Kerala Youth Conference : ಯೂಥ್ ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆ ರಿಷಬ್ ಶೆಟ್ಟಿ, ಯಶ್!
Kerala Youth Conference : ಭಾಷಾ ಸಾಂಸೃತಿಕ ಪ್ರದೇಶವೆಂದು ಕರೆಯಲ್ಪಡುವ ದಕ್ಷಿಣ ಭಾರತದ ರಾಜ್ಯಗಲ್ಲಿ ಕೇರಳ ರಾಜ್ಯವು ಒಂದು. ಈ ಕೇರಳ ರಾಜ್ಯದಲ್ಲಿ ಇದೇ ಬರುವ ಏಪ್ರಿಲ್ 25 ರಂದು ವೈಬ್ರೆಂಟ್ ಯೂತ್ ಫಾರ್ ಮಾಡಿಫೈಯಿಂಗ್ ಕೇರಳ (Vibrant Youth for Modifying Kerala) ಯುವ ಕಾರ್ಯಕ್ರಮವೊಂದನ್ನು(Kerala Youth Conference) ಆಯೋಜಿಸಲು ಸಜ್ಜಾಗಿ ನಿಂತಿದೆ. ಹಾಗೆಯೇ ಈ ವಿಶೇಷ ಕಾರ್ಯಕ್ರಮಕ್ಕೆ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಈ ಕಾರ್ಯಕ್ರಮಕ್ಕೆ ಭೇಟಿ ನೀಡಿ ಚಾಲನೆ ನೀಡಲಿದ್ದಾರೆ.
ಕೇರಳದ ಕೊಚ್ಚಿಯಲ್ಲಿ(Kocchi) ನಡೆಯಲಿರುವ ಈ ಅದ್ದೂರಿ ಕಾರ್ಯಕ್ರಮದಲ್ಲಿ ದೇಶದ ಹಲವು ಕ್ಷೇತ್ರಗಳ ಯುವ ಸಾಧಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಾಗೆಯೇ ಈ ಪೈಕಿ ಸ್ಯಾಂಡಲ್‌ವುಡ್‌ನಿಂದ ತಮ್ಮ ನಟನೆ ಮತ್ತು ನಿರ್ದೇಶನದಿಂದ ಖ್ಯಾತಿಯಾಗಿ ಅಭಿಮಾನಿಗಳಿಂದ ಹೆಚ್ಚಿನ ಸಂಭಾವನೆಯನ್ನು ಪಡೆದ ಇಬ್ಬರು ಸ್ಟಾರ್ ನಟರು ಈ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಸ್ಯಾಂಡಲ್ ವುಡ್ ನ ಇಬ್ಬರು ನಟರು ಎಂದ ತಕ್ಷಣ ನಿಮಗೆ ಹಲವಾರು ನಟರ ಹೆಸರು ಮನಸ್ಸಿಗೆ ನೆನಪಾಗಬಹುದು. ಎಷ್ಟೇ ಹೆಸರು ಮನಸ್ಸಿಗೆ ನೆನಪು ಬಂದರು ಅ ಇಬ್ಬರು ನಟರು ಯಾರೆಂಬುದೇ ನಿಮ್ಮನ್ನು ಪ್ರಶ್ನೆ ಕಾಡಬಹುದು.
ಕೆಜಿಎಫ್ ಫೇಮ್‌ನಿಂದ ಎಲ್ಲೆಡೆ ಸದ್ದು ಮಾಡಿ ತನ್ನನ್ನು ಇನ್ನಷ್ಟು ಗುರುತಿಸಿಕೊಂಡ ನಟ ರಾಕಿ ಬಾಯ್ ಯಶ್( yash) ಎಲ್ಲರಿಗೂ ತಿಳಿದೇ ಇದೆ. ಹಾಗೆಯೇ ಕಾಂತಾರ ಸಿನಿಮಾ ಮೂಲಕ ದೇಶವನ್ನೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ರಿಷಬ್ ಶೆಟ್ಟಿ(Rishabh Shetty). ಸ್ಯಾಂಡಲ್ ವುಡ್ ನ ಈ ಇಬ್ಬರು ನಟರು ವೈಬ್ರೆಂಟ್ ಯೂತ್ ಫಾರ್ ಮಾಡಿಫೈಯಿಂಗ್ ಕೇರಳ ಯುಥ್ ಇವೆಂಟ್‌ನಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಇವರಿಬ್ಬರಿಗೂ ಆಯೋಜಕರಿಂದ ಆಮಂತ್ರಣವೂ ತಲುಪಿದೆ. ಹೆಚ್ಚಿನ ಮೆಚ್ಚುಗೆಯನ್ನು ಪಡೆದ ಈ ಎರಡು ನಟರು ಕೇರಳಕ್ಕೆ ಬರುವುದು ಅಭಿಮಾನಿಗಳಿಗೆ ಇನ್ನಷ್ಟು ಸಂತಸವನ್ನು ತಂದಿದೆ.
ಕನ್ನಡ ಸಿನಿತೆರೆಯಿಂದ ಈ ಇಬ್ಬರು ನಟರು ಭಾಗವಹಿಸಿದರೆ, ಕ್ರೀಡಾವಲಯದಿಂದ ಕ್ರಿಕೆಟಿಗ ರವೀಂದ್ರ ಜಡೇಜಾ(Ravindra Jadeja), ನಿರ್ದೇಶಕ ಪ್ರಿಯದರ್ಶನ್(priyadarshan) ಸೇರಿ ಮಲಯಾಳಂನ ಹಲವು ಸಿನಿಮಾ ಸ್ಟಾರ್‌ಗಳು ಈ ಅದ್ದೂರಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಅಂದಾಜು ಈ ಕಾರ್ಯಕ್ರಮದಲ್ಲಿಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಲಿದ್ದಾರೆ.
ಯೂಥ್ 20 ಸಹಯೋಗದಿಂದಿಗೆ ವೈಬ್ರೆಂಟ್ ಯೂತ್ ಫಾರ್ ಮಾಡಿಫೈಯಿಂಗ್ ಕೇರಳ ಈ ಸಮ್ಮೇಳನವನ್ನು ಬಹಳ ಅದ್ದೂರಿಯಾಗಿ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ಟೆಕ್ಕಿಗಳು(tikki), ವಿದ್ಯಾರ್ಥಿಗಳು(students) ಮತ್ತು ಉದ್ಯಮಿಗಳು(workers) ಸೇರಿ 18ರಿಂದ 35 ವರ್ಷದೊಳಗಿನ ಸುಮಾರು ಒಂದು ಲಕ್ಷ ಯುವಕರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟನಾ ಸಮಿತಿ ಈ ರೀತಿಯ ಮಾಹಿತಿಯನ್ನು ತಿಳಿಸಿದೆ.
Your point of view caught my eye and was very interesting. Thanks. I have a question for you.
Thanks for sharing. I read many of your blog posts, cool, your blog is very good.