Cubbon park : ಕಬ್ಬನ್ ಪಾರ್ಕ್ ನಲ್ಲಿ ಕೂರುವ ಪ್ರೇಮಿಗಳಿಗೆ ದಿಢೀರನೆ ಶಾಕ್ ಕೊಟ್ಟ ಆಡಳಿತ ಮಂಡಳಿ!

Cubbon Park : ಸಿಲಿಕಾನ್ ಸಿಟಿ ( silicon city) ಎಂದ ತಕ್ಷಣ ಈ ವಯಸ್ಸಾದವರಿಗೆ ನೆನಪಾಗುವುದು ವಿಪರೀತ ಬಿಸಿಲು, ಮನೆಗಳ ಇಕ್ಕಟ್ಟು, ವಾಹನಗಳ ಶಬ್ದ, ಎಲ್ಲಾನೂ ನೆನಪಾಗುತ್ತದೆ. ಆದರೆ ಪ್ರೇಮಿಗಳಿಗೆ ಇವೆಲ್ಲರ ಯಾವುದು ಚಿಂತೆ ಇಲ್ಲದೆ ಸಿಲಿಕಾನ್ ಸಿಟಿ ಎಂದ ತಕ್ಷಣ ಮೊದಲನೆಯದಾಗಿ ನೆನಪಾಗುವುದು ಪ್ರೇಮಿಗಳ(lovers) ವಿಹಾರ ತಾಣ ಕಬ್ಬನ್ ಪಾರ್ಕ್(cubbon park). ಬೆಂಗಳೂರಿನ ವಾಯು ವಿಹಾರಿಗಳ ಪಾಲಿನ ಸ್ವರ್ಗ ಕಬ್ಬನ್ ಪಾರ್ಕ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳ ಅಸಭ್ಯ ವರ್ತನೆ ನಡೆಯುತ್ತಿದೆ ಎನ್ನುವ ಆರೋಪ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ತೋಟಗಾರಿಕಾ ಇಲಾಖೆ ಮಹತ್ತರ ಹೆಜ್ಜೆ ಇಟ್ಟಿದೆ. ಈ ತೀರ್ಮಾನ ಪ್ರೇಮಿಗಳನ್ನು ಸಂಕಷ್ಟ ಪರಿಸ್ಥಿತಿಗೆ ನೂಕಿದೆ. ಹಾಗಾದರೆ ತೋಟಗಾರಿಕಾ ಇಲಾಖೆ ತೆಗೆದುಕೊಂಡಂತಹ ತೀರ್ಮಾನ ಆದರೂ ಯಾವುದು? ಬನ್ನಿ ನೋಡೋಣ.

ಹೌದು! ಇನ್ಮುಂದೆ ಕಬ್ಬನ್ ಪಾರ್ಕ್‌ನಲ್ಲಿ‌ ಕೂರುವ ಪ್ರೇಮಿಗಳಿಗೆ (lovers) ತೋಟಗಾರಿಕಾ ಇಲಾಖೆ ಶಾಕ್ ನೀಡಿದ್ದು, ಮನಸ್ಸಿಗೆ ಬಂದಂತೆ ವರ್ತಿಸುವಂತಿಲ್ಲ ಎಂದು ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮವನ್ನು ತಿಳಿಸಿದೆ.

ಬೆಂಗಳೂರಿನಲ್ಲಿ (Bangalore) ಸಿಕ್ಕಾಪಟ್ಟೆ ಫೇಮಸ್ ಆಗಿದ್ದಂತಹ ಕಬ್ಬನ್ ಪಾರ್ಕ್‌ಗೆ ಇನ್ಮುಂದೆ ಪ್ರೇಮಿಗಳಿಗೆ ನೋ ಎಂಟ್ರಿ (no entry)ಎಂದು ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೆತ್ತಿಕೊಂಡಿದೆ. ಇಷ್ಟು ದಿನ ಪ್ರೇಮಿಗಳ ಸರಸ ಸಲ್ಲಾಪವನ್ನು ನೋಡಲಾಗದೆ ಆಡಳಿತ ಮಂಡಳಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಈಗಿನ ಕಾಲದಲ್ಲಿ ಪ್ರೇಮಿಗಳು ಪರಸ್ಪರ ಮಾತಾಡಿ ತನ್ನ ಭಾವನೆಗಳನ್ನು ಹಂಚಿಕೊಳ್ಳುವುದನ್ನು ಬಿಟ್ಟು ಮರದ ಬುಡದಲ್ಲಿ, ಮರದ ಮೇಲೆ ಸರಸ ಸಲ್ಲಾಪ ನಡೆಸುತ್ತಿದ್ದ ಪ್ರೇಮಿಗಳಿಗೆ ಬಹುದೊಡ್ಡ ರೀತಿಯ ಶಾಕ್‌ (shock) ಅನ್ನು ತೋಟಗಾರಿಕಾ ಇಲಾಖೆ ನೀಡಿದೆ.

ಸದ್ಯ ಕಬ್ಬನ್ ಪಾರ್ಕ್‌ನಲ್ಲಿ ಅಸಭ್ಯವಾಗಿ ವರ್ತಿಸುವ ಜೋಡಿಗಳ ಮೇಲೆ ಕಣ್ಣಿಟ್ಟಿರುವ ಆಡಳಿತ ಮಂಡಳಿ, ಅಸಭ್ಯವಾಗಿ ವರ್ತಿಸಲು ಪ್ರೇಮಿಗಳು ಶುರು ಮಾಡಿದರೆ ಮೈಕ್‌ನಲ್ಲಿ (Mike) ಜೋರಾಗಿ ಅನೌನ್ಸ್ ಮಾಡಲಿದೆ. ಜೊತೆಗೆ ಪಾರ್ಕ್‌ನಲ್ಲಿ ಪ್ರೇಮಿಗಳು ಕುಳಿತರೂ ಯಾವುದೇ ರೀತಿಯ ಸ್ಪರ್ಶವನ್ನು ಮಾಡದೆ ದೂರ – ದೂರ ಕುಳಿತು ಮಾತನಾಡಬೇಕು ಎನ್ನುವ ಮಾಹಿತಿಯನ್ನು ತಿಳಿಸಿದೆ.

ಕಬ್ಬನ್ ಪಾರ್ಕ್ ನಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಯಾವುದೇ ರೀತಿಯ ಸರಿಯಾದ ವರ್ತನೆಯನ್ನು ತೋರದೆ ಅಸಭ್ಯ ರೀತಿಯಾಗಿ ವರ್ತಿಸುವುದನ್ನು ಕಂಡು ಕಬ್ಬನ್ ಪಾರ್ಕ್‌ಗೆ ಬರುವ ಕುಟುಂಬದವರು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಈ ಕಾರಣದಿಂದ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದೆ. ಈ ಮಾಹಿತಿಯ ಬೆನ್ನಲ್ಲೇ ಪಾರ್ಕ್‌ನಲ್ಲಿ ಪ್ರೇಮಿಗಳ ಸರಸ ಸಲ್ಲಾಪಕ್ಕೆ ಬ್ರೇಕ್(break) ಹಾಕಲಾಗಿದೆ. ಪ್ರತಿ ದಿನ ಮೈಕ್‌ನಲ್ಲಿ ಸೆಕ್ಯುರಿಟಿ ಮಂಜುನಾಥ್ ಅನೌನ್ಸ್(announce) ಮಾಡುತ್ತಿದ್ದು. ಅನೌನ್ಸ್ ಮಾಡಿದ ನಂತರವೂ ಯಾರಾದ್ರೂ ಅಸಭ್ಯವಾಗಿ ವರ್ತಿಸಲು ಮುಂದಾದ್ರೆ ಅಂತವರನ್ನ ಕಬ್ಬನ್ ಪಾರ್ಕ್‌ನಿಂದ ಸೆಕ್ಯುರಿಟಿಗಳು ಹೊರಗಡೆ ಕಳಿಸುತ್ತಿದ್ದಾರೆ.

ಇಷ್ಟೇ ಅಲ್ಲದೆ ಕಬ್ಬನ್‌ಪಾರ್ಕ್‌ನಲ್ಲಿ ಆಹಾರ ತಿನ್ನೋ ಹಾಗಿಲ್ಲ:

ಕಬ್ಬನ್‌ಪಾರ್ಕ್‌ನಲ್ಲಿ ಶ್ವಾನ, ಇಲಿ, ಹೆಗ್ಗಣಗಳ ಕಾಟ ಹೆಚ್ಚಾಗಿರುವುದರಿಂದ ಇವುಗಳ ನಿಯಂತ್ರಣಕ್ಕೆ ಮುಂದಾಗಿರುವ ತೋಟಗಾರಿಕೆ ಇಲಾಖೆ ಉದ್ಯಾನದಲ್ಲಿ ಸಾರ್ವಜನಿಕರು, ಪ್ರವಾಸಿಗರ ಆಹಾರ ಸೇವನೆಗೆ ನಿಷೇಧ ಹೇರಿರುವ ಕುರಿತು ಫಲಕಗಳನ್ನು ಪ್ರವೇಶ ದ್ವಾರಗಳಲ್ಲಿ ತೂಗು ಹಾಕಿದೆ. ಕಬ್ಬನ್‌ಪಾರ್ಕ್‌ನಲ್ಲಿ(cubbon park) ಆಹಾರ ಸೇವನೆ ನಿಷೇಧಿಸಿ ಐದಾರು ವರ್ಷಗಳು ಕಳೆದಿವೆ. ಆರಂಭದಲ್ಲಿ ಈ ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಲಾಗಿತ್ತು. ಆದರೆ ಕ್ರಮೇಣ ಮತ್ತೆ ಯಥಾಸ್ಥಿತಿಯಂತೆ ಉದ್ಯಾನದ ಸುತ್ತಮುತ್ತಲ ಕಚೇರಿಗಳ ನೌಕರ, ಸಿಬ್ಬಂದಿಗಳು, ಸಾರ್ವಜನಿಕರು ಉದ್ಯಾನದಲ್ಲೇ ಊಟ, ತಿಂಡಿ ಮಾಡುವುದನ್ನು ಮುಂದುವರೆಸಿದ್ದರು.

ದೂರದ ಊರಿನಿಂದ ಬಂದ ಪ್ರವಾಸಿಗರು ಅಥವಾ ಪ್ರೇಮಿಗಳು ಊಟ, ತಿಂಡಿ ತಿಂದು ಅಳಿದು ಉಳಿದಿದ್ದನ್ನು ಉದ್ಯಾನದಲ್ಲಿ (park) ಚೆಲ್ಲುತ್ತಿದ್ದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಜೊತೆಗೆ ಇಲಿ, ಹೆಗ್ಗಣಗಳ ಕಾಟವೂ ಜಾಸ್ತಿಯಾಗಿದೆ. ಇವುಗಳಿಂದ ಗಿಡಗಳ ಮರಗಳ ನಾಶ ಹೆಚ್ಚಾಗುತ್ತಿದೆ. ಊಟ, ತಿಂಡಿ ತಂದು ತಿಂದ ನಂತರ ಪ್ಲಾಸ್ಟಿಕ್‌ ಕವರ್‌ಗಳು, ಪೇಪರ್‌ಗಳು( paper), ಮೂಳೆಗಳನ್ನು ಹುಲ್ಲು ಹಾಸಿನ ಮೇಲೆಯೇ ಎಸೆದು ಹೋಗುತ್ತಿದ್ದರು. ಇದರಿಂದ ಪರಿಸರ ಮಾಲಿನ್ಯ ಆಗುತ್ತೆ ಎಂಬ ವಿಷಯವನ್ನು ತಿಳಿದರು ಜನರು ಅಸಭ್ಯವಾಗಿ ವರ್ತಿಸುತ್ತಿದ್ದರು. ಇದರಿಂದ ಪರಿಸರಕ್ಕೂ ಧಕ್ಕೆಯಾಗುತ್ತಿತ್ತು.

ಯಾರೋ ತಿಂದು ತೇಗಿ ಬಿಸಾಕಿ ಹೋದಂತ ತಿಂಡಿ ಪೊಟ್ಟನಗಳನ್ನು ಮತ್ತು ಯಾರದೋ ಎಂಜಲಿನ ಬಟ್ಟಲನ್ನು ತೆಗೆಯಲು ಯಾರಿಗಾದರೂ ಹೇಸಿಗೆ ಆಗುವುದಿಲ್ಲವೇ. ಇತರರಿಗೂ ಕೂಡ ಇಂತಹ ಸ್ಥಳಗಳಲ್ಲಿ ಕುಳಿತುಕೊಳ್ಳಲು ಹೇಸಿಗೆ ಪಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಹಾಗೆಯೇ ಶ್ವಾನಗಳ ಹಾವಳಿಯಿಂದ ಮಕ್ಕಳು(children’s), ಮಹಿಳೆಯರು(ladies) ಓಡಾಡುವುದಕ್ಕೂ ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಹಾಗಾಗಿ ಹುಲ್ಲು ಹಾಸಿನ ಮೇಲೆ ಆಹಾರ ಸೇವನೆಯನ್ನು 2015 ರಲ್ಲೇ ನಿಷೇಧಿಸಲಾಗಿತ್ತು ಎಂದು ತೋಟಗಾರಿಕೆ ಅಧಿಕಾರಿಗಳು ಈ ರೀತಿಯ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.