ ಪ್ರೋಟೀನ್(protein) ಮೂತ್ರಪಿಂಡದ ಕಾಯಿಲೆಗೆ ಎಚ್ಚರಿಕೆಯ ಸಂಕೇತವಾಗಿದೆ ಏಕೆಂದರೆ ಮೂತ್ರಪಿಂಡಗಳು ಸಾಮಾನ್ಯವಾಗಿ ಪ್ರೋಟೀನ್ ಅನ್ನು ಹಾದುಹೋಗದಂತೆ ತಡೆಯುತ್ತದೆ. ಮಧುಮೇಹದಲ್ಲಿ ಇದು ಒಂದು ಲಕ್ಷಣ ಸಾಮಾನ್ಯವಾಗಿದೆ.

ಬಳಲಿಕೆ ಮತ್ತು ಆಯಾಸ:

ಮಧುಮೇಹ (diabetes) ಮೂತ್ರಪಿಂಡ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಯಾವುದೇ ಒಂದು ಕೆಲಸವನ್ನು ಮಾಡಿದರು ಅಥವಾ ಸುಮ್ಮನೆ ಕುಳಿತಿದ್ದರು ಸಹ ಆಯಾಸ ಅಥವಾ ಅತಿಯಾದ ಬಳಲಿಕೆ ಕಂಡುಬರುತ್ತದೆ. ಇದು ವಿಶಿಷ್ಟವಾಗಿ ರಕ್ತಹೀನತೆಯಿಂದ ಉಂಟಾಗುತ್ತದೆ, ಈ ಸ್ಥಿತಿಯು ಮೂತ್ರಪಿಂಡಗಳು ಎರಿಥ್ರೋಪೊಯೆಟಿನ್ (erythropoietin) ಅನ್ನು ಉತ್ಪಾದಿಸುವುದನ್ನು ನಿಲ್ಲಿಸುತ್ತದೆ, ಇದು ಮೂಳೆ ಮಜ್ಜೆಯಲ್ಲಿ ಕೆಂಪು ರಕ್ತ ಕಣಗಳ ರಚನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹಾಗಾಗಿ ನಿಮಗೆ ಹೆಚ್ಚಿನ ಸಮಯದಲ್ಲಿ ಬಳಲಿಕೆ ಮತ್ತು ಆಯಾಸ ಉಂಟಾಗುತ್ತದೆ.

Leave A Reply

Your email address will not be published.