COVID: ಕೋವಿಡ್ ಸೋಂಕು ಕೈ ಹಾಗೂ ಗೃಹಬಳಕೆ ವಸ್ತುಗಳಿಂದ ಹರಡುತ್ತದೆ ; ಅಧ್ಯಯನದಿಂದ ಶಾಕಿಂಗ್ ಮಾಹಿತಿ ಬಹಿರಂಗ!!

Share the Article

COVID-19: ಕಳೆದ ವರ್ಷದ ಕೋರೋನಾ (covid-19) ಹಾವಳಿಯಿಂದ ಆಗಿರುವ ಸಾವು-ನೋವುಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದರಿಂದ ಪಾರಾಗಲು ಲಸಿಕೆಗಳನ್ನು ಪಡೆದಿದ್ದಾಗಿದೆ. ಆದರೆ, ಕೋರೋನಾ ಮಹಾಮಾರಿಯು ಕೊಂಚ ತಗ್ಗಿದ್ದೆ ಎಂದು ನಿಟ್ಟುಸಿರು ಬಿಡುತ್ತಿರುವ ವೇಳೆ ಇದೀಗ ಮತ್ತೆ ಅದರ ಹಾವಳಿ ಶುರುವಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಭಾರತವು ಕೋವಿಡ್ -19 (Covid-19) ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹವಾಗಿ ಕಡಿಮೆಯಾಗಿತ್ತು. ಆದರೂ ಕೂಡ, ಕಳೆದ ಕೆಲವು ವಾರಗಳಲ್ಲಿ ನಿರ್ದಿಷ್ಟವಾಗಿ ಕೆಲವು ರಾಜ್ಯಗಳಲ್ಲಿನ ಕೋವಿಡ್ ಪತ್ತೆ ಪ್ರಕರಣ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ.

ಆದರೆ, ಈ ಸೋಂಕು ಹರಡಲು ಕಾರಣವೇನು? ಒಬ್ಬರು ಜೊತೆ ಇನ್ನೋಬ್ಬರು ಮಾತನಾಡಿದಾಗ ಉಸಿರಾಟದ ಮೂಲಕ ಸೋಂಕು ಹರಡುತ್ತದೆ ಎನ್ನಲಾಗಿತ್ತು. ಹಾಗಾಗಿ ಮಾಸ್ಕ್ (mask) ಕೂಡ ಹಾಕಲಾಗುತ್ತಿತ್ತು. ಅಲ್ಲದೆ, ಕೋವಿಡ್ ಸೋಂಕು ಹನಿಗಳ ಮೂಲಕ ಹಬ್ಬುತ್ತದೆ ಎಂದು ನಂಬಲಾಗಿದೆ. ಆದರೆ ಭಾರತೀಯ ಮೂಲದ ಸಂಶೋಧಕರೊಬ್ಬರು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಕೋವಿಡ್ ಸೋಂಕು ಹರಡಲು ಕೈ ಹಾಗೂ ಗೃಹಬಳಕೆ ವಸ್ತುಗಳು ಕೂಡ ಕಾರಣ ಎಂಬ ಮಾಹಿತಿ ಬಹಿರಂಗವಾಗಿದೆ.

ಜನರ ಕೈಗಳು ಹಾಗೂ ಗೃಹಬಳಕೆ ವಸ್ತುಗಳಿಂದ SARS-Cov-2 ಹೇಗೆ ಹರಡುತ್ತದೆ ಎಂಬುದನ್ನು ‘ದಿ ಲ್ಯಾನ್ಸೆಟ್ ಮೈಕ್ರೋಬ್ ನಲ್ಲಿ ಪ್ರಕಟಗೊಂಡ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದ್ದು, “ನಿಮಗೆ ಕೋವಿಡ್ 19 ಸೋಂಕು ತಗುಲಿದ್ದರೆ ನೀವು ಈ ವೈರಾಣುವನ್ನು ಮೈಕ್ರೋ-ಏರೋಸಾಲ್‌ಗಳ ಮೂಲಕ ಗಾಳಿಯಲ್ಲಿ ಹಬ್ಬಿಸುತ್ತಿರುವಿರಿ. ಅಲ್ಲದೆ, ನಿಮ್ಮ ಕೈಗಳ ಮೇಲೆ ಬೀಳುವ ಗೊಣ್ಣೆಯ ಹನಿಗಳು ಹಾಗೂ ನಿಮ್ಮ ಸುತ್ತಲಿನ ನೆಲದ ಮೇಲೂ ನೀವು SARS-Cov-2 ಸೋಂಕನ್ನು ಈ ವೇಳೆ ಹಬ್ಬಿಸುತ್ತಿದ್ದೀರಿ,” ಎಂದು ಇಂಪೀರಿಯಲ್ ಕಾಲೇಜ್ ಆಫ್ ಲಂಡನ್‌ನ ಪ್ರಾಧ್ಯಾಪಕ ಅಜಿತ್ ಲಲ್ವಾನಿ ನೇತೃತ್ವದ ಅಧ್ಯಯನ ತಂಡ ತಿಳಿಸಿದೆ.

ಸೋಂಕಿತರ ಕೈಗಳಲ್ಲಿ SARS-CoV-2 ವೈರಾಣುಗಳಿದ್ದಾಗ ಅವರಿಂದ ಬೇರೆಯವರಿಗೆ ಸೋಂಕು ಹರಡುವ, ಕೈಗಳ ಮೇಲೆ ಸೂಕ್ಷ್ಮಜೀವಿಗಳು ಇಲ್ಲದಿದ್ದಾಗ ಹರಡುವ ಸಾಧ್ಯತೆ 1.7 ಪಟ್ಟು ಇರುತ್ತದೆ. ಸೋಂಕಿತರು ತಮ್ಮ ಮನೆಯಲ್ಲಿರುವ ವಸ್ತುಗಳು ಕೈಗಳಿಂದ ಮುಟ್ಟಿದ್ದರೆ ಅದರಿಂದ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆ 3.8 ಪಟ್ಟಿನಷ್ಟಿರುತ್ತದೆ ಎಂದು ಅಧ್ಯಯನದ ವರದಿ ತಿಳಿಸಿದೆ.

1 Comment
  1. binance says

    Thanks for sharing. I read many of your blog posts, cool, your blog is very good.

Leave A Reply

Your email address will not be published.